Dawood Ibrahim : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ನೀಡಿದ್ರೆ 25 ಲಕ್ಷ ಬಹುಮಾನ!

ಇದರಲ್ಲಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್ ವಿರುದ್ಧ ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೋ ಭಯೋತ್ಪಾದನೆ, ಭೂಗತ ಪಾತಕಿ ಸಿಂಡಿಕೇಟ್, ಅಕ್ರಮ ಭೂಕಬಳಿಕೆ ಜೊತೆಗೆ ಅಕ್ರಮ ಹಣ ವರ್ಗಾವಣೆ ಆರೋಪಗಳಿವೆ.

Written by - Channabasava A Kashinakunti | Last Updated : Sep 1, 2022, 01:17 PM IST
  • ಭೂಗತ ಪಾತಕಿ ದಾವೂದ್ ಇಬ್ರಾಹಿಂ
  • ದಾವೂದ್ ಇಬ್ರಾಹಿಂ ಬಗ್ಗೆ ಸುಳಿವು ನೀಡಿದವರಿಗೆ 25 ಲಕ್ಷ ರೂ. ಬಹುಮಾನ
  • ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯನ್ನು ತನ್ನ ನೆಲೆ
Dawood Ibrahim : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ನೀಡಿದ್ರೆ 25 ಲಕ್ಷ ಬಹುಮಾನ! title=

Dawood Ibrahim Case : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ದಾವೂದ್‌ನ ಹಿಂಬಾಲಕರಿಗೆ ತನಿಖಾ ಸಂಸ್ಥೆ ಬಹುಮಾನವನ್ನೂ ಘೋಷಿಸಿದೆ. ಈ ವರ್ಷ ಫೆಬ್ರವರಿ 3 ರಂದು ಎನ್‌ಐಎ ಎಫ್‌ಐಆರ್ ದಾಖಲಿಸಿತ್ತು. ಇದರಲ್ಲಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್ ವಿರುದ್ಧ ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೋ ಭಯೋತ್ಪಾದನೆ, ಭೂಗತ ಪಾತಕಿ ಸಿಂಡಿಕೇಟ್, ಅಕ್ರಮ ಭೂಕಬಳಿಕೆ ಜೊತೆಗೆ ಅಕ್ರಮ ಹಣ ವರ್ಗಾವಣೆ ಆರೋಪಗಳಿವೆ.

ದಾವೂದ್‌ನ ಹಿಂಬಾಲಕರಿಗೆ ಬಹುಮಾನ

ಇದಲ್ಲದೇ ಎಫ್‌ಐಆರ್‌ನಲ್ಲಿ ಜೈಶ್ ಮತ್ತು ಅಲ್ ಖೈದಾದಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆಯೂ ಉಲ್ಲೇಖವಿದೆ. ಇದೀಗ ಈ ಪ್ರಕರಣದಲ್ಲಿ ಈ ಎಲ್ಲ ಕುಖ್ಯಾತ ಭಯೋತ್ಪಾದಕರಿಗೆ ಎನ್‌ಐಎ ಬಹುಮಾನ ಘೋಷಿಸಿದೆ. ದಾವೂದ್ ಇಬ್ರಾಹಿಂಗೆ 25 ಲಕ್ಷ ರೂಪಾಯಿ, ಛೋಟಾ ಶಕೀಲ್‌ಗೆ 20 ಲಕ್ಷ ರೂಪಾಯಿ, ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್‌ಗೆ ತಲಾ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಇದನ್ನೂ ಓದಿ : ಕೇವಲ ಒಂದು ಹಪ್ಪಳಕ್ಕಾಗಿ ರಣಾಂಗಣವಾಯಿತು ಮದುವೆ ಮನೆ, ಹೊಡೆದಾಟದ ವಿಡಿಯೋ ಇಲ್ಲಿದೆ

ಕರಾಚಿಯಲ್ಲಿ ನೆಲೆ ದಾವೂದ್‌ನ 

ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡಿದ್ದಾನೆ. 1993ರ ಮುಂಬೈ ಬಾಂಬ್ ಸ್ಫೋಟದ ಹೊರತಾಗಿ, ಭಾರತದಲ್ಲಿ ನಡೆದ ಹಲವು ಭಯೋತ್ಪಾದನಾ ಚಟುವಟಿಕೆಗಳ ಹಿಂದೆ ದಾವೂದ್ ಇದ್ದಾನೆ. 2003 ರಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅವನ ಮೇಲೆ $25 ಮಿಲಿಯನ್ ಬಹುಮಾನವನ್ನು ಘೋಷಿಸಿತು. ಹಫೀಜ್ ಸಯೀದ್, ಮೌಲಾನಾ ಮಸೂದ್ ಅಜರ್, ಸೈಯದ್ ಸಲಾವುದ್ದೀನ್, ಅಬ್ದುಲ್ ರೌಫ್ ಅಸ್ಗರ್ ಜೊತೆಗೆ ದಾವೂದ್ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರಲ್ಲಿ ಒಬ್ಬ.

ಮುಂದುವರಿದಿದೆ ಎನ್ಐಎ ಹುಡುಕಾಟ

ಮೇ ತಿಂಗಳಲ್ಲಿ ಎನ್‌ಐಎ ಮುಂಬೈನಿಂದ ಡಿ ಕಂಪನಿಯ ಇಬ್ಬರು ಸಹಚರರನ್ನು ಬಂಧಿಸಿತ್ತು. ಬಂಧಿತ ಆರೋಪಿಗಳಿಬ್ಬರೂ ಮುಂಬೈನ ಪಶ್ಚಿಮ ಉಪನಗರಗಳಲ್ಲಿ ಡಿ-ಕಂಪನಿಗೆ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವಲ್ಲಿ ತೊಡಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ, ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಕ್ರಿಮಿನಲ್ ಸಿಂಡಿಕೇಟ್ ನಡೆಸುತ್ತಿರುವ ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್‌ನ ನಿಕಟ ಸಹಚರ ಮತ್ತು ಸುಲಿಗೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಾರತದಲ್ಲಿ ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ಮೇ ತಿಂಗಳಿನಲ್ಲಿಯೇ, ದಾವೂದ್ ಇಬ್ರಾಹಿಂ ಸಹಚರರು, ಡ್ರಗ್ ಪೆಡ್ಲರ್‌ಗಳು ಮತ್ತು ಹವಾಲಾ ಆಪರೇಟರ್‌ಗಳಿಗೆ ಸಂಬಂಧಿಸಿದ ಮುಂಬೈನ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿತು. ನಾಗ್ಪಾಡಾ, ಭೆಂಡಿ ಬಜಾರ್, ಮಜಗಾಂವ್, ಪರೇಲ್, ಮಾಹಿಮ್, ಸಾಂತಾಕ್ರೂಜ್, ಕುರ್ಲಾ, ಗೋರೆಗಾಂವ್, ಬೊರಿವಲಿ, ಮುಂಬ್ರಾ (ಥಾಣೆ) ಮತ್ತು ಮುಂಬೈ ಮತ್ತು ಥಾಣೆಯ ಇತರ ಸ್ಥಳಗಳಲ್ಲಿ ಎನ್‌ಐಎ ತಂಡಗಳು ಒಟ್ಟಾಗಿ ದಾಳಿ ನಡೆಸಿವೆ.

ಇದನ್ನೂ ಓದಿ : Train Ticket Lost: ರೈಲು ಟಿಕೆಟ್ ಕಳೆದು ಹೋದರೆ ಏನು ಮಾಡಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News