ಈ MNC ಕಂಪನಿಯಲ್ಲಿ ವಾರಕ್ಕೆ 20 ಗಂಟೆಯಷ್ಟೇ ಕೆಲಸ ಮಾಡಿದರೆ ಸಾಕು !ಆದರೆ ತಿಂಗಳಾಂತ್ಯಕ್ಕೆ ಸಿಗುವುದು ದೊಡ್ಡ ಮೊತ್ತದ ವೇತನ
MNC Working Hour in India:ಈ ಕಂಪನಿಯಲ್ಲಿ ಕೆಲಸದ ಅವಧಿ ಬಹಳ ಕಡಿಮೆ, ಆದರೆ ಕೈ ಸೇರುವ ವೇತನ ಮೊತ್ತ ಮಾತ್ರ ಬಹಳ ದೊಡ್ಡದು.
MNC Working Hour in India: ಭಾರತದಲ್ಲಿ,ಒಬ್ಬ ವ್ಯಕ್ತಿಯು ವಾರಕ್ಕೆ 48 ಗಂಟೆಗಳ ಕಾಲ ಕೆಲಸ ಮಾಡಬಹುದು.ಅಂದರೆ ದಿನಕ್ಕೆ ಸುಮಾರು ಎಂಟೂವರೆ ರಿಂದ ಒಂಬತ್ತೂವರೆ ಗಂಟೆಗಳವರೆಗೆ.ವಾರಕ್ಕೆ ಐದು ದಿನಗಳ ಕೆಲಸ.ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ಕೆಲಸದ ಸಮಯ ಭಾರತಕ್ಕಿಂತ ಹೆಚ್ಚು ಇದೆ.ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅತ್ಯಧಿಕ ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲಿ ವಾರಕ್ಕೆ 52.5 ಗಂಟೆ ಕೆಲಸ ಮಾಡಬೇಕಾಗುತ್ತದೆ. ಇದಲ್ಲದೆ, ಗ್ಯಾಂಬಿಯಾದಲ್ಲಿ 50.8 ಗಂಟೆಗಳು ಮತ್ತು ಭೂತಾನ್‌ನಲ್ಲಿ 50.7 ಗಂಟೆಗಳವರೆಗೆ ಕೆಲಸದ ಅವಧಿ ಇದೆ. ಆದರೆ, ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳು ವಾರಕ್ಕೆ 50 ಗಂಟೆಗಳಿಗಿಂತ ಕಡಿಮೆ ಕೆಲಸದ ಸಮಯವನ್ನು ನಿಗದಿಪಡಿಸಿವೆ.
ಬ್ರಿಟಿಷ್ ಸರ್ಕಾರದ ಪ್ರಕಾರ,ಅಲ್ಲಿ ಯಾವುದೇ ವ್ಯಕ್ತಿ ವಾರಕ್ಕೆ ಸರಾಸರಿ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಅನುಮತಿ ಇಲ್ಲ. ಇನ್ನು ಹೊಸಬರು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಅಥವಾ ವಾರಕ್ಕೆ 40 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಇಲ್ಲಿನ ಲೆಕ್ಕಾಚಾರ.USನಲ್ಲಿಯೂ ಸಹ, ಫೇರ್ ಲೇಬರ್ ಸ್ಟ್ಯಾಂಡರ್ಡ್ಸ್ ಆಕ್ಟ್ (FLSA) 168-ಗಂಟೆಗಳ ಅವಧಿಯಲ್ಲಿ 40 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದನ್ನು ಅಧಿಕಾವಧಿ ಅಂದರೆ ಓವರ್ ಟೈಮ್ ಎಂದು ಪರಿಗಣಿಸುತ್ತದೆ. ಅಮೇರಿಕನ್ನರು ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅಂದರೆ ದಿನಕ್ಕೆ ಎಂಟು ಗಂಟೆಗಳು.ಜರ್ಮನಿ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಸಹ ಇದೇ ರೀತಿಯ 48 ಗಂಟೆಗಳ ನಿಯಮವನ್ನು ಪಾಲಿಸುತ್ತವೆ. ಈ ದೇಶಗಳಲ್ಲಿ ಓವರ್ ಟೋಮ್ ಡ್ಯೂಟಿ ಗೆ ಕಠಿಣ ನಿಯಮಗಳಿವೆ.
ಇದನ್ನೂ ಓದಿ : KCET 2024 Counselling : UGCET mock seat allotment ಫಲಿತಾಂಶ ಇಂದು ಪ್ರಕಟ ಸಾಧ್ಯತೆ ! ಈ ಲಿಂಕ್ ಮೂಲಕ ಫಲಿತಾಂಶ ತಿಳಿಯಿರಿ
ಈ ದೇಶಗಳಲ್ಲಿರುವ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ (ಎಂಎನ್‌ಸಿ) ಪ್ರಧಾನ ಕಚೇರಿಗಳು ಸಹ ಅದೇ ಕೆಲಸದ ಸಮಯದ ನಿಯಮಗಳನ್ನು ಅನುಸರಿಸುತ್ತವೆ. ಉದಾಹರಣೆಗೆ, ಸ್ಯಾಮ್‌ಸಂಗ್ ಮತ್ತು ಸೋನಿಯಂತಹ ಕಂಪನಿಗಳು ವಾರಕ್ಕೆ 45 ಗಂಟೆಗಳ ಕಾಲ ಕೆಲಸ ಮಾಡುತ್ತವೆ. ಆದರೆ ಇಂಟೆಲ್, ಸೀಮೆನ್ಸ್, ಡೆಲ್, ಆಪಲ್, ಮೈಕ್ರೋಸಾಫ್ಟ್, ಆಲ್ಫಾಬೆಟ್ ಮತ್ತು ಇತರ ಹಲವು ಕಂಪನಿಗಳು 40-ಗಂಟೆಗಳ ಅವಧಿಯ ಕೆಲಸವನ್ನು ನಿಗದಿ ಮಾಡಿವೆ.
ಭಾರತದಲ್ಲಿ ಸಹ, ಈ ಕಂಪನಿಗಳು ಸಾಮಾನ್ಯವಾಗಿ ಒಂದೇ ರೀತಿಯ ಕೆಲಸದ ಸಮಯವನ್ನು ಅನುಸರಿಸುತ್ತವೆ.ಉದಾಹರಣೆಗೆ, ಸ್ಯಾಮ್ಸಂಗ್ ಎಂಟು-ಗಂಟೆ ಅಂದರೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತದೆ. ಆದರೆ ಕೆಲವು ದಿನಗಳಲ್ಲಿ ಮಾತ್ರ ಕೆಲಸದ ಸಮಯವನ್ನು 10-12 ಗಂಟೆಗಳವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ : Diploma in Agriculture: ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50% ರಷ್ಟು ಮೀಸಲಾತಿ
ಇದಲ್ಲದೆ, IBM, PayPal, Amazon ಮತ್ತು Netflix ನಂತಹ ಕಂಪನಿಗಳಲ್ಲಿ ಕೆಲಸದ ಅವಧಿಯು ಕೇವಲ 8 ಆಗಿದೆ. ಆದರೆ ಒರಾಕಲ್‌ನಲ್ಲಿ ಕೆಲಸದ ಅವಧಿ ಅತ್ಯಂತ ಕಡಿಮೆ. ಇಲ್ಲಿ ವಾರಕ್ಕೆ 20 ಗಂಟೆ ಕೆಲಸ ಮಾಡಬೇಕು. ಅವಶ್ಯಕತೆಗೆ ಅನುಗುಣವಾಗಿ ದಿನಕ್ಕೆ 8 ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ಕಂಪನಿಯಲ್ಲಿ ಕೆಲಸ ಮಾಡಬಹುದು. ಆದರೆ ಈ ಕಂಪನಿ ತನ್ನ ಉದ್ಯೋಗಿಗೆ ದೊಡ್ಡ ಮೊತ್ತದ ವೇತನವನ್ನು ಪಾವತಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ