ನವೋದಯ ವಿದ್ಯಾಲಯದಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಇದೇ ಕೊನೆಯ ದಿನಾಂಕ ! ಬೇಕಾಗಿರುವ ದಾಖಲೆಗಳು ಹೀಗಿವೆ
JNVST Registration 2024 for Class 6:ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಸೆಪ್ಟೆಂಬರ್ 16, 2024 ರ ಮೊದಲು ಅಧಿಕೃತ ವೆಬ್‌ಸೈಟ್ navodaya.gov.inನಲ್ಲಿ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
JNVST Registration 2024 for Class 6 : ನವೋದಯ ವಿದ್ಯಾಲಯ ಸಮಿತಿಯು 6ನೇ ತರಗತಿಯ ಪ್ರವೇಶಕ್ಕಾಗಿ ರಿಜಿಸ್ಟ್ರೆಶೇನ್ ವಿಂಡೋ ಶೀಘ್ರದಲ್ಲೇ ಕ್ಲೋಸ್ ಆಗಲಿದೆ.ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಸೆಪ್ಟೆಂಬರ್ 16, 2024 ರ ಮೊದಲು ಅಧಿಕೃತ ವೆಬ್‌ಸೈಟ್ navodaya.gov.inನಲ್ಲಿ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.ಈ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.2025ರ JNVST ಪ್ರವೇಶ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.
ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶ 2024 ರ ಪ್ರಮುಖ ದಿನಾಂಕಗಳು:
6 ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 16, 2024.
JNVST ತರಗತಿ 6 ಪ್ರವೇಶ ಫಾರಂ ತಿದ್ದುಪಡಿ ವಿಂಡೋ:ಅಕ್ಟೋಬರ್ 2024
JNVST ತರಗತಿ 6 ಪ್ರವೇಶ ಪರೀಕ್ಷೆ 2025:ಜನವರಿ 18, 2025 ರಂದು ಹಂತ 1, ಏಪ್ರಿಲ್ 12, 2025 ರಂದು ಹಂತ 2
JNVST ತರಗತಿ 6 ಫಲಿತಾಂಶ ದಿನಾಂಕ 2025: ಮಾರ್ಚ್ 2025 ಮತ್ತು ಮೇ 2025
ಇದನ್ನೂ ಓದಿ : CRPF Job: 11,000 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC ಪಾಸಾದವರು ಅರ್ಜಿ ಸಲ್ಲಿಸಿ
JNVST ತರಗತಿ 6 ಪ್ರವೇಶ 2024 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
೧.ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವಾಗ, ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು JPG ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.ಅದರ ಫೈಲ್ ಗಾತ್ರವು 10 ರಿಂದ 100 KB ನಡುವೆ ಇರಬೇಕು.
೨. ನಿಗದಿತ ವಿವರಗಳನ್ನು ಒಳಗೊಂಡಿರುವ ಅಭ್ಯರ್ಥಿಯ ಪ್ರಸ್ತುತ ಶಾಲೆಯ ಪ್ರಾಂಶುಪಾಲರಿಂದ ಪರಿಶೀಲಿಸಲಾದ ಪ್ರಮಾಣಪತ್ರ.
೩. ಅಭ್ಯರ್ಥಿ ಮತ್ತು ಅವನ/ಅವಳ ಪೋಷಕರ ಸಹಿ
೪.ಯಾವುದೇ ಸಮರ್ಥ ಸರ್ಕಾರಿ ಪ್ರಾಧಿಕಾರದಿಂದ ನೀಡಲಾದ ಆಧಾರ್ ವಿವರಗಳು ಅಥವಾ ನಿವಾಸ ಪ್ರಮಾಣಪತ್ರ.
JNVST 2025: ಯಾರು ಅರ್ಜಿ ಸಲ್ಲಿಸಬಹುದು?
ಆಯಾ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2023-24) 5ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳು JNVST 2025ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೂ ಸ್ಥಳ ಮತ್ತು ವರ್ಗದ ಆಧಾರದ ಮೇಲೆ ಅರ್ಹತಾ ಮಾನದಂಡಗಳು ಬದಲಾಗುತ್ತವೆ.
ಇದನ್ನೂ ಓದಿ : ಕರ್ನಾಟಕ NEET UG,KCET ರೌಂಡ್ 2 ಕೌನ್ಸೆಲಿಂಗ್ 2024 ಪ್ರಾರಂಭ! ವೇಳಾಪಟ್ಟಿ, ಫೀಸ್, ಅಗತ್ಯ ದಾಖಲೆಗಳ ವಿವರ ಇಲ್ಲಿದೆ
ಗ್ರಾಮೀಣ ಪ್ರದೇಶ:ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು (2011 ರ ಜನಗಣತಿಯ ಪ್ರಕಾರ 10,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಹಳ್ಳಿಗಳು ಅಥವಾ ಪಟ್ಟಣಗಳು) ಇಲ್ಲಿ ಪ್ರವೇಶ ಪಡೆಯಬಹುದು.
ಮೀಸಲಾತಿ:ಭಾರತ ಸರ್ಕಾರದ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಇತರ ಹಿಂದುಳಿದ ವರ್ಗಗಳು (OBC), ಮತ್ತು ವಿಕಲಾಂಗ ವಿದ್ಯಾರ್ಥಿಗಳಿಗೆ (PWD)ಮೀಸಲಾತಿ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.