ನವದೆಹಲಿ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)ನಲ್ಲಿ ಖಾಲಿ ಇರುವ 300 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರೂರ್ಕೆಲಾದ ಸ್ಟೀಲ್ ಪ್ಲಾಂಟ್ (RSP)ನಲ್ಲಿ ಸಹಾಯಕ ವ್ಯವಸ್ಥಾಪಕ, ಆಪರೇಟರ್-ಕಮ್-ಟೆಕ್ನಿಷಿಯನ್ (ಬಾಯ್ಲರ್ ಆಪರೇಟರ್), ಮೈನಿಂಗ್ ಫೋರ್‌ಮ್ಯಾನ್, ಸರ್ವೇಯರ್, ಮೈನಿಂಗ್ ಮೇಟ್, ಫೈರ್ ಆಪರೇಟರ್, ಫೈರ್‌ಮ್ಯಾನ್-ಕಮ್-ಫೈರ್ ಇಂಜಿನ್ ಡ್ರೈವರ್, ಅಟೆಂಡೆಂಟ್-ಕಮ್-ಟೆಕ್ನಿಷಿಯನ್ (ಟ್ರೇನಿ), ಆಪರೇಟರ್-ಕಮ್-ಟೆಕ್ನಿಷಿಯನ್ (ಟ್ರೇನಿ) ಮತ್ತು ಅಟೆಂಡೆಂಟ್-ಕಮ್-ಟೆಕ್ನಿಷಿಯನ್ (ಟ್ರೇನಿ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.   


COMMERCIAL BREAK
SCROLL TO CONTINUE READING

ಒಡಿಶಾದ ರೂರ್ಕೆಲಾದಲ್ಲಿರುವ SAILನ ಸ್ಥಾವರ ಮತ್ತು ಇದರ ಪ್ರತ್ಯೇಕ ಗಣಿ (ಒಡಿಶಾ ಗ್ರೂಪ್ ಆಫ್ ಮೈನ್ಸ್)ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಹುದ್ದೆಗಳ ಸಂಪೂರ್ಣ ವಿವರ ಪರಿಶೀಲಿಸಿ ಸೆಪ್ಟೆಂಬರ್ 6ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿರುತ್ತದೆ. ಅಭ್ಯರ್ಥಿಯ ವಯಸ್ಸು ಎಲ್ಲಾ ಹುದ್ದೆಗಳಿಗೆ ಕನಿಷ್ಠ 18 ವರ್ಷಗಳು ಇರಬೇಕು ಮತ್ತು ಗರಿಷ್ಠ ವಯಸ್ಸಿನ ಮಿತಿ 28 ವರ್ಷ ಆಗಿರುತ್ತದೆ.


ಇದನ್ನೂ ಓದಿ: Dawood Ibrahim : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ನೀಡಿದ್ರೆ 25 ಲಕ್ಷ ಬಹುಮಾನ!


ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಹಿಂದಿ/ಇಂಗ್ಲಿಷ್‌ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಹಾಜರಾಗಬೇಕಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) 2 ಭಾಗಗಳಲ್ಲಿ ನಡೆಯಲಿದ್ದು, 100 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ತಾಂತ್ರಿಕ ಜ್ಞಾನ ಪರೀಕ್ಷೆ ಮತ್ತು ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ಇರುತ್ತದೆ.


ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ‘Careers’ ಪುಟದ ಮೂಲಕ ಅಥವಾ SAILನ ವೆಬ್‌ಸೈಟ್ www.sail.co.in At  www.sailcareers.comನಲ್ಲಿ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಯಾವುದೇ ಇತರ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಸಾಮಾನ್ಯ OBC ಮತ್ತು EWS ವರ್ಗದ ಅಭ್ಯರ್ಥಿಗಳು 700 ರೂ.ಗಳ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ SC / ST / PWD / ESM ಅಭ್ಯರ್ಥಿಗಳು 200 ರೂ.ಗಳ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ: Career Option: ರುಚಿ ರುಚಿಯಾದ ಆಹಾರ ತಯಾರಿಸುವ ಉತ್ಸಾಹವಿದೆಯೇ? ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸಿ


ಸಹಾಯಕ ವ್ಯವಸ್ಥಾಪಕರು (ಸುರಕ್ಷತೆ) ತಿಂಗಳಿಗೆ 50 ಸಾವಿರ ರೂ.ನಿಂದ 1.6 ಲಕ್ಷ ರೂ.ವರೆಗೆ, ಆಪರೇಟರ್-ಕಮ್-ಟೆಕ್ನಿಷಿಯನ್ (ಬಾಯ್ಲರ್ ಆಪರೇಟರ್) (S-3) / ಮೈನಿಂಗ್ ಫೋರ್ಮನ್ (S-3) / ಸರ್ವೇಯರ್ (S-3)  ತಿಂಗಳಿಗೆ 26,600 ರಿಂದ 38,920 ರೂ., ಮೈನಿಂಗ್ ಮೇಟ್ (S-1) – ತಿಂಗಳಿಗೆ 25,070ರಿಂದ 35,070 ರೂ., ಫೈರ್ ಆಪರೇಟರ್ (ಟ್ರೇನಿ) (S-3)/ ಆಪರೇಟರ್-ಕಮ್-ಟೆಕ್ನಿಷಿಯನ್ (ಟ್ರೇನಿ) (S-3) - 1ನೇ ವರ್ಷ 16,100 ರೂ. 2ನೇ ವರ್ಷಕ್ಕೆ 18,300 ರೂ. ಹಾಗೂ ಫೈರ್‌ಮ್ಯಾನ್-ಕಮ್-ಫೈರ್ ಇಂಜಿನ್ ಡ್ರೈವರ್ (ಟ್ರೇನಿ) (S-1) / ಅಟೆಂಡೆಂಟ್-ಕಮ್-ಟೆಕ್ನಿಷಿಯನ್ (ಟ್ರೇನಿ) (S-1) / ಅಟೆಂಡೆಂಟ್-ಕಮ್-ಟೆಕ್ನಿಷಿಯನ್ ( ಟ್ರೈನಿ) (HMV) (S-1) ಮೊದಲ ವರ್ಷಕ್ಕೆ 12,900 ರೂ. ಮತ್ತು 2ನೇ ವರ್ಷಕ್ಕೆ 15,000 ರೂ. ಸಂಬಳ ಇರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.