ಕಾಂಗ್ರೆಸ್‌ನಲ್ಲಿ ಮುಂದುವರೆದ ಗುಡ್‌ ಬೈ ಪರ್ವ: ಬ್ರಿಜೇಶ್‌ ಕಾಳಪ್ಪ ರಾಜೀನಾಮೆ ನೀಡಲು ಇದುವೇ ಕಾರಣ!

1997ರಲ್ಲಿ ಆರಂಭವಾದ ಕಾಂಗ್ರೆಸ್​​ನೊಂದಿಗಿನ ಒಡನಾಟಕ್ಕೆ ಕಾಳಪ್ಪ ಅವರು ಫುಲ್‌ಸ್ಟಾಪ್‌ ಇಟ್ಟಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 

Written by - Bhavishya Shetty | Last Updated : Jun 1, 2022, 02:22 PM IST
  • ಕಾಂಗ್ರೆಸ್‌ನ ಮತ್ತೊಂದು ನಾಯಕ ರಾಜೀನಾಮೆ
  • ರಾಜೀನಾಮೆ ನೀಡಿದ ಬ್ರಿಜೇಶ್‌ ಕಾಳಪ್ಪ
  • ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಕಾಂಗ್ರೆಸ್‌ನಲ್ಲಿ ಮುಂದುವರೆದ ಗುಡ್‌ ಬೈ ಪರ್ವ: ಬ್ರಿಜೇಶ್‌ ಕಾಳಪ್ಪ ರಾಜೀನಾಮೆ ನೀಡಲು ಇದುವೇ ಕಾರಣ!  title=
Brijesh Kalappa

ಬೆಂಗಳೂರು: ಕೆಪಿಸಿಸಿ ವಕ್ತಾರ, ಕಾಂಗ್ರೆಸ್‌ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ವಕೀಲರಾಗಿದ್ದ ಬ್ರಿಜೇಶ್‌ ಕಾಳಪ್ಪ ಇಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಬ್ರಿಜೇಶ್‌ ಕಾಳಪ್ಪ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಬೇಸರಗೊಂಡ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಪಕ್ಷದಲ್ಲಿ ಇಷ್ಟು ವರ್ಷ ನಾನಾ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದ. 2014 ಮತ್ತು 2019ರ ಸೋಲಿನ ಬಳಿಕ ಪಕ್ಷಕ್ಕೆ ಕೆಟ್ಟ ಸಮಯ ಬಂದರೂ ನಾನು ಉತ್ಸಾಹವನ್ನು ಕಳೆದುಕೊಂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಉತ್ಸಾಹ ಕಳೆದುಕೊಂಡಿದ್ದೇನೆ. ಹೀಗಾಗಿ 1997 ರಿಂದ ಆರಂಭವಾದ ಪಕ್ಷ ನಂಟಿಗೆ ಕೊನೆ ಹೇಳುತ್ತಿದ್ದು, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ. 

ಇದನ್ನು ಓದಿ: ರಾಜ್ಯದ ಉದ್ಯಮಿಗಳಿಗೆ ಐಟಿ ಶಾಕ್! 600 ಅಧಿಕಾರಿಗಳು, 50ಕ್ಕೂ ಹೆಚ್ಚು ಕಡೆ ದಾಳಿ!

1997ರಲ್ಲಿ ಆರಂಭವಾದ ಕಾಂಗ್ರೆಸ್​​ನೊಂದಿಗಿನ ಒಡನಾಟಕ್ಕೆ ಕಾಳಪ್ಪ ಅವರು ಫುಲ್‌ಸ್ಟಾಪ್‌ ಇಟ್ಟಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 

"2013ರ ಯುಪಿಎ ಸರ್ಕಾರದ ಅವಧಿಯಿಂದ ಇದುವರೆಗೂ ಸುಮಾರು 6,497 ಚರ್ಚೆಗಳಲ್ಲಿ ಹಿಂದಿ, ಇಂಗ್ಲೀಷ್​ ಮತ್ತು ಕನ್ನಡ ಚಾನೆಲ್​​ಗಳಲ್ಲಿ ಪಕ್ಷವನ್ನು ಪ್ರತಿನಿಧಿಸಿದ್ದೇನೆ. ಅಲ್ಲದೇ ಪಕ್ಷ ತಮಗೆ ವಹಿಸಿಕೊಟ್ಟಿದ್ದ ರಾಜಕೀಯ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ" ಎಂದು ಹೇಳಿದ್ದಾರೆ. 

ಇನ್ನು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಕಾಂಗ್ರೆಸ್‌ ಪಕ್ಷದ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಕಾಳಪ್ಪ ಅವರ ಹುಟ್ಟೂರಾದ ಕೊಡಗು ಜಿಲ್ಲೆಯ ಮಡಿಕೇರಿ ಅಥವಾ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು. 2018 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರಿಗೆ ಟಿಕೆಟ್ ಕೈ ಬಿಟ್ಟು, ಅದನ್ನು ರಾಜ್ಯದ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್ ಎಸ್ ಚಂದ್ರಮೌಳಿ ಅವರಿಗೆ ನೀಡಲಾಯಿತು.

ರಾಜೀನಾಮೆ ಪ್ರತಿಯಲ್ಲಿ ಏನಿದೆ? 
"ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದೇಶದಲ್ಲೆ ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷಕ್ಕೆ ನಾನು ವ್ಯಾಪಕ ನೆಲೆಯಲ್ಲಿ ಜನಸೇವೆ ಮಾಡುವ ಆಶಯದಿಂದ ಸೇರ್ಪಡೆ ಹೊಂದಿದೆ. ಪಕ್ಷಕ್ಕೆ ಸೇರಿದಾಗಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆಂಬ ತೃಪಿಯಿದೆ. ಸದ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Viral Photo: ಸುವರ್ಣಸೌಧದ ಮುಂಭಾಗ ಶ್ಯಾವಿಗೆ ಒಣಹಾಕಿದ ಮಹಿಳೆ

ಇನ್ನು ಬೇರೆ ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್‌ನ ಹಿರಿಯ ನಾಯಕರು ಕೆಲ ಅಸಮಾಧಾನಗಳನ್ನು ಹೊರ ಹಾಕಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News