NEET Result 2022: ಇಂದು ನೀಟ್ ಪರೀಕ್ಷೆ ಫಲಿತಾಂಶ, ನಿಮ್ಮ ರಿಸಲ್ಟ್ ಹೀಗೆ ನೋಡಿ
NTA ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಇಲ್ಲಿ ಲಾಗಿನ್ ಆಗಿ ತಮ್ಮ ರಿಸಲ್ಟ್ ಪರಿಶೀಲಿಸಬಹುದು.
ಬೆಂಗಳೂರು: ಬುಧವಾರ(ಸೆ.7) ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ & ಪ್ರವೇಶ ಪರೀಕ್ಷೆ(NEET UG 2022) ಫಲಿತಾಂಶ ಹೊರ ಬೀಳಲಿದೆ. ಜುಲೈ 17ರಂದು ದೇಶದ 546 ನಗರಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ನಡೆದಿದ್ದ ನೀಟ್ ಪರೀಕ್ಷೆ ಫಲಿತಾಂಶ ಇಂದು ಹೊರ ಬೀಳಲಿದೆ. NTA ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಇಲ್ಲಿ ಲಾಗಿನ್ ಆಗಿ ತಮ್ಮ ರಿಸಲ್ಟ್ ಪರಿಶೀಲಿಸಬಹುದು. ಈ ವರ್ಷ ಒಟ್ಟು 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.
ಇದನ್ನೂ ಓದಿ: ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾಗೆ ಮರು ನಾಮಕರಣ
NEET UG 2022 ಫಲಿತಾಂಶ ನೋಡುವುದು ಹೇಗೆ?
ನೀವು ಮೊದಲಿಗೆ ನೀಟ್‍ನ ಅಧಿಕೃತ ವೆಬ್‌ಸೈಟ್ neet.nta.nic.in ಅಥವಾ ntaresults.nic.in ಗೆ ಭೇಟಿ ನೀಡಬೇಕು
ನಂತರ ಮುಖಪುಟದಲ್ಲಿ ‘NEET UG – 2022 Result 2022’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
ಬಳಿಕ ನಿಮ್ಮ ಲಾಗಿನ್ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆ ನಮೂದಿಸಬೇಕು.
ಈಗ ನಿಮಗೆ ‘NEET UG Result’ ಪರದೆಯ ಮೇಲೆ ಕಾಣಿಸುತ್ತದೆ.
ಬಳಿಕ ಅದರ ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‍ಔಟ್ ತೆಗೆದುಕೊಳ್ಳಿರಿ
ನೀಟ್ ಮರು ಪರೀಕ್ಷೆ
ತಾಂತ್ರಿಕ ದೋಷಗಳಿಂದ ಜುಲೈ 17ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 4ರಂದು ನೀಟ್ ಮರು ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ 18,72,343 ಅಭ್ಯರ್ಥಿಗಳು NEET UG ಪರೀಕ್ಷೆಗೆ ಹಾಜರಾಗಿದ್ದರು.
ಇದನ್ನೂ ಓದಿ: Nitin Gadkari: ವಾಹನ ಸವಾರರಿಗೊಂದು ಮಹತ್ವದ ಮಾಹಿತಿ, ಕೇಂದ್ರ ಸರ್ಕಾರದ ದೊಡ್ಡ ನಿರ್ಧಾರ
13 ಭಾಷೆಗಳಲ್ಲಿ ನೀಟ್ ಪರೀಕ್ಷೆ
MBBS/BDS/BAMS/BSMS/BUMS/BHMS ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗಿತ್ತು. ಅಲ್ಲದೆ ಮೊದಲ ಬಾರಿಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ಸಿಟಿಯಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.