ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2024 ರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ cetonline.karnataka.gov.in ಮೂಲಕ ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.  


COMMERCIAL BREAK
SCROLL TO CONTINUE READING

2024-25 ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಬೋರ್ಡ್‌ನ ದ್ವಿತೀಯ ಪಿಯುಸಿ ಪರೀಕ್ಷೆ 2 ಫಲಿತಾಂಶ ಬಂದ ನಂತರ ಜೂನ್‌ 1 ಅಥವಾ 3 ರಂದು ಸಿಇಟಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಹೇಳಿತ್ತು. 12ನೇ ತರಗತಿಯ ಶೇಕಡ.50 ಅಂಕಗಳನ್ನು ಪರಿಗಣಿಸಿ KCET 2024 Ranking ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿತ್ತು. 


ಇದನ್ನೂ ಓದಿ: JEE ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..! ಇಲ್ಲಿದೆ ಸಂಪೂರ್ಣ ವಿವರ


ಈ ಅರ್ಹತಾ ಪರೀಕ್ಷೆಯ ರಿಸಲ್ಟ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18, 19 ರಂದು ಸಿಇಟಿ ಪರೀಕ್ಷೆ ನಡೆಸಿತ್ತು. ಇದರ ಫಲಿತಾಂಶವು ಜೂನ್‌ 1 ಅಥವಾ 3 ರಂದು ಪ್ರಕಟವಾಗಲಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ತಮ್ಮ ಸಿಇಟಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕದ ಮಾಹಿತಿ ನೀಡಿ ಲಾಗಿನ್ ಆಗಿ ರಿಸಲ್ಟ್‌ ಚೆಕ್‌ ಮಾಡಬಹುದು.


KCET 2024 ಫಲಿತಾಂಶಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? 


ಹಂತ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಪೋರ್ಟಲ್ https://cetonline.karnataka.gov.in/kea ಗೆ ಹೋಗಿ.


ಹಂತ 2: ಮುಖಪುಟದಲ್ಲಿ "KCET ಫಲಿತಾಂಶಗಳು 2024" ಎಂದು ಲೇಬಲ್ ಮಾಡಲಾದ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.


ಹಂತ 3: ಗೊತ್ತುಪಡಿಸಿದ ಕ್ಷೇತ್ರಗಳಲ್ಲಿ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳೊಂದಿಗೆ ನಿಮ್ಮ KCET ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.


ಹಂತ 4: ಮುಂದುವರೆಯಲು "Submit" ಮೇಲೆ ಕ್ಲಿಕ್ ಮಾಡಿ.


ಹಂತ 5: 2024 ರ ನಿಮ್ಮ KCET ಫಲಿತಾಂಶವನ್ನು ಪರದೆಯ ಮೇಲೆ ಬರುತ್ತದೆ.


ಹಂತ 6: ಈ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ಔಟ್‌ ತೆಗೆದಿಟ್ಟುಕೊಳ್ಳಿ.


ಇದನ್ನೂ ಓದಿ:ಎನ್‌ಐಎ ಮಾಜಿ ಡಿಜಿ ದಿನಕರ್ ಗುಪ್ತಾ ಅವರಿಗೆ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.