NEET 2022: ನೋಂದಣಿ ದಿನಾಂಕ ವಿಸ್ತರಣೆ.. ಅರ್ಜಿ ಸಲ್ಲಿಸುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
NEET 2022: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ (NEET-UG) 2022 ನೋಂದಣಿ ಗಡುವನ್ನು ವಿಸ್ತರಿಸಿದೆ. NEET 2022 ರ ಅರ್ಜಿ ಪ್ರಕ್ರಿಯೆಯನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ.
NTA NEET 2022: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ ನೋಂದಣಿ ಗಡುವನ್ನು ವಿಸ್ತರಿಸಿದೆ. NEET 2022 ರ ಅರ್ಜಿ ಪ್ರಕ್ರಿಯೆಯನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ. ಮೊದಲು NEET ಪದವಿಪೂರ್ವ 2022 ಪರೀಕ್ಷೆಗೆ ನೋಂದಾಯಿಸಲು ಕೊನೆಯ ದಿನ ಮೇ 6 ಆಗಿತ್ತು. ವೈದ್ಯಕೀಯ ಆಕಾಂಕ್ಷಿಗಳು NTA NEET UG ಗಾಗಿ ಅಧಿಕೃತ ವೆಬ್‌ಸೈಟ್-- neet.nta.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. NTA NEET 2022 ಪರೀಕ್ಷೆಯು ಜುಲೈ 17 ರಂದು ಪೆನ್ ಮತ್ತು ಪೇಪರ್ ಆಧಾರಿತ ಪರೀಕ್ಷೆಯಾಗಿ ನಡೆಯಲಿದೆ. NEET ಪ್ರಶ್ನೆ ಪತ್ರಿಕೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು 200 ನಿಮಿಷಗಳ ಅವಧಿಯವರೆಗೆ ನಡೆಯಲಿದೆ. NEET 2022 ಅನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. NEET 2022 ಅನ್ನು ಭಾರತದ ಸುಮಾರು 543 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳಲ್ಲಿ ನಡೆಸಲಾಗುವುದು. NEET 2022 ಪರೀಕ್ಷೆಯು ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: Benefits of Raisin: ಒಣದ್ರಾಕ್ಷಿ ತಿನ್ನುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
NEET 2022 ನೋಂದಣಿ ವಿಧಾನ:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - neet.nta.nic.in
"NEET UG 2022 ಗಾಗಿ ನೋಂದಣಿಗಳು" ಲಿಂಕ್ ಅನ್ನು ಕ್ಲಿಕ್ ಮಾಡಿ
NEET 2022 ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಆನ್‌ಲೈನ್ ನೋಂದಣಿ ಶುಲ್ಕವನ್ನು ಪಾವತಿಸಿ
ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ
NEET 2022 ನೋಂದಣಿ ಅರ್ಜಿ ಶುಲ್ಕ:
NEET UG 2022 ರ ಅರ್ಜಿ ಶುಲ್ಕವನ್ನು ಈ ವರ್ಷ ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗದ ನೋಂದಣಿ ಶುಲ್ಕವನ್ನು ಕಳೆದ ವರ್ಷ 1,500 ರೂಪಾಯಿ ಇತ್ತು. ಅದನ್ನು ಈ ಬಾರಿ 1,600 ರೂಪಾಯಿಗೆ ಹೆಚ್ಚಿಸಲಾಗಿದೆ. ಭಾರತದ ಹೊರಗಿನ ಅಭ್ಯರ್ಥಿಗಳಿಗೆ ಕಳೆದ ವರ್ಷ 7,500 ರೂಪಾಯಿ ಇದ್ದ ಅರ್ಜಿ ಶುಲ್ಕ ಇದೀಗ 8,500 ರೂ. ಆಗಿದೆ. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕಗಳು, EWS/ OBC- NCL- ರೂ 1,500, SC/ ST- ರೂ 800. ಆಗಿದೆ.
ಇದನ್ನೂ ಓದಿ: Diabetes Treatment: ಡಯಾಬಿಟಿಸ್ ರೋಗಿಗಳ ಚಿಕಿತ್ಸೆ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ, ಹೇಗೆ ತಿಳಿಯಲು ಸುದ್ದಿ ಓದಿ
NEET 2022 ನೋಂದಣಿಗೆ ಅಗತ್ಯವಿರುವ ದಾಖಲೆಗಳು:
10 kb ಮತ್ತು 200 kb ಗಾತ್ರದ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರದ ಸ್ಕ್ಯಾನ್ ಮಾಡಿದ ಪ್ರತಿ
ನಿಮ್ಮ ಸಹಿಯನ್ನು ಸ್ಕ್ಯಾನ್ ಮಾಡಿ ಅದು 4 kb ಮತ್ತು 30 kb ಗಾತ್ರದಲ್ಲಿರಬೇಕು
ಪೋಸ್ಟ್‌ಕಾರ್ಡ್ ಗಾತ್ರದ ಫೋಟೋ
ಎಡ ಮತ್ತು ಬಲ ಕೈ ಬೆರಳುಗಳು ಮತ್ತು ಹೆಬ್ಬೆರಳಿನ ಗುರುತುಗಳು
ಕೆಟಗೆರಿ ಪ್ರಮಾಣಪತ್ರ (ಅನ್ವಯಿಸಿದರೆ)
ಪೌರತ್ವ ಪ್ರಮಾಣಪತ್ರ (ಅನ್ವಯಿಸಿದರೆ)
PwD ಪ್ರಮಾಣಪತ್ರ (ಅನ್ವಯಿಸಿದರೆ)
10 ನೇ ತರಗತಿ ಪಾಸ್ ಪ್ರಮಾಣಪತ್ರ
ಇತ್ತೀಚಿನ ಛಾಯಾಚಿತ್ರ, NTA ಪ್ರಕಾರ, ಬಣ್ಣ ಅಥವಾ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ 80 ಪ್ರತಿಶತದಷ್ಟು ಮುಖ (ಮಾಸ್ಕ್ ಇಲ್ಲದೆ) ಬಿಳಿ ಹಿನ್ನೆಲೆಯಲ್ಲಿ ಕಿವಿ ಸೇರಿದಂತೆ ಗೋಚರಿಸುತ್ತಿರಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.