ಈ ಕಾಲೇಜುಗಳಲ್ಲಿ ನೀವು ಪದವಿ ಪಡೆದಿದ್ದರೆ Amazonನಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು
ಉದ್ಯಮದ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ.ಅಂತಹ 10 ಕಾಲೇಜುಗಳು ಮತ್ತು ಸಂಸ್ಥೆಗಳ ಹೆಸರುಗಳು ಇಲ್ಲಿವೆ
ಅಮೆಜಾನ್ ಮತ್ತು ಗೂಗಲ್‌ನಂತಹ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗಿ ಐಐಟಿ ಮತ್ತು ಐಐಎಂನಂತಹ ದೊಡ್ಡ ಕಾಲೇಜುಗಳಿಂದ ಉತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳುತ್ತವೆ.ಆದರೆ, ಈ ಕಂಪನಿಗಳು ಕೆಲವು ಭಾರತೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ.ಐಐಟಿ ಮತ್ತು ಐಐಎಂ ಹೊರತುಪಡಿಸಿ,ಅಮೆಜಾನ್ ನೇಮಕಾತಿ ಮಾಡುವ ಟಾಪ್ 10 ಭಾರತೀಯ ಕಾಲೇಜುಗಳು ಯಾವುವು ತಿಳಿಯೋಣ.
ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಆದ್ಯತೆ :
ಐಐಟಿ ಮತ್ತು ಐಐಎಂನಲ್ಲಿ ಪ್ರವೇಶ ಪಡೆಯಲು ಎಲ್ಲರಿಗೂ ಸಾಧ್ಯವಿಲ್ಲ.ಇವುಗಳ ಹೊರತಾಗಿ, ಭಾರತದಲ್ಲಿ ಹಲವಾರು ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಗಳು ಇವೆ. ಇದು ಉದ್ಯಮದ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ.ಅಂತಹ 10 ಕಾಲೇಜುಗಳು ಮತ್ತು ಸಂಸ್ಥೆಗಳ ಹೆಸರುಗಳು ಇಲ್ಲಿವೆ.
ಇದನ್ನೂ ಓದಿ : UGC NET Result 2024: UGC NET ಸ್ಕೋರ್ ಕಾರ್ಡ್ ಅನ್ನು ಎಲ್ಲಿ ಹೇಗೆ ಚೆಕ್ ಮಾಡುವುದು ? ಇಲ್ಲಿದೆ ವಿವರ
NIT ತಿರುಚಿರಾಪಳ್ಳಿ:
NIT ತಿರುಚಿರಾಪಳ್ಳಿ ಉನ್ನತ ಮಟ್ಟದ ಇಂಜಿನಿಯರಿಂಗ್ ಕಾಲೇಜಾಗಿದ್ದು, ಹೆಸರುವಾಸಿಯಾಗಿದೆ.ಕಂಪ್ಯೂಟರ್ ಸೈನ್ಸ್,ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಒತ್ತು ನೀಡುವುದರೊಂದಿಗೆ,ಇದು ನಿರಂತರವಾಗಿ ನೇಮಕಾತಿಗಾಗಿ ಅಮೆಜಾನ್ ಅನ್ನು ಆಕರ್ಷಿಸುತ್ತದೆ.
NIT ಕ್ಯಾಲಿಕಟ್ :
ಅಮೆಜಾನ್ NIT ಕ್ಯಾಲಿಕಟ್ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಈ ಕಾಲೇಜು ಪಠ್ಯಕ್ರಮ ಮತ್ತು ಪ್ರಾಯೋಗಿಕ ವಿಧಾನಕ್ಕೆ ಹೆಸರುವಾಸಿಯಾಗಿದೆ. ಅಮೆಜಾನ್ ಕಂಪ್ಯೂಟರ್ ಸೈನ್ಸ್,ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ವಿಭಾಗಗಳಿಂದ ಆಗಾಗ ಇಲ್ಲಿಯ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತದೆ.
ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಪಿಲಾನಿ:
BITS ಪಿಲಾನಿ ತನ್ನ ವಿದ್ಯಾರ್ಥಿಗಳನ್ನು ವಿವಿಧ ಕೈಗಾರಿಕೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಸಿದ್ಧಪಡಿಸುವಲ್ಲಿ ಪ್ರಸಿದ್ಧವಾಗಿದೆ.Amazon ಇಲ್ಲಿಂದ ನಿಯಮಿತ ನೇಮಕಾತಿಗಳನ್ನು ಮಾಡುತ್ತಿದೆ.ಇಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾರ್ಯಕ್ರಮಗಳಿಂದ ಗರಿಷ್ಠ ನೇಮಕಾತಿಯಾಗಿದೆ.
ಇದನ್ನೂ ಓದಿ : ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ; ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ
ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ :
VIT ವೆಲ್ಲೂರ್ ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡುತ್ತದೆ, ಅಮೆಜಾನ್‌ನಂತಹ ಉದ್ಯೋಗದಾತರಿಗೆ ಇದು ಆಕರ್ಷಕ ಆಯ್ಕೆಯಾಗಿದೆ. ವಿಶ್ವವಿದ್ಯಾನಿಲಯವು ತನ್ನ ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳಿಂದ ಉತ್ತಮ ಪ್ರತಿಭೆಯನ್ನು ಉತ್ಪಾದಿಸುತ್ತದೆ.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಣಿಪಾಲ :
MIT ಮಣಿಪಾಲವು ಪ್ರಾಯೋಗಿಕ ಶಿಕ್ಷಣ ಮತ್ತು ಉದ್ಯಮ ಸಂಬಂಧಗಳಿಗೆ ಆದ್ಯತೆ ನೀಡುತ್ತದೆ. ಅಮೆಜಾನ್ ಸಾಮಾನ್ಯವಾಗಿ ತನ್ನ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಾರ್ಯಕ್ರಮಗಳಿಂದ ಪದವೀಧರರನ್ನು ನೇಮಿಸಿಕೊಳ್ಳುತ್ತದೆ.
ಲೊಯೊಲಾ ಕಾಲೇಜು, ಚೆನ್ನೈ :
ಲೊಯೊಲಾ ಕಾಲೇಜ್ ತನ್ನ ಅತ್ಯುತ್ತಮ ಶೈಕ್ಷಣಿಕ ಮತ್ತು ಸಮಗ್ರ ಶಿಕ್ಷಣ ವಿಧಾನಕ್ಕೆ ಹೆಸರುವಾಸಿಯಾಗಿದೆ.ಅಮೆಜಾನ್ ಇಲ್ಲಿಂದ ವಾಣಿಜ್ಯ ಮತ್ತು ನಿರ್ವಹಣಾ ಕಾರ್ಯಕ್ರಮಗಳಿಂದ ನೇಮಕಗೊಳ್ಳುತ್ತದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ವೃತ್ತಿಪರರಂತೆ ತಯಾರಾಗುತ್ತಾರೆ.
ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು :
ಕ್ರೈಸ್ಟ್ ವಿಶ್ವವಿದ್ಯಾಲಯವು ಬಹುಮುಖ ಪ್ರತಿಭೆಯ ಪದವೀಧರರನ್ನು ಹೊರ ತರುತ್ತದೆ. ಅಮೆಜಾನ್ ಸಾಮಾನ್ಯವಾಗಿ ಇಲ್ಲಿಂದ ವಾಣಿಜ್ಯ ಮತ್ತು ನಿರ್ವಹಣಾ ಕಾರ್ಯಕ್ರಮಗಳಿಂದ ನೇಮಕ ಮಾಡಿಕೊಳ್ಳುತ್ತದೆ.
ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯುನಿವರ್ಸಿಟಿ ಪುಣೆ :
ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯುನಿವರ್ಸಿಟಿ ತನ್ನ ಜಾಗತಿಕ ದೃಷ್ಟಿಕೋನ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಹೆಸರುವಾಸಿಯಾಗಿದೆ. ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸೇರಿದಂತೆ ವಿವಿಧ ಶಾಲೆಗಳಿಂದ Amazon ನೇಮಕಾತಿ ಮಾಡಿಕೊಳ್ಳುತ್ತದೆ.
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಹೈದರಾಬಾದ್ :
ISB ಬಿಸಿನೆಸ್ ಸ್ಕೂಲ್ ಆಗಿದ್ದು, ಮ್ಯಾನೆಜ್ ಮೆಂಟ್ ನಲ್ಲಿ ನಾಯಕರನ್ನು ಸಿದ್ಧಪಡಿಸುತ್ತದೆ.PGP ಮತ್ತು PGP-HRM ಕಾರ್ಯಕ್ರಮಗಳ ಮೂಲಕ Amazon ಇಲ್ಲಿಂದ ನೇಮಕಾತಿ ಮಾಡಿಕೊಳ್ಳುತ್ತದೆ.
ನರ್ಸೀ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮುಂಬೈ :
NMIMS ಒಂದುಮ್ಯಾನೆಜ್ ಮೆಂಟ್ ಸಂಸ್ಥೆಯಾಗಿದ್ದು ಅದು ನಾವೀನ್ಯತೆಗೆ ಒತ್ತು ನೀಡುತ್ತದೆ. ಮೆಜಾನ್ ಇಲ್ಲಿ MBA ಮತ್ತು PGDM ಕಾರ್ಯಕ್ರಮಗಳಿಂದ ಸಕ್ರಿಯವಾಗಿ ನೇಮಕ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ