ಬೆಂಗಳೂರು : ಜೂನ್ 3 ಅಥವಾ 4ನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸುವ ಕುರಿತು ಪಿಯು ಬೋರ್ಡ್ ತಾತ್ಕಾಲಿಕ ದಿನಾಂಕ ಸಿದ್ದಪಡಿಸಿದೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿದಿದ ನಿರ್ದೇಶಕ ಆರ್.ರಾಮಚಂದ್ರನ್, ಮೂರನೇ ವಾರವಾದ್ರೆ, ಜೂ.24, ಕೊನೆ ವಾರವಾದ್ರೆ ಜೂ.28ಕ್ಕೆ ಫಲಿತಾಂಶ ನೀಡಲು ಸಿದ್ದತೆ ಮಾಡಿಕೊಂಡಿದೆ. ಎಸ್​ಎಸ್​ಎಲ್​ಸಿ ಫಲಿತಾಂಶದ ರೀತಿಯೇ ವಿದ್ಯಾರ್ಥಿಗಳ ಮೊಬೈಲ್ ಗೆ ಮೆಸೇಜ್ ಮೂಲಕ ಫಲಿತಾಂಶ ಕಳುಹಿಸಲಿದೆ. ಏಪ್ರಿಲ್ 22 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯು ಪರೀಕ್ಷೆ ನಡೆಸಲಾಗಿತ್ತು. ಸದ್ಯ ಮೌಲ್ಯಮಾಪನ ಕಾರ್ಯ ಅರ್ಧದಷ್ಟು ಮುಗಿದಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಕಾಂಗ್ರೆಸ್‌ನಲ್ಲಿ ಮುಂದುವರೆದ ಗುಡ್‌ ಬೈ ಪರ್ವ: ಬ್ರಿಜೇಶ್‌ ಕಾಳಪ್ಪ ರಾಜೀನಾಮೆ ನೀಡಲು ಇದುವೇ ಕಾರಣ!


ಒಟ್ಟು 6,84,255 ವಿದ್ಯಾರ್ಥಿಗಳು ಈ ಬಾರೀ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಫಲಿತಾಂಶ ನೀಡುವ ವಿಚಾರದಲ್ಲಿ ವಿಳಂಬ ಆಗೋದಿಲ್ಲ. ಹೆಚ್ಚು ಉಪನ್ಯಾಸಕರನ್ನ ಬಳಸಿಕೊಂಡು ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿದೆ. ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಯಾವುದೇ ತೊಂದರೆ ಆಗೊಲ್ಲ. ಸಚಿವರು ಸಮಯ ಸಿಕ್ಕ ಬಳಿಕ ಫಲಿತಾಂಶದ ದಿನಾಂಕ ಪ್ರಕಟ ಮಾಡಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ ಜೂನ್ 3ನೇ ವಾರವೇ ಫಲಿತಾಂಶ ಪ್ರಕಟಿಸಲ್ಗುವುದು ಎಂದು ತಿಳಿಸಿದ್ದಾರೆ. 


ರಾಜ್ಯಾದಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 6,00,519 ರೆಗ್ಯುಲರ್ ವಿದ್ಯಾರ್ಥಿಗಳಿದ್ದರೆ, 61,808 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.

ವಿಭಾಗವಾರು ವಿದ್ಯಾರ್ಥಿಗಳ ಮಾಹಿತಿ


ವಿಜ್ಞಾನ ವಿಭಾಗ-2,10,569
ವಾಣಿಜ್ಯ ವಿಭಾಗ - 2,45,519
ಕಲಾ ವಿಭಾಗ - 2,28,167


ಇದನ್ನೂ ಓದಿ : IT Raid : ರಾಜ್ಯದ ಉದ್ಯಮಿಗಳಿಗೆ ಐಟಿ ಶಾಕ್! 600 ಅಧಿಕಾರಿಗಳ, 50ಕ್ಕೂ ಹೆಚ್ಚು ಕಡೆ ದಾಳಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ