ಬೆಂಗಳೂರು: ಡ್ರಗ್ಸ್ ವಿರುದ್ಧ ಸಿಲಿಕಾನ್ ಸಿಟಿ ಪೊಲೀಸರು ಸಮರ ಸಾರಿದ್ದಾರೆ. ಜುಲೈ ತಿಂಗಳಲ್ಲಿ ಬರೋಬ್ಬರಿ 18 ಕೋಟಿ ಮೌಲ್ಯದ 1785 ಕೆ.ಜಿ. ತೂಕದ ವಿವಿಧ ಮಾದರಿಯ ಮಾದಕ ವಸ್ತು ಸೀಜ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಮಾದಕ ವಸ್ತು ಸೇವನೆ ಹಾಗೂ ಮಾರಾಟ ಮಾಡುವವರ ವಿರುದ್ಧ ತಿಂಗಳಲ್ಲಿ 378 ಕೇಸ್ ಹಾಕಲಾಗಿದ್ದು, 474 ಭಾರತೀಯರು ಹಾಗೂ 13 ವಿದೇಶಿ ಪ್ರಜೆಗಳನ್ನ ಬಂಧಿಸಲಾಗಿದೆ. 


ಇದನ್ನೂ ಓದಿ- ಜೈಪುರ-ಮುಂಬೈ ಎಕ್ಸ್‌ಪ್ರೆಸ್ ನಲ್ಲಿ ಗುಂಡಿನ ದಾಳಿ: ಎಎಸ್‌ಐ ಸೇರಿದಂತೆ ನಾಲ್ವರು ಮೃತ


72 ಪ್ರಕರಣಗಳಲ್ಲಿ ಡ್ರಗ್ಸ್ ಪೆಡ್ಲರ್ ಗಳ‌ ಮೇಲೆ 306 ಪ್ರಕರಣಗಳಲ್ಲಿ ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.  ಅಕ್ರಮವಾಗಿ ನೆಲೆಸಿದ್ದ 11 ಜನ ವಿದೇಶಿಯರನ್ನ ಗಡಿಪಾರು ಮಾಡಲಾಗಿದೆ‌. ವಶಪಡಿಸಿಕೊಂಡ ಡ್ರಗ್ ನಲ್ಲಿ 1,723 ಕೆ.ಜಿ. ಅಫೀಮು, 55,895 ಕೆ.ಜಿ. ಹೆರಾಯಿನ್, 40 ಗ್ರಾಂ ಹಾಶಿಶ್ ಆಯಿಲ್, 1.026 ಕೆ.ಜಿ. ಚರಸ್, 467 ಗ್ರಾಂ,  ಸೇರಿದಂತೆ 572 ವಿವಿಧ ರೀತಿಯ  ಮಾತ್ರೆಗಳು 43 ಎಲ್ ಎಸ್ ಡಿ ಸ್ಟಿಪ್ಸ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ- Rs 99,999 Lost In One Click! ಒಂದೇ ಕ್ಲಿಕ್‌ನಿಂದ 99,999 ರೂಪಾಯಿ ಕಳೆದುಕೊಂಡ ವ್ಯಕ್ತಿ!


ಮಾದಕ ವಸ್ತು ಸೇವನೆ ಬಗ್ಗೆ ಅರಿವು ಮೂಡಿಸಲು ಶೈಕ್ಷಣಿಕ ಕಾಲೇಜುಗಳಿಗೆ ಹೋಗಿ ಪೊಲೀಸರು ತಿಳುವಳಿಕೆ ಮೂಡಿಸುತ್ತಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿ 21 ಪ್ರಕರಣಗಳನ್ನ‌ ಮತ್ತು ಸೇವನೆ ಮಾಡುತ್ತಿದ್ದವರ ವಿರುದ್ಧ 32  ಪ್ರಕರಣ ದಾಖಲಿಸಿದ್ದಾರೆ. ತಂಬಾಕು ಪದಾರ್ಥಗಳನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ 24 ಕೇಸ್ ದಾಖಲಿಸಿಕೊಳ್ಳಲಾಗಿದೆ. ಇನ್ನೂ 3588 ಲಘು ಪ್ರಕರಣ ದಾಖಲಿಸಿ 5,99,350 ರೂ ದಂಡ ವಿಧಿಸಲಾಗಿದೆ. ಅದೆನೇ ಇರ್ಲಿ ಸಿಲಿಕಾನ್ ಸಿಟಿಯಲ್ಲಿ ಮಾದಕ ಜಗತ್ತನ್ನು ನಿಯಂತ್ರಿಸಲು ಪೊಲೀಸರು ಕೈಗೊಂಡಿರುವ ಕಾರ್ಯ ಶ್ಲಾಘನೀಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.