Job Latest Updates: ಸಹಾಯಕ ಶಿಕ್ಷಕರು ಹುದ್ದೆಗಳ ಫಲಿತಾಂಶ ಪ್ರಕಟ
ಅಭ್ಯರ್ಥಿಗಳು ಫಲಿತಾಂಶದ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸುವುದು. ಪರೀಕ್ಷಾ ಫಲಿತಾಂಶ ಸಂಬಂಧಿತ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0836-2215261, 2215375 ಹಾಗೂ ಇನ್ನಿತರ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2215349 ಗೆ ಸಂಪರ್ಕಿಸಬಹುದು
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಮಾಧ್ಯಮಿಕ ಶಾಲೆಯಲ್ಲಿನ 05 ರಿಂದ 12 ನೇ ತರಗತಿಯವರೆಗೆ ಹಾಗೂ ಪ್ರಾಯೋಗಿಕ ಪ್ರಾಥಮಿಕ ಕನ್ನಡ ಶಾಲೆಯಲ್ಲಿನ 01 ರಿಂದ 05 ನೇ ತರಗತಿಯವರೆಗೆ ಸಹಾಯಕ ಶಿಕ್ಷಕರು ಹುದ್ದೆಗಳನ್ನು (ಸಂಗೀತ ಶಿಕ್ಷಕರು. ಸಹಾಯಕ ಹೌಸ್ ಮಾಸ್ಟರ್-ಕಂ- ಸಹಾಯಕ ಶಿಕ್ಷಕರು ಮತ್ತು ಸಹಾಯಕ ಹೌಸ್ ಮಾಸ್ಟರ್ ಹುದ್ದೆಗಳನ್ನು ಹೊರತುಪಡಿಸಿ) ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ಜೂನ್ 27, 2024 ರಿಂದ ಜೂನ್ 29, 2024 ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಕಟ್ಟಡ ಪರೀಕ್ಷಾ ವಿಭಾಗದಲ್ಲಿ ಜರುಗಿಸಲಾಗಿದ್ದು, ಲಿಖಿತ ಪರೀಕ್ಷೆಗಳ ಫಲಿತಾಂಶವನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ಜಾಲ ತಾಣ www.kud.ac.in ದಲ್ಲಿ ಪ್ರಕಟಿಸಲಾಗಿರುತ್ತದೆ.
ಇದನ್ನೂ ಓದಿ: ಮಾನವೀಯ ಅಂತಃಕರಣದ ಪ್ರತೀಕವಾಗಿದ್ದರು ಡಾ.ಎಂ.ಎಂ. ಕಲಬುರ್ಗಿ: ನಾಡೋಜ ಗೊ. ರು. ಚನ್ನಬಸಪ್ಪ
ಅಭ್ಯರ್ಥಿಗಳು ಫಲಿತಾಂಶದ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸುವುದು. ಪರೀಕ್ಷಾ ಫಲಿತಾಂಶ ಸಂಬಂಧಿತ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0836-2215261, 2215375 ಹಾಗೂ ಇನ್ನಿತರ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2215349 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.