Fake Stamp Paper Scam : ಬೆಂಗಳೂರಲ್ಲಿ 1.33 ಕೋಟಿ ಮೌಲ್ಯದ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ!
ಬಂಧಿತರಿಂದ ಒಟ್ಟು 1.33 ಕೋಟಿ ರೂ. ಮೌಲ್ಯದ 2664 ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ಒಡೆಯರ ಕಾಲದಿಂದ ಈವರೆಗಿನ ಛಾಪಾ ಕಾಗದಗಳು ಪತ್ತೆಯಾಗಿವೆ. ಈ ಗ್ಯಾಂಗ್ ಛಾಪಾ ಕಾಗದಗಳ ಮೂಲಕ ಪ್ರಾಪರ್ಟಿಗಳ ಜಿಪಿಎ ಮಾಡುತ್ತಿದ್ದರು.
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂದಿದೆ. ನಕಲಿ ಛಾಪಾ ಕಾಗದದ ಮೂಲಕ ಡೀಲ್ ನಡೆಸುತ್ತಿದ್ದ ಹನ್ನೊಂದು ಆರೋಪಿಗಳ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಬಂಧಿತರಿಂದ ಒಟ್ಟು 1.33 ಕೋಟಿ ರೂ. ಮೌಲ್ಯದ 2664 ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ಒಡೆಯರ ಕಾಲದಿಂದ ಈವರೆಗಿನ ಛಾಪಾ ಕಾಗದಗಳು ಪತ್ತೆಯಾಗಿವೆ. ಈ ಗ್ಯಾಂಗ್ ಛಾಪಾ ಕಾಗದಗಳ ಮೂಲಕ ಪ್ರಾಪರ್ಟಿಗಳ ಜಿಪಿಎ ಮಾಡುತ್ತಿದ್ದರು.
ಇದನ್ನೂ ಓದಿ : ಮತ್ತೆ ಕಿರಿಕ್ ಮಾಡಿಕೊಂಡ ಸುನಾಮಿ ಕಿಟ್ಟಿ: ದೂರಿಗೆ ಪ್ರತಿದೂರು ದಾಖಲು
ನಾಲ್ಕು ಕಡೆ ನಕಲಿ ಛಾಪಾ ಕಾಗದ ಬಳಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 1990,1995, 2002, 2009 ರಲ್ಲಿ ರಿಜಿಸ್ಟರ್ ಆಗಿರುವಂತೆ ದಾಖಲಾತಿ ಸೃಷ್ಟಿ ಮಾಡಿದ್ದಾರೆ. ನಾಲ್ಕು ಕೇಸ್ ನಲ್ಲಿ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಆಸ್ತಿಗಳ ಜಿಪಿಎ ಮಾಡಿದ್ದು ಬಯಲಿಗೆ ಬಂದಿದೆ. ಈ ಗ್ಯಾಂಗ್ ಒಂದು ಛಾಪಾ ಕಾಗದವನ್ನು ಐದರಿಂದ ಎಂಟು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.
ಸಧ್ಯ ಆರೋಪಿಗಳಿಂದ 118 ನಕಲಿ ಸೀಲ್ ಗಳು ವಶಪಡಿಸಿಕೊಂಡಿದ್ದಾರೆ. ನಕಲಿ ಛಾಪಾ ಕಾಗದಕ್ಕೆ ನಕಲಿ ಸೀಲ್ ಹಾಕಿ ವಂಚನೆ ಮಾಡುತ್ತಿದ್ದರು. ಆರೋಪಿಗಳ ವಂಚನೆ ಬಗ್ಗೆ ಸಿಸಿಬಿ ತನಿಖೆ ನಡೆಸಿ, ಈ ಹಗರಣವನ್ನ ಬೆಳಕಿಗೆ ತಂದಿದ್ದಾರೆ.
ಈ ಆರೋಪಿಗಳು ಎರಡು ರೀತಿಯಲ್ಲಿ ವಂಚನೆ ಮಾಡ್ತಿದ್ದರು, ಒಂದು ಕೇವಲ ನಕಲಿ ಛಾಪಾ ಕಾಗದ ನೀಡುವುದು ಹಾಗೂ ನಕಲಿ ಛಾಪಾ ಕಾಗದ ಬಳಸಿ ನಕಲಿ ದಾಖಲಾತಿಗಳನ್ನು ತಯಾರಿಸಿ ಆಸ್ತಿ ಪತ್ರ, ಜಿಪಿಎ ಮಾಡುವುದನ್ನ ಮಾಡುತ್ತಿದ್ದರು. ಬಂಧಿತ ಆರೋಪಿಗಳು ನಗರದಕಂದಾಯ ಭವನದಲ್ಲಿ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ : ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.