KVS Recruitment 2022: ಕೇಂದ್ರೀಯ ವಿದ್ಯಾಲಯದಲ್ಲಿ 13,000ಕ್ಕೂ ಹೆಚ್ಚು ಖಾಲಿ ಹುದ್ದೆಗಳು, 12ನೇ ತರಗತಿ ಪಾಸ್ ಆದವರೂ ಅಪ್ಲೈ ಮಾಡಬಹುದು!
KVS Recruitment 2022: ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕೇಂದ್ರೀಯ ವಿದ್ಯಾಲಯದಲ್ಲಿ 13,000 ಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಇಂದಿನಿಂದ (ಡಿಸೆಂಬರ್ 05) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, 26 ಡಿಸೆಂಬರ್ 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
KVS Recruitment 2022: ಕೇಂದ್ರೀಯ ವಿದ್ಯಾಲಯ ಸಂಘಟನೆಯು 13,000 ಕ್ಕೂ ಹೆಚ್ಚು ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿರುವ ಅರ್ಹ ಆಸಕ್ತ ಅಭ್ಯರ್ಥಿಗಳು ಕೆವಿಎಸ್ ಅಧಿಕೃತ ವೆಬ್‌ಸೈಟ್‌ಗೆ kvsangathan.nic.in ಭೇಟಿ ನೀಡುವ ಮೂಲಕ ಆನ್‌ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಕೇಂದ್ರೀಯ ವಿದ್ಯಾಲಯ ನೇಮಕಾತಿ 2022 ಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಇಂದಿನಿಂದ ಅಂದರೆ ಡಿಸೆಂಬರ್ 05 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 26 ಡಿಸೆಂಬರ್ 2022 ರ ಮೊದಲು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
ಕೆವಿಎಸ್ ಪ್ರಾಥಮಿಕ ಪದವೀಧರ ಶಿಕ್ಷಕರು, ತರಬೇತಿ ಪಡೆದ ಪದವೀಧರ ಶಿಕ್ಷಕರು, ತರಬೇತಿ ಪಡೆದ ಪದವೀಧರ ಶಿಕ್ಷಕರು, ಸ್ನಾತಕೋತ್ತರ ಶಿಕ್ಷಕರು, ಪಿಆರ್‌ಟಿ ಸಂಗೀತ, ಸಹಾಯಕ ಪ್ರಾಂಶುಪಾಲರಂತಹ ಬೋಧಕ ಹುದ್ದೆಗಳು ಮತ್ತು ಹಲವು ಬೋಧಕೇತರ ಹುದ್ದೆಗಳು ಸೇರಿದಂತೆ 13404 ಹುದ್ದೆಗಳ ನೇಮಕಾತಿಗಾಗಿ ಕೇಂದ್ರೀಯ ವಿದ್ಯಾಲಯ ಸಂಘಟನೆಯಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಇದನ್ನೂ ಓದಿ- ಉದ್ಯೋಗದ ನೆರವಿಗಾಗಿ ಸ್ಕಿಲ್ ಕನೆಕ್ಟ್ ಅಧಿಕೃತ ವೆಬ್‌ಸೈಟ್ ಆರಂಭ
ಕೆವಿಎಸ್ ನೇಮಕಾತಿ 2022- ಹುದ್ದೆಗಳ ವಿವರ ಇಂತಿದೆ:-
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ - 13,404 ಹುದ್ದೆಗಳು
* ಪ್ರಾಥಮಿಕ ಶಿಕ್ಷಕರು: 6414 ಹುದ್ದೆಗಳು
* TGT: 3176 ಪೋಸ್ಟ್‌ಗಳು
* PGT: 1409 ಪೋಸ್ಟ್‌ಗಳು
* ಗ್ರಂಥಪಾಲಕರು: 355 ಹುದ್ದೆಗಳು
* ಪ್ರಾಥಮಿಕ ಶಿಕ್ಷಕ (ಸಂಗೀತ): 303 ಪೋಸ್ಟ್‌ಗಳು
* ಪ್ರಿನ್ಸಿಪಾಲ್: 239 ಪೋಸ್ಟ್ಗಳು
* ವೈಸ್ ಪ್ರಿನ್ಸಿಪಾಲ್: 203 ಹುದ್ದೆಗಳು
* ಸಹಾಯಕ ವಿಭಾಗ ಅಧಿಕಾರಿ: 156 ಹುದ್ದೆಗಳು
* ಸಹಾಯಕ ಆಯುಕ್ತರು: 52 ಹುದ್ದೆಗಳು
* ಹಣಕಾಸು ಅಧಿಕಾರಿ: 6 ಹುದ್ದೆಗಳು
* ಸಹಾಯಕ ಇಂಜಿನಿಯರ್: 2 ಹುದ್ದೆಗಳು
* ಹಿಂದಿ ಅನುವಾದಕ: 11 ಪೋಸ್ಟ್‌ಗಳು
* ಹಿರಿಯ ಸೆಕ್ರೆಟರಿಯೇಟ್ ಸಹಾಯಕ: 322 ಹುದ್ದೆಗಳು
* ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್: 702 ಹುದ್ದೆಗಳು
* ಸ್ಟೆನೋಗ್ರಾಫರ್ ಗ್ರೇಡ್ II: 54 ಪೋಸ್ಟ್‌ಗಳು
ಕೆವಿಎಸ್ ನೇಮಕಾತಿ 2022- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:
ಮೇಲಿನ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು. ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಇದನ್ನೂ ಓದಿ- RPF Recruitment 2022: 9500 ಕಾನ್‌ಸ್ಟೆಬಲ್ ಮತ್ತು ASI ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೆವಿಎಸ್ ನೇಮಕಾತಿ 2022- ಆಯ್ಕೆ ಪ್ರಕ್ರಿಯೆ:
ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ (ಅಗತ್ಯವಿದ್ದರೆ) ನಂತರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.