Top 8 Highest Paying Jobs: ನಾವೂ ಕೂಡ ಕೈತುಂಬಾ ಗಳಿಸಬೇಕು, ಹೆಚ್ಚು ವೇತನ ಸಿಗುವ ಕೆಲಸಕ್ಕೆ ಸೇರಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಇಲ್ಲಿದೆ ಅತಿ ಹೆಚ್ಚು ಸಂಭಾವನೆ ಪಡೆಯಲು ಸಾಧ್ಯವಾಗುವ ಪ್ರಪಂಚದ ಟಾಪ್ 8 ಉದ್ಯೋಗಗಳ ಬಗ್ಗೆ ಮಾಹಿತಿ. 


COMMERCIAL BREAK
SCROLL TO CONTINUE READING

ಅತಿ ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳೆಂದರೆ:- 
ವ್ಯಾಪಾರ ವಿಶ್ಲೇಷಕ (Business Analyst): 

ಅತಿ ಹೆಚ್ಚು ವೇತನ ಲಭ್ಯವಿರುವ ಉದ್ಯೋಗದ ಬಗ್ಗೆ ಮಾತನಾಡುವುದಾದರೆ ಇಡೀ ಜಗತ್ತಿನಲ್ಲಿ ವ್ಯಾಪಾರ ವಿಶ್ಲೇಷಕರ ಹೆಸರು ಅಗ್ರಸ್ಥಾನದಲ್ಲಿ ಬರುತ್ತದೆ. ಓರ್ವ ಬಿಸಿನೆಸ್ ಅನಾಲಿಸ್ಟ್ ಪ್ರಾರಂಭಿಕ ಹಂತದಲ್ಲಿ ಸುಮಾರು 8 ಲಕ್ಷ ರೂ. ಮಾಸಿಕ ವೇತನವನ್ನು ಪಡೆಯಬಹುದು. ಅನುಭವಿ ವ್ಯಾಪಾರ ವಿಶ್ಲೇಷಕರ ತಿಂಗಳ ವೇತನ ಅಂದಾಜು 25 ಲಕ್ಷ ರೂ.ವರೆಗೆ ಇರಲಿದೆ. 


ಲಾ ಪ್ರೊಫೆಷನಲ್ (A legal professional): 
ವಿಶ್ವದಾದ್ಯಂತ ಕಾನೂನು ವೃತ್ತಿಪರರು ತಮ್ಮ ಅನುಭವ ಮತ್ತು ಚಾಣಾಕ್ಷತೆಯ ಆಧಾರದ ಮೇಲೆ ಹೆಚ್ಚಿನ ವೇತನ ಗಳಿಸುತ್ತಾರೆ. ಅನುಭವಿ ಕಾನೂನು ವೃತ್ತಿಪರರ ಸಂಬಳ ತಿಂಗಳಿಗೆ ಅಂದಾಜು 15 ರಿಂದ 20 ಲಕ್ಷ ರೂ.ವರೆಗೆ ಇರಲಿದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಕೊಪ್ಪಳ ವಿವಿಗೆ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ಡಿ.19 ರವರೆಗೆ ವಿಸ್ತರಣೆ


ಇನ್ವೆಸ್ಟ್ಮೆಂಟ್ ಬ್ಯಾಂಕರ್ (Investment Banker): 
ಗಮನಾರ್ಹವಾಗಿ ಇನ್ವೆಸ್ಟ್ಮೆಂಟ್  ಬ್ಯಾಂಕರ್‌ಗಳಿಗೆ ಯಾವುದೇ ನಿಗದಿತ ವೇತನವನ್ನು ಫಿಕ್ಸ್ ಮಾಡಲಾಗುವುದಿಲ್ಲ. ಆದರೆ ಇನ್ವೆಸ್ಟ್ಮೆಂಟ್  ಬ್ಯಾಂಕರ್‌ಗಳು ಸಹ ಸುಲಭವಾಗಿ ತಿಂಗಳಿಗೆ 5 ಲಕ್ಷದಿಂದ 25 ಲಕ್ಷ ರೂ. ವರೆಗೆ ಸಂಪಾದಿಸುತ್ತಾರೆ ಎಂದು ಅಂದಾಜಿಸಲಾಗಿದೆ. 


ಐಟಿ ಇಂಜಿನಿಯರ್ (IT Engineer): 
ಪ್ರಸ್ತುತ ಎಲ್ಲೆಗೆ ಸಾಫ್ಟ್‌ವೇರ್ ಇಲ್ಲವೇ ಐಟಿ ಎಂಜಿನಿಯರ್ ಎಂದರೆ ಅವರು ಅತಿ ಹೆಚ್ಚು ಸಂಬಳ ಪಡೆಯುವವರು ಎಂಬ ಕಲ್ಪನೆ ಇದೆ. ಈ ತಂತ್ರಜ್ಞಾನ ಯುಗದಲ್ಲಿ ಸಾಫ್ಟ್‌ವೇರ್ ಅಥವಾ ಐಟಿ ಎಂಜಿನಿಯರ್ ಗಳಿಗೆ ತಿಂಗಳಿಗೆ 2 ಲಕ್ಷದಿಂದ 20 ಲಕ್ಷ ರೂ.ವರೆಗೆ ವೇತನ ಸಿಗಬಹುದು. 


ಚಾರ್ಟರ್ಡ್ ಅಕೌಂಟೆಂಟ್ (Chartered Accountant): 
ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 4 ರಿಂದ 5 ವರ್ಷಗಳ ಅನುಭವವನ್ನು ಹೊಂದಿರುವಾಗ ಚಾರ್ಟರ್ಡ್ ಅಕೌಂಟೆಂಟ್  ಗೆ ಮಾಸಿಕ  5 ಲಕ್ಷದಿಂದ 24 ಲಕ್ಷ ರೂ.ವರೆಗೆ ವೇತನ ಲಭ್ಯವಾಗಲಿದೆ. 


ಇದನ್ನೂ ಓದಿ- ಬಿ.ಇಡಿ ಕೋರ್ಸ್: ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ; ದಾಖಲೆ ಪರಿಶೀಲನೆ ಡಿ.15 ರಿಂದ


ಡಿಜಿಟಲ್ ಮಾರ್ಕೆಟಿಂಗ್ (Digital marketing): 
ಪ್ರಸ್ತುತ ಮಾರುಕಟ್ಟೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಒಂದು ಉದಯೋನ್ಮುಖ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ವೃತ್ತಿಪರರು ತಮ್ಮ ಕೆಲಸಕ್ಕಾಗಿ ತಿಂಗಳಿಗೆ 15 ರಿಂದ 18 ಲಕ್ಷ ರೂ.ವರೆಗೆ ವೇತನ ಗಳಿಸಬಹುದು. 


ವಾಯುಯಾನ ಕ್ಷೇತ್ರ (Aviation sector): 
ವಿಮಾನಯಾನ ವಲಯದಲ್ಲಿಯೂ ಕೆಲವು ಉದ್ಯೋಗಗಳಿಗೆ ಮಾಸಿಕ ಲಕ್ಷಾಂತರ ರೂ ವೇತನವನ್ನು ಪಾವತಿಸಲಾಗುತ್ತದೆ. ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ನೀವು ತಿಂಗಳಿಗೆ 5 ರಿಂದ 10 ಲಕ್ಷ ರೂ.ವರೆಗೆ ಸಂಪಾದಿಸಬಹುದು. 


ಮ್ಯಾನೇಜ್‌ಮೆಂಟ್ ಪ್ರೊಫೆಷನಲ್ (Management Professional): 
ಮ್ಯಾನೇಜ್‌ಮೆಂಟ್ ಪ್ರೊಫೆಷನಲ್ ಎಂದರೆ ನಿರ್ವಹಣಾ ವೃತ್ತಿಪರರ ಆರಂಭಿಕ ವೇತನವು ತೀರಾ ಕಡಿಮೆಯೇ ಇರುತ್ತದೆ. ಆದರೆ, ಅನುಭವ ಮತ್ತು ಸಾಧನೆಯ ಆಧಾರದ ಮೇಲೆ ಮ್ಯಾನೇಜ್ಮೆಂಟ್ ವೃತ್ತಿಪರರು ತಿಂಗಳಿಗೆ 50 ಲಕ್ಷ ರೂ.ವರೆಗೆ ವೇತನ ಗಳಿಸಬಹುದು ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.