ಐಟಿಐ ತೇರ್ಗಡೆಯಾದವರಿಗೆ ಸುವರ್ಣಾವಕಾಶ !ದುಬೈ ಶಿಪ್ ಯಾಡ್೯ನಲ್ಲಿ ವೃತ್ತಿ ತರಬೇತಿ ಮತ್ತು ನೇಮಕಾತಿ :ವಿಮಾನ ಟಿಕೆಟ್,ವಸತಿ, ಆಹಾರ ಎಲ್ಲವೂ ಸರ್ಕಾರದ ವತಿಯಿಂದಲೇ

ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಕೌಶಲ್ಯಭಿವೃದ್ದಿ ನಿಗಮದ ವತಿಯಿಂದ  ವೃತ್ತಿ ತರಬೇತಿ ಮತ್ತು ನೇಮಕಾತಿ ಕಾರ್ಯಕ್ರಮಆಯೋಜಿಸಲಾಗಿದೆ.  ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ, ವಿಮಾನ ಟಿಕೆಟ್, ವಸತಿ ಆಹಾರ ಸೌಲಭ್ಯವನ್ನು ಒದಗಿಸಲಾಗುವುದು. 

Written by - Ranjitha R K | Last Updated : Aug 8, 2024, 11:29 AM IST
  • ಉದ್ಯೋಗ ಆಕಾಂಕ್ಷೆಗಳಿಗೆ ಕೌಶಲ್ಯಭಿವೃದ್ದಿ ನಿಗಮದ ವತಿಯಿಂದ ಆಯೋಜನೆ
  • ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನ
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ, ವಿಮಾನ ಟಿಕೆಟ್, ವಸತಿ ಆಹಾರ
 ಐಟಿಐ ತೇರ್ಗಡೆಯಾದವರಿಗೆ ಸುವರ್ಣಾವಕಾಶ !ದುಬೈ ಶಿಪ್ ಯಾಡ್೯ನಲ್ಲಿ ವೃತ್ತಿ ತರಬೇತಿ ಮತ್ತು ನೇಮಕಾತಿ :ವಿಮಾನ ಟಿಕೆಟ್,ವಸತಿ, ಆಹಾರ ಎಲ್ಲವೂ ಸರ್ಕಾರದ ವತಿಯಿಂದಲೇ  title=

ಬೆಂಗಳೂರು :ಹೊಸದಾಗಿ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಕೌಶಲ್ಯಭಿವೃದ್ದಿ ನಿಗಮದ ವತಿಯಿಂದ  ದುಬೈ ಶಿಪ್ ಯಾಡ್೯ನಲ್ಲಿ ವೃತ್ತಿ ತರಬೇತಿ ಮತ್ತು ನೇಮಕಾತಿ ಕಾರ್ಯಕ್ರಮ ಏರ್ಪಡಿಸಿದೆ.

ಈಗಾಗಲೇ ಸ್ಲೋವಾಕಿಯಾ, ಯೂ ಎ ಈ,ಹಂಗೇರಿ, ಸೇರಿದಂತೆ ಮತ್ತಿತರ ಕಡೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಗಿರುವ ಕರ್ನಾಟಕ ಕೌಶಲ್ಯಭಿವೃದ್ದಿ ನಿಗಮ,ಇದೀಗ ಐಐಟಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉಚಿತ ವಿದೇಶಿ ವೃತ್ತಿ ತರಬೇತಿ ಮತ್ತು ನೇಮಕಾತಿ ಕಾರ್ಯಕ್ರಮದ ಮೂಲಕ ಮತ್ತೊಂದು ಹೊಸ ದೃಡ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ : ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 8 ರಿಂದ 19ರ ವರೆಗೆ ಈ ಥೀಮ್ ನೊಂದಿಗೆ ಫಲಪುಷ್ಪ ಪ್ರದರ್ಶನ..!

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ,ಉಚಿತ ವಿಮಾನ ಟಿಕೆಟ್,ಉಚಿತ ವಸತಿ, ಉಚಿತ ಆಹಾರ, ತರಬೇತಿ ಸ್ಥಳದೊಳಗೆ ಉಚಿತ ಪ್ರಯಾಣ, ಉಚಿತ ಆರೋಗ್ಯ ವಿಮೆ, ವಾರ್ಷಿಕ ರಜೆಗಳು, ಹಾಗೂ ಹಿಂದಿರುಗುವ ವಿಮಾನ ಟಿಕೆಟ್ ಸೌಲಭ್ಯವನ್ನು ಕೂಡಾ ನಿಗಮವೇ ಒದಗಿಸಿ ಕೊಡುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 27,000 ರೂ. (1200 AED ಮೊದಲನೇ ವರ್ಷ ವೇತನ ಎಂದು ನಿಗದಿ ಪಡಿಸಲಾಗಿದೆ. )ನಂತರ ಇದನ್ನು ವಾರ್ಷಿಕವಾಗಿ ಏರಿಕೆ ಮಾಡಲಾಗುವುದು ಎಂದು ನಿಗಮವು ತಿಳಿಸಿದೆ. ಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನವಾಗಿದೆ.ಆನ್‌ಲೈನ್ ಸಂದರ್ಶನದ ದಿನಾಂಕವನ್ನು  ಶಾರ್ಟ್ ಲಿಸ್ಟ್ ಅದ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ ಎಂದು ನಿಗಮವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ :  ಖಾಲಿಯಿರುವ 189 ಗೃಹ ರಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
 
ಅರ್ಹತೆಗಳು :
ವಿದ್ಯಾರ್ಹತೆ : ಐಟಿಐ (ಯಾವುದೇ ವಿಷಯಗಳು: ಫಿಟ್ಟರ್, ಫ್ಯಾಬ್ರಿಕೇಟರ್, ವೆಲ್ಡರ್, ಇತ್ಯಾದಿ) 2020-21 ರಲ್ಲಿ ಅಥವಾ ನಂತರ ಉತ್ತೀರ್ಣರಾಗಿರಬೇಕು.
ತಾಂತ್ರಿಕ ಕೌಶಲ್ಯ : ತಮ್ಮ ವೃತ್ತಿ ಕಲಿಕೆಗೆ ಸಂಬಂಧಿಸಿದ ಯಾವುದಾದರೂ ತಾಂತ್ರಿಕ ಕೌಶಲ್ಯದ ಕೋರ್ಸ್‌ನಲ್ಲಿ ಪ್ರಮಾಣಪತ್ರ.
ವಯೋಮಿತಿ: 18 ರಿಂದ 23 ವರ್ಷಗಳ ಒಳಗಿರಬೇಕು.
ಒಪ್ಪಂದ : 2 ವರ್ಷಗಳ ವೃತ್ತಿ ತರಬೇತಿ ಮತ್ತು 3 ವರ್ಷಗಳ ನಂತರ ವೃತ್ತಿಪರರಾಗಿ/ ತಂತ್ರಜ್ಞರಾಗಿ ಕೆಲಸ.
ಭಾಷಾ ನೈಪುಣ್ಯತೆ: ಸರಳ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರಬೇಕು.

ತಾಂತ್ರಿಕ ಸಾಮರ್ಥ್ಯಗಳು : 
1.ಬ್ಲೂ ಪ್ರಿಂಟ್ ಡ್ರಾಯಿಂಗ್‌ಗಳು ಟೆಕ್ನಿಕಲ್ ಸೈಸಿಫಿಕೇಷನ್ ಗಳನ್ನು ಓದಿ ಅರ್ಥಮಾಡಿಕೊಳ್ಳುವ ಹಾಗೂ ವ್ಯಾಖ್ಯಾನಿಸುವ ಮುಖಾಂತರ ನೀಡಿರುವ ಕೆಲಸಗಳನ್ನು ಸೂಚನೆ ಹಾಗೂ ಯೋಜನೆಯಂತೆ ಪೂರ್ಣಗೊಳಿಸುವ ಸಾಮರ್ಥ್ಯವಿರಬೇಕು. 
2.ಕೆಲಸದ ಮಾಹಿತಿ ಸಲ್ಲಿಕೆ ಉಪಕರಣಗಳ ನಿರ್ವಹಣಾ ಜ್ಞಾನ, ಸಾಮಗ್ರಿಗಳ ಕ್ರಮ ಬದ್ದತೆ, ಸುರಕ್ಷತಾ ಪರಿಶೀಲನೆಗಳು, ಕೆಲಸದ ದಿನಚರಿ ಕುರಿತಾದ ಜ್ಞಾನವಿರಬೇಕು.
3.ಕೆಲಸದ ವಾತಾವರಣ ಹಾಗೂ ಅವಶ್ಯಕತೆಗೆ ತಕ್ಕಂತೆ ಹೊಂದಿಕೊಳ್ಳುವಿಕೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಕೆಲಸದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡುವುದು ಹಾಗೂ ಕಲಿಯುವ ಪ್ರವೃತ್ತಿ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರಬೇಕು. 
4. ಯಾವುದೇ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಕೆಲಸ ಮಾಡುವ ಸಾಮರ್ಥ್ಯ, ಉತ್ತಮ ದೈಹಿಕ ಸಾಮರ್ಥ್ಯ, ಕಣ್ಣು ಕೈಗಳ ನಡುವೆ ಸಮನ್ವಯತೆ. ಹೊಸ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವಿರಬೇಕು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ :
ಅಂತಾರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕ (IMC-K) hr.imck@gmail.com
ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560029
ವಾಟ್ಸ್ ಆಪ್  ಸಂಖ್ಯೆ ಅಥವಾ ದೂರವಾಣಿಗೆ ಕರೆ ಮಾಡಬಹುದಾಗಿದೆ.
9606492213/9606492214
ನೋಂದಣಿ ಸಂಖ್ಯೆ 1154/KAR/COM/1000+/5/9567/2019
ಸಂಪರ್ಕಿಸಲು ಕೋರಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News