Diabetes Treatment - ಇಂದು ನಮ್ಮ ದೇಶದಲ್ಲಿ ಮಧುಮೇಹ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಮತ್ತು ಎಲ್ಲಾ ವಯಸ್ಸಿನ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಇದೀಗ ಅದರ ಚಿಕಿತ್ಸೆ ಮತ್ತಷ್ಟು ಸುಲಭವಾಗಲಿದೆ. ಐಐಟಿ ಮಂಡಿಯ ಸಂಶೋಧಕರು ಮಧುಮೇಹಕ್ಕೆ ಚಿಕಿತ್ಸೆ ನೀಡುವ ಔಷಧದ ಅನುವೊಂದನ್ನು ಪತ್ತೆಹಚ್ಚಿದ್ದಾರೆ.
ಮಾತ್ರೆ ರೂಪದಲ್ಲಿ ಈ ಔಷಧಿಯನ್ನು ಪಡೆಯಬಹುದು
PK2 ಎಂದು ಹೆಸರಿಸಲಾದ ಈ ಅಣುವು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮಧುಮೇಹ ರೋಗಿಗಳು ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧೀಯ ರೂಪದಲ್ಲಿ ಬಳಸಬಹುದು. ಐಐಟಿ ಮಂಡಿ ನಡೆಸಿರುವ ಈ ಸಂಶೋಧನೆಯನ್ನು 'ಜರ್ನಲ್ ಆಫ್ ಬಯೋಲಾಜಿಕಲ್ ಕೆಮಿಸ್ಟ್ರಿ'ಯಲ್ಲಿ ಪ್ರಕಟಿಸಲಾಗಿದೆ.
ಈ ಪ್ರಬಂಧವನ್ನು ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್‌ನ ಸಹ ಪ್ರಾಧ್ಯಾಪಕ ಡಾ. ಪ್ರೊಸೆನ್‌ಜಿತ್ ಮಂಡಲ್ ಬರೆದಿದ್ದಾರೆ. ಪ್ರೊಫೆಸರ್ ಸುಬ್ರತಾ ಘೋಷ್, ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, IIT ಮಂಡಿ, ಡಾ. ಸುನಿಲ್ ಕುಮಾರ್, ICAR-IASRI, ಪೂಸಾ ಅವರುಗಳು ಈ ಪ್ರಭಂದದ ಸಹ-ಲೇಖಕರಾಗಿದ್ದಾರೆ.
ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಗೋ ಪರಿಣಾಮಕಾರಿ ಔಷಧಿ
ತಮ್ಮ ಈ ಸಂಶೋಧನೆಯ ಕುರಿತು ವಿವರಣೆಯನ್ನು ನೀಡಿರುವ ಡಾ.ಪ್ರೊಸೆನ್‌ಜಿತ್ ಮಂಡಲ್, ಮಧುಮೇಹಕ್ಕೆ ಬಳಸುವ ಎಕ್ಸೆನಾಟೈಡ್ ಮತ್ತು ಲಿರಾಗ್ಲುಟೈಡ್‌ನಂತಹ ಔಷಧಗಳನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಈ ಔಷಧಿಗಳು ದುಬಾರಿ ಮತ್ತು ತಾತ್ಕಾಲಿಕವಾಗಿರುತ್ತವೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡರಲ್ಲೂ ಸ್ಥಿರವಾದ, ಕೈಗೆಟುಕುವ ಮತ್ತು ಪರಿಣಾಮಕಾರಿಯಾದ ಸರಳ ಔಷಧಿಗಳನ್ನು ಕಂಡುಹಿಡಿಯುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.
ಇನ್ಸುಲಿನ್ ಬಿಡುಗಡೆಯಲ್ಲಿ ಹಲವಾರು ಸಂಕೀರ್ಣ ಜೀವರಾಸಾಯನಿಕ ಪ್ರಕ್ರಿಯೆಗಳು ಸಂಭವಿಸುತ್ತವೆ. ಇಂತಹ ಒಂದು ಪ್ರಕ್ರಿಯೆಯು ಜೀವಕೋಶಗಳಲ್ಲಿ ಇರುವ GLP1Rs ಎಂಬ ಪ್ರೋಟೀನ್ ರಚನೆಗಳನ್ನು ಒಳಗೊಂಡಿರುತ್ತದೆ. GLP1 ಎಂಬ ಹಾರ್ಮೋನ್ ಅಣು, ಊಟದ ನಂತರ ಬಿಡುಗಡೆಯಾಗುತ್ತದೆ, GLP1R ಗೆ ಬಂಧಿಸುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ ಎಂದು ಪ್ರೊಫೆಸರ್ ಮಂಡಲ್ ವಿವರಿಸಿದ್ದಾರೆ.
ಮಾಲಿಕ್ಯೂಲ್ ಸ್ಕ್ರೀನಿಂಗ್ ಮೂಲಕ ಮಾತ್ರೆ ತಯಾರಾಗಿದೆ
ಎಕ್ಸೆನಾಟೈಡ್ ಮತ್ತು ಲಿರಾಗ್ಲುಟೈಡ್ ನಂತಹ ಔಷಧಿಗಳು GLP1 ಅನ್ನು ಅನುಕರಿಸುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸಲು GLP1R ಅನ್ನು ಬಂಧಿಸುತ್ತದೆ. ಈ ಔಷಧಿಗಳಿಗೆ ಪರ್ಯಾಯಗಳನ್ನು ಹುಡುಕಲು, ತಂಡವು ಮೊದಲು GLP1R ಗೆ ಬಂಧಿಸಬಹುದಾದ ವಿವಿಧ ಸಣ್ಣ ಸಣ್ಣ ಅಣುಗಳನ್ನು ಪ್ರದರ್ಶಿಸಲು ಕಂಪ್ಯೂಟರ್ ಸಿಮ್ಯುಲೇಶನ್ ಪ್ರಕ್ರಿಯೆ ನಡೆಸಿದೆ. PK2, PK3, ಮತ್ತು PK4 ಗಳು GLP1R ನೊಂದಿಗೆ ಉತ್ತಮ ಬಂಧಕ ಸಾಮರ್ಥ್ಯಗಳನ್ನು ಹೊಂದಿದ್ದರೂ, ದ್ರಾವಕಗಳಲ್ಲಿ ಅವುಗಳ ಉತ್ತಮ ಕರಗುವಿಕೆಯಿಂದಾಗಿ ಅವರು PK2 ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ-Diabetes Symptoms: ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಡಯಾಬಿಟಿಸ್ ಪರೀಕ್ಷೆ ಮಾಡಿಸಿಕೊಳ್ಳಿ!
ಇದರ ನಂತರ ಸಂಶೋಧಕರು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯದಲ್ಲಿ PK2 ಅನ್ನು ಸಂಶ್ಲೇಷಿಸಿದ್ದಾರೆ. ಆರಂಭಿಕ ಸಂಶೋಧನೆ ಕುರಿತು ವಿವರಣೆ ನೀಡಿರುವ ಡಾ. ಖ್ಯಾತಿ ಗಿರ್ಧರ್, "ನಾವು ಮೊದಲು ಮಾನವ ಜೀವಕೋಶಗಳಲ್ಲಿ GLP1R ಪ್ರೋಟೀನ್‌ನಲ್ಲಿ PK2 ಬಂಧಿಸುವಿಕೆಯನ್ನು ಪರೀಕ್ಷಿಸಿದ್ದೇವೆ ಮತ್ತು ಅದು GLP1R ಪ್ರೋಟೀನ್‌ಗೆ ಉತ್ತಮವಾಗಿ ಬಂಧಿಸಲು ಸಾಧ್ಯವಾಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ. PK2 ಬೀಟಾ ಕೋಶಗಳಿಂದ ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸಬಹುದು ಎಂದು ಇದು ತೋರಿಸಿದೆ.
ಇಲಿಗಳ ಮೇಲೆ ಪರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ-Hibiscus Tea: ಮಧುಮೇಹ ರೋಗಿಗಳಿಗೆ ದಾಸವಾಳದ ಟೀ! ಇಲ್ಲಿದೆ ತಯಾರಿಸುವ ವಿಧಾನ..
PK2 ಜಠರ ಕರುಳಿನ ಭಾಗದಿಂದ ವೇಗವಾಗಿ ಹೀರಲ್ಪಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಅಂದರೆ ಇದನ್ನು ಚುಚ್ಚುಮದ್ದಿನ ಬದಲಿಗೆ ಒರಲ್ ಮಾತ್ರೆ ರೂಪದಲ್ಲಿ ಬಳಸಬಹುದು. ಎರಡು ಗಂಟೆಗಳ ನಂತರ ಇಲಿಗಳ ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿ ಪಿಕೆ 2 ಪತ್ತೆಯಾಗಿದೆ, ಆದರೆ ಹೃದಯ ಮತ್ತು ಶ್ವಾಸಕೋಶದಲ್ಲಿ ಅದರ ಯಾವುದೇ ಕುರುಹುಗಳು ಇರಲಿಲ್ಲ ಎಂದು ಖ್ಯಾತಿ ಗಿರ್ಧರ್ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.