ನವದೆಹಲಿ: ಹೊಸ ವರದಿಯ ಪ್ರಕಾರ, 9, 10 ಮತ್ತು 11 ನೇ ತರಗತಿಯ ಅಂಕಗಳನ್ನು 12 ನೇ ತರಗತಿಯ ಅಂತಿಮ ಅಂಕಗಳಲ್ಲಿ ಸೇರಿಸಬಹುದು ಎನ್ನಲಾಗಿದೆ. ಈ ವರದಿಯನ್ನು ಎನ್‌ಸಿಇಆರ್‌ಟಿಯ ಘಟಕವಾದ PARAKH ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಿದೆ. ದೇಶಾದ್ಯಂತ ಶಾಲಾ ಮಂಡಳಿಗಳ ಪರೀಕ್ಷೆಗಳನ್ನು ಏಕರೂಪದ ಮಾದರಿಯಲ್ಲಿ ತರಲು PARAKH ಅನ್ನು ಕಳೆದ ವರ್ಷ ರಚಿಸಲಾಗಿದೆ.


COMMERCIAL BREAK
SCROLL TO CONTINUE READING

ಹೊಸ ಶಿಕ್ಷಣ ನೀತಿಯ ಪ್ರಕಾರ, ಶಾಲಾ ಮಂಡಳಿಯ ಪರೀಕ್ಷೆಗಳನ್ನು ಏಕರೂಪವಾಗಿಸಲು, ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಗಣಿಸಲು ಮತ್ತು ಶಿಕ್ಷಕರನ್ನು ಸುಧಾರಿಸಲು PARAKH ಅನ್ನು ರಚಿಸಲಾಗಿದೆ. ಕಳೆದ ವರ್ಷದಲ್ಲಿ PARAKH 32 ಶಾಲಾ ಮಂಡಳಿಗಳೊಂದಿಗೆ ಚರ್ಚೆ ನಡೆಸಿದೆ. ನಂತರ ಶಿಕ್ಷಣ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ, ಎಲ್ಲಾ ಶಾಲಾ ಮಂಡಳಿಗಳ ಪರೀಕ್ಷೆಗಳನ್ನು ಏಕರೂಪವಾಗಿಸಲು ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ.


ಇದನ್ನೂ ಓದಿ: ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?


ಮಾಧ್ಯಮ ವರದಿಯ ಪ್ರಕಾರ, 9 ನೇ ತರಗತಿಗೆ 15%, 10 ನೇ ತರಗತಿಗೆ 20%, 11 ನೇ ತರಗತಿಗೆ 25% ಮತ್ತು 12 ನೇ ತರಗತಿಗೆ 40% ವೇಟೇಜ್ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಎರಡು ರೀತಿಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಒಂದು ಪ್ರಾಜೆಕ್ಟ್, ಗ್ರೂಪ್‌ ಡಿಸ್ಕಷನ್ ಮುಂತಾದ ನಿರಂತರ ಕೆಲಸದ ಆಧಾರದ ಮೇಲೆ ಮತ್ತು ಎರಡನೆಯದು ವರ್ಷಾಂತ್ಯದ ಪರೀಕ್ಷೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. 


==> 9 ನೇ ತರಗತಿಯಲ್ಲಿ, ವರ್ಷ ಪೂರ್ತಿ ಕೊಡುವ ಪ್ರಾಜೆಕ್ಟ್‌ಗಳ ಆಧಾರದ ಮೇಲೆ 70% ಅಂಕಗಳನ್ನು ನಿರ್ಧರಿಸಲಾಗುತ್ತದೆ ಮತ್ತು 30% ಅಂಕಗಳನ್ನು ಪರೀಕ್ಷೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.


==> 10 ನೇ ತರಗತಿಯಲ್ಲಿ, ವರ್ಷ ಪೂರ್ತಿ ಕೊಡುವ ಪ್ರಾಜೆಕ್ಟ್‌ಗಳ ಆಧಾರದ ಮೇಲೆ 50% ಅಂಕಗಳನ್ನು ನಿರ್ಧರಿಸಲಾಗುತ್ತದೆ ಮತ್ತು 50% ಅಂಕಗಳನ್ನು ಪರೀಕ್ಷೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.


==> 11 ನೇ ತರಗತಿಯಲ್ಲಿ, ವರ್ಷ ಪೂರ್ತಿ ಕೊಡುವ ಪ್ರಾಜೆಕ್ಟ್‌ಗಳ ಆಧಾರದ ಮೇಲೆ 40% ಅಂಕಗಳನ್ನು ನಿರ್ಧರಿಸಲಾಗುತ್ತದೆ ಮತ್ತು 60% ಅಂಕಗಳನ್ನು ಪರೀಕ್ಷೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.


==> 12 ನೇ ತರಗತಿಯಲ್ಲಿ, ವರ್ಷ ಪೂರ್ತಿ ಕೊಡುವ ಪ್ರಾಜೆಕ್ಟ್‌ಗಳ ಆಧಾರದ ಮೇಲೆ 30% ಅಂಕಗಳನ್ನು ನಿರ್ಧರಿಸಲಾಗುತ್ತದೆ ಮತ್ತು ಪರೀಕ್ಷೆಯ ಅಂಕಗಳ ತೂಕವು 70% ಆಗಿರುತ್ತದೆ. 


ಮೂಲಗಳ ಪ್ರಕಾರ, ಈ ವರದಿಯನ್ನು ಎಲ್ಲಾ ಶಾಲಾ ಆಡಳಿತ ಮಂಡಳಿಗಳೊಂದಿಗೆ ಹಂಚಿಕೊಳ್ಳಲಾಗುವುದು. ಇದಕ್ಕೆ ಅವರ ಪ್ರತಿಕ್ರಿಯೆಯನ್ನು ನೀಡಬಹುದು. ಆ ಬಳಿಕ ಇದನ್ನು ಜಾರಿಗೆ ತರಲು ಚಿಂತಿಸಲಾಗುವುದು ಎನ್ನಲಾಗಿದೆ. ವಾಸ್ತವವಾಗಿ ಈ ನಿಟ್ಟಿನಲ್ಲಿ ಕಳೆದ ವಾರ ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಬಿಹಾರದ ಶಿಕ್ಷಣ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಲಾಯಿತು.


ಇದನ್ನೂ ಓದಿ: ಮೂಗಿನಲ್ಲಿ ರಕ್ತಸ್ರಾವ, ಆಸ್ಪತ್ರೆಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸ್ಚಾರ್ಜ್


ಮೂಲಗಳ ಪ್ರಕಾರ, ಈ ಸಭೆಯಲ್ಲಿ ರಾಜ್ಯಗಳು ಈ ಯೋಜನೆಯಲ್ಲಿ ಬದಲಾವಣೆಗೆ ಒತ್ತಾಯಿಸಿವೆ. 12 ನೇ ತರಗತಿಯ ಅಂತಿಮ ಅಂಕಗಳಿಗೆ 9, 10 ಮತ್ತು 11 ನೇ ತರಗತಿಯ ಅಂಕಗಳನ್ನು ಸೇರಿಸುವ ಬದಲು 9 ನೇ ತರಗತಿಯ 40% ಮತ್ತು 10 ನೇ ತರಗತಿಯ 60% ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಅಂಕಗಳನ್ನು ಮಾಡಬೇಕು ಎಂದು ಹೇಳುತ್ತಾರೆ. ಅದೇ ರೀತಿ, 12 ನೇ ತರಗತಿಯ ಅಂತಿಮ ಅಂಕಗಳನ್ನು ರೂಪಿಸಲು 11 ನೇ ತರಗತಿಯ 40% ಮತ್ತು 12 ನೇ ತರಗತಿಯ 60% ಅಂಕಗಳು ಒಟ್ಟಿಗೆ ಕೂಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಅಂದರೆ, ಮುಂದಿನ ತಿಂಗಳು PARAKH ಈ ಹೊಸ ವಿಧಾನದ ಬಗ್ಗೆ ದೇಶದ ಇತರ ಶಾಲಾ ಮಂಡಳಿಗಳೊಂದಿಗೆ ಮಾತನಾಡಿ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತದೆ.


PARAKH ಸೂಚಿಸಿದ ಕ್ರೆಡಿಟ್‌ಗಳ ಕಲ್ಪನೆಯು ಹೊಸ ಶಿಕ್ಷಣ ನೀತಿ 2020 ರಲ್ಲಿ ಉಲ್ಲೇಖಿಸಲಾದ 'ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್' ಅನ್ನು ಆಧರಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರ ಆಧಾರದ ಮೇಲೆ 9, 10 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳ ಸಾಧನೆಗಳನ್ನು ಕ್ರೆಡಿಟ್ ಎಂದು ಪರಿಗಣಿಸಿ ಬೋರ್ಡ್ ಪರೀಕ್ಷೆಯೊಂದಿಗೆ ಜೋಡಿಸಲು ಪ್ರಸ್ತಾಪಿಸಲಾಗಿದೆ. ಈ ಬದಲಾವಣೆಯನ್ನು ಏಕಾಏಕಿ ಮಾಡಲಾಗದು, ಹೀಗಾಗಿ ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಅವರ ಅಭಿಪ್ರಾಯ ಸಂಗ್ರಹಿಸಿ, ಬಳಿಕ ಎಲ್ಲರೂ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.