ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳ ನೇಮಕ; SSLC ಪಾಸಾದವರು ಇಂದೇ ಅರ್ಜಿ ಸಲ್ಲಿಸಿರಿ
Indian Post Office Recruitment 2024: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
Indian Post Office Recruitment 2024: ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಲಿಚ್ಛಿಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಸಿಕ್ಕಿದೆ. ಜುಲೈ 15ರಿಂದ ಅಂಚೆ ಇಲಾಖೆಯಲ್ಲಿ ನೇಮಕಾತಿ ಪ್ರಾರಂಭವಾಗಲಿದ್ದು, 30,000ಕ್ಕೂ ಹೆಚ್ಚು ಜನರನ್ನು ಗ್ರಾಮೀಣ ಡಾಕ್ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಥವಾ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ಸಹಾಯಕ ಮಹಾನಿರ್ದೇಶಕ (GDS/PCC/PAP) ರವಿ ಪಹ್ವಾರ ಕಚೇರಿಯಿಂದ ಸಿಇಪಿಟಿ ಬೆಂಗಳೂರು/ಹೈದರಾಬಾದ್ ಘಟಕದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಜನರಲ್ ಮ್ಯಾನೇಜರ್ಗೆ ಸೂಚನೆಗಳನ್ನು ನೀಡಲಾಗಿದೆ. ಜುಲೈ ೨ನೇ ವಾರದಲ್ಲಿ GDS Online Engagement ಮತ್ತು ಶೆಡ್ಯೂಲ್ 2024ರ ಅಡಿ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಜುಲೈ 15ರಂದು ಅಧಿಸೂಚನೆ ಹೊರಡಿಸಲಾಗುವುದು.
ಇದನ್ನೂ ಓದಿ: ತಿರುಪತಿ ಭಕ್ತರಿಗೆ ಸಿಹಿ ಸುದ್ದಿ..! ಮಕ್ಕಳಿಗೆ ತಿಮ್ಮಪ್ಪನ ದರ್ಶನ ಉಚಿತ.. ವಯಸ್ಸು ಇಷ್ಟಾಗಿರಬೇಕು
ವಿದ್ಯಾರ್ಹತೆ & ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಹುದ್ದೆಗಳ ಆಯ್ಕೆಯು ಸಂಪೂರ್ಣವಾಗಿ 10ನೇ ತರಗತಿಯ ಮೆರಿಟ್ ಆಧಾರದ ಮೇಲೆ ಇರುವುದರಿಂದ, ಅಭ್ಯರ್ಥಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.
ಮೆರಿಟ್ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡ ನಂತರ ದಾಖಲೆಗಳ ಪರಿಶೀಲನೆಗೆ ಮಾತ್ರ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಜುಲೈ 15ರಿಂದ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್ https://indiapostgdsonline.gov.in/ ಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದಾಗಿದೆ.
ಇದನ್ನೂ ಓದಿ: Daily GK Quiz: ʼಜೈ ಜವಾನ್ ಜೈ ಕಿಸಾನ್ʼ ಎಂಬ ಘೋಷಣೆ ಕೂಗಿದವರು ಯಾರು?
ವೇತನ ಮತ್ತು ಭತ್ಯೆ: ಆಯ್ಕೆಯಾದ ಗ್ರಾಮೀಣ ಡಾಕ್ ಸೇವಕ್ ಅವರಿಗೆ ಕಚೇರಿ ನಿರ್ವಹಣಾ ಭತ್ಯೆ, ನಿಗದಿತ ಸ್ಟೇಷನರಿ ಭತ್ಯೆ, ಹೆಸರು ಭತ್ಯೆ, ನಗದು ವಾಹನ ಭತ್ಯೆ, ಸಮಯ ಸಂಬಂಧಿತ ನಿರಂತರ ಭತ್ಯೆ (TRCA), ತುಟ್ಟಿಭತ್ಯೆ (DA) ಮತ್ತು ವೈದ್ಯಕೀಯ ಭತ್ಯೆಯ ರೂಪದಲ್ಲಿ ನೀಡಲಾಗುವುದು. ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟಲ್ ಸರ್ವೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಯ ಮಾಸಿಕ ವೇತನವು ಸಂಪೂರ್ಣವಾಗಿ ವ್ಯಕ್ತಿಯ ಮಟ್ಟ ಮತ್ತು ಅರ್ಹತೆಯನ್ನು ಆಧರಿಸಿರುತ್ತದೆ. ಈ ಹುದ್ದೆಗಳಿಗೆ ಆರಂಭಿಕ ವೇತನವು 10,000 ರಿಂದ 15,000ವರೆಗೆ ಇರುತ್ತದೆ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.