ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಚಿತ್ರದುರ್ಗ ಫಸ್ಟ್, ಯಾದಗಿರಿ ಲಾಸ್ಟ್..!
ಬೆಂಗಳೂರು: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ.83.89 ರಷ್ಟು ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಆಗಿದ್ದು, ಚಿತ್ರದುರ್ಗ ಮೊದಲ ಸ್ಥಾನ, ಯಾದಗಿರಿಗೆ ಕಡೆಯ ಸ್ಥಾನ ಬಂದಿದೆ.ಕಳೆದ ಬಾರಿಗಿಂತ ಈ ಬಾರಿ ಶೇ.1.24 ರಷ್ಟು ಕಡಿಮೆ ಫಲಿತಾಂಶ ಬಂದಿದೆ.
SSLC Result : ಸುದ್ದಿಗೋಷ್ಟಿ ನಡೆಸಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಫಲಿತಾಂಶ ಪ್ರಕಟಿಸಿದರು. ನಂತರ ಮಾತನಾಡಿದ ರಿತೇಶ್ ಸಿಂಗ್, ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 835102 ವಿದ್ಯಾರ್ಥಿಗಳಲ್ಲಿ 700619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 83.89 ರಷ್ಟು ಫಲಿತಾಂಶ ಬಂದಿದೆ.
425968 ಬಾಲಕರು ಪರೀಕ್ಷೆ ಬರೆದಿದ್ದು ಇದರಲ್ಲಿ 341108 ಬಾಲಕರು ತೇರ್ಗಡೆಯಾಗಿದ್ದಾರೆ ಶೇ. 80.08 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.409134 ಬಾಲಕಿಯರು ಪರೀಕ್ಷೆ ಬರೆದಿದ್ದು 359511 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು,ಶೇ. 87.87 ರಷ್ಟು ಫಲಿತಾಂಶ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ಆಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ-ಲಿಂಗಾಯತ ವೇದಿಕೆ ಕಾಲ್ಪನಿಕ ಸಂಘಟನೆ;ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
61003 ವಿದ್ಯಾರ್ಥಿಗಳು ಎ-ಪ್ಲಸ್ (ಶೇ.90-100) ಅಂಕ,147634 ವಿದ್ಯಾರ್ಥಿಗಳು ಎ (ಶೇ. 80-89) ಅಂಕ, 175489 ವಿದ್ಯಾರ್ಥಿಗಳು ಬಿ-ಪ್ಲಸ್ (ಶೇ.70-79) ಅಂಕ, 170296 ವಿದ್ಯಾರ್ಥಿಗಳು ಬಿ (ಶೇ.60-69) ಅಂಕ, 116819 ವಿದ್ಯಾರ್ಥಿಗಳು ಸಿ-ಪ್ಲಸ್ (ಶೇ.50-59) ಅಂಕ,19301 ವಿದ್ಯಾರ್ಥಿಗಳು ಎ (ಶೇ.35-49) ಅಂಕ ಪಡೆದುಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಉತ್ತೀರ್ಣ ಹಂತದಲ್ಲಿ ಅನುತ್ತೀರ್ಣ ಆಗಿರುವ 59246 ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಅಂಕದ ಗ್ರೇಸ್ ಮಾರ್ಕ್ಸ್ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಗರ ಪ್ರದೇಶದಲ್ಲಿ 351392 ವಿದ್ಯಾರ್ಥಿಗಳಲ್ಲಿ 279773 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.79.62 ರ ಫಲಿತಾಂಶ ಪಡೆದರೆ ಗ್ರಾಮೀಣ ಭಾಗದಲ್ಲಿ 483710 ವಿದ್ಯಾರ್ಥಿಗಳಲ್ಲಿ 420846 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.87 ರಷ್ಟು ಫಲಿತಾಂಶ ಪಡೆದಿದ್ದಾರೆ,ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ ಎಂದರು.
ಇದನ್ನೂ ಓದಿ-ಚುನಾವಣೆ ಎಫೆಕ್ಟ್: ಇಂದಿನಿಂದ ಮದ್ಯ ಪ್ರಿಯರಿಗೆ ಸಿಗಲ್ಲ ಎಣ್ಣೆ
1517 ಸರ್ಕಾರಿ ಶಾಲೆ ಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ ಎನ್ನುವ ಮಾಹಿತಿ ನೀಡಿದ್ದು, ಅನುದಾನಿತ ಶಾಲೆಗಳಲ್ಲಿ 482 ಶೇ.100 ರಷ್ಟು ಫಲಿತಾಂಶ ಪಡೆದಿದ್ದು, 11 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದೆ. ಅನುದಾನರಹಿತ 1824 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, 23 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ. ಒಟ್ಟು 3823 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, 34 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ, ಶೂನ್ಯ ಫಲಿತಾಂಶ ಬರಲು ಕಾರಣವೇನು ಎಂದು ಪರಿಶೀಲಿಸಿ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾವಾರು ಫಲಿತಾಂಶ:
ಚಿತ್ರದುರ್ಗ-96.80
ಮಂಡ್ಯ-96.74
ಹಾಸನ-96.68
ಬೆಂಗಳೂರು ಗ್ರಾಮಾಂತರ-96.48
ಚಿಕ್ಕಬಳ್ಳಾಪುರ-96.15
ಕೋಲಾರ-94.60
ಚಾಮರಾಜನಗರ-94.37
ಮಧುಗಿರಿ-93.23
ಕೊಡಗು-93.19
ವಿಜಯನಗರ-91.41
ವಿಜಯಪುರ-91.23
ಚಿಕ್ಕೋಡಿ-91.07
ಉತ್ತರಕನ್ನಡ-90.53
ದಾವಣಗೆರೆ-90.43
ಕೊಪ್ಪಳ- 90.27
ಮೈಸೂರು-89.75
ಚಿಕ್ಕಮಗಳೂರು-89.69
ಉಡುಪಿ-89.49
ದಕ್ಷಿಣಕನ್ನಡ -89.47
ತುಮಕೂರು-89.43
ರಾಮನಗರ-89.42
ಹಾವೇರಿ-89.11
ಸಿರಸಿ-87.39
ಧಾರವಾಡ-86.55
ಗದಗ-86.51
ಬೆಳಗಾವಿ-85.85
ಬಾಗಲಕೋಟೆ-85.14
ಕಲಬುರಗಿ-84.51
ಶಿವಮೊಗ್ಗ- 84.04
ರಾಯಚೂರು-84.02
ಬಳ್ಳಾರಿ-81.54
ಬೆಂಗಳೂರು ಉತ್ತರ-80.93
ಬೆಂಗಳೂರು ದಕ್ಷಿಣ-78.95
ಬೀದರ್-78.73
ಯಾದಗಿರಿ-75.49
ಶೇ.100 ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳು:
ಈ ಬಾರಿ 625 ಕ್ಕೆ 625 ಅಂಕಗಳನ್ನು ನಾಲ್ಕು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.ಇನ್ನು ಕನ್ನಡದಲ್ಲಿ 14983, ಇಂಗ್ಲಿಷ್ ನಲ್ಲಿ 9754, ಹಿಂದಿಯಲ್ಲಿ 16170, ಗಣಿತ 2132, ವಿಜ್ಞಾನ 983 ಹಾಗು ಸಮಾಜ ವಿಜ್ಞಾನದಲ್ಲಿ 8311 ವಿದ್ಯಾರ್ಥಿಗಳು ಶೇ.100 ಅಂಕ ಪಡೆದುಕೊಂಡಿದ್ದಾರೆ.
625 ಅಂಕ ಪಡೆದ ವಿದ್ಯಾರ್ಥಿಗಳು:
1.ಭೂಮಿಕಾ ಪೈ, ಬೆಂಗಳೂರು, ನ್ಯೂ ಮೆಕಾಲ ಇಂಗ್ಲೀಷ್ ಸ್ಕೂಲ್, ಹೊಸೂರು ರಸ್ತೆ
2.ಯಶಸ್ ಗೌಡ, ಬಾಲಗಂಗಾಧರನಾಥ ಹೈಸ್ಕೂಲ್, ಚಿಕ್ಕಬಳ್ಳಾಪುರ
3.ಅನುಪನಾ ಶ್ರೀಶೈಲ ಹಿರೇಹೋಳಿ, ಕುಮಾರೇಶ್ವರ ಶಾಲೆ ಸವದತ್ತಿ
4.ಭೀಮನಗೌಡ ಹನುಮಂತಗೌಡ ಪಾಟೀಲ್, ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ, ಮುದ್ದೇಬಿಹಾಳ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.