ಬೆಂಗಳೂರು : ಕೆ-ಸೆಟ್-24 ಪರೀಕ್ಷೆಗೆ ಸಂಬಂಧಿಸಿದಂತೆ 41 ವಿಷಯಗಳ ತಾತ್ಕಾಲಿಕ ಅಂಕಪಟ್ಟಿ ಪ್ರಕಟವಾಗಿದೆ. ಅಭ್ಯರ್ಥಿಗಳು ಪಡೆದ ಅಂಕಗಳ ತಾತ್ಕಾಲಿಕ ಪಟ್ಟಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬಿಡುಗಡೆ ಮಾಡಿದೆ. ಫಲಿತಾಂಶವನ್ನು ಕೆಇಎ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ಈ ವೆಬ್ ಸೈಟ್ ಗೆ ಲಾಗಿನ್‌ ಆಗುವ ಮೂಲಕ  ಫಲಿತಾಂಶವನ್ನು ಚೆಕ್‌ ಮಾಡಬಹುದು.


COMMERCIAL BREAK
SCROLL TO CONTINUE READING

ಕೆಸೆಟ್‌ 2024 ಪ್ರಾವಿಷನಲ್ ರಿಸಲ್ಟ್‌ ಚೆಕ್‌ ಹೇಗೆ ಮಾಡೋದು? : 


ವಿಷಯವಾರು ತಾತ್ಕಾಲಿಕ ಅಂಕಪಟ್ಟಿ ಫಲಿತಾಂಶಕ್ಕಾಗಿ https://cetonline.karnataka.gov.in/kea/kset2024 ವೆಬ್‌ಪೇಜ್‌ನಲ್ಲಿ ‘KSET 2024 ಫಲಿತಾಂಶ ಪಟ್ಟಿ’ ಎಂದಿರುವ ಲಿಂಕ್‌ ಕ್ಲಿಕ್ ಮಾಡಬೇಕು. 


ಇದನ್ನೂ ಓದಿ : Amazonನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹು ದೊಡ್ಡ ಅವಕಾಶ !ಕಂಪನಿಯಲ್ಲಿ ಸೃಷ್ಟಿಯಾಗಿದೆ 20 ಲಕ್ಷ ಹುದ್ದೆ


ಫಲಿತಾಂಶ ಚೆಕ ಮಾಡುವ ಹಂತ ಹಣತದ ವಿಧಾನ: 
೧. ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.
೨. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ ( ಕೆಸೆಟ್ - 2024) ಆಯ್ಕೆ ಮಾಡಿ ಕ್ಲಿಕ್ ಮಾಡಿ.
೩. ತಾತ್ಕಾಲಿಕ ಫಲಿತಾಂಶ ಚೆಕ್‌ ಮಾಡಲು ’ KSET 2024 ಪ್ರಾವಿಶನಲ್ ಫಲಿತಾಂಶ ಲಿಂಕ್’  ಕ್ಲಿಕ್ ಮಾಡಿ.
೪.ಅಪ್ಲಿಕೇಶನ್‌ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ.
೫. Submit ಕೊಟ್ಟರೆ ತಾತ್ಕಾಲಿಕ ಫಲಿತಾಂಶ ಕಾಣಿಸುತ್ತದೆ. 


ಆಕ್ಷೇಪಣೆ ಸಲ್ಲಿಸಲೂ ಇದೆ ಅವಕಾಶ : 
ಈ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಕೂಡಾ ಕೆಇಎ ಲಿಂಕ್ ಬಿಡುಗಡೆ ಮಾಡಿದೆ. ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಒದಗಿಸಲಾದ ಲಿಂಕ್ ಮೂಲಕ  ನಾಳೆಯೊಳಗೆ ಅಂದರೆ 19-12-2024 ಮಧ್ಯಾಹ್ನ 12.30 ರೊಳಗೆ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಈ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರದಲ್ಲಿ ವಿಷಯವಾರು ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು  ಡಿಸೆಂಬರ್  13 ರಂದು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಇದೀಗ ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.