Firing in Jaipur Mumbai express: ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನಲ್ಲಿ ಗುಂಡಿನ ದಾಳಿಯಲ್ಲಿ ಎಎಸ್‌ಐ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪಾಲ್ಘರ್ ನಿಲ್ದಾಣವನ್ನು ದಾಟಿದ ನಂತರ ಚಲಿಸುತ್ತಿದ್ದ ರೈಲಿನೊಳಗೆ ಆರ್‌ಪಿಎಫ್ ಕಾನ್‌ಸ್ಟೆಬಲ್ ಗುಂಡು ಹಾರಿಸಿದ್ದು ಈ ದುರ್ಘಟನೆ ನಡೆದಿದೆ.
ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪಾಲ್ಘರ್ ನಿಲ್ದಾಣವನ್ನು ಬಿಟ್ಟು ಮುಂದೆ ಸಾಗುತ್ತಿದ್ದಂತೆ ಆರ್‌ಪಿಎಫ್ ಕಾನ್‌ಸ್ಟೆಬಲ್ ಮೊದಲಿಗೆ ಓರ್ವ ಆರ್‌ಪಿಎಫ್ ಎಎಸ್‌ಐ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ಮತ್ತೊಂದು ಬೋಗಿಗೆ ಹೋಗಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದು ಬಳಿಕ ದಹಿಸರ್ ನಿಲ್ದಾಣದ ಬಳಿ ರೈಲಿನಿಂದ ಜಿಗಿದಿದ್ದಾನೆ. ನಂತರ ಆರೋಪಿ ಕಾನ್‌ಸ್ಟೆಬಲ್ ನನ್ನು ಆತನ ಶಸ್ತ್ರಾಸ್ತ್ರ ಸಮೇತ ಬಂಧಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ- ವೀಕೆಂಡ್ ಮಸ್ತಿ, ಎಣ್ಣೆ ಏಟು: ಸಿಲಿಕಾನ್ ಸಿಟಿಯಲ್ಲಿ 2 ಅಪಘಾತ, ಯುವತಿಯರ ರಂಪಾಟ
ಆರೋಪಿ, ಆರ್‌ಪಿಎಫ್ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಎಂದು ಗುರುತಿಸಲಾಗಿದ್ದು, ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ತನ್ನ ಅಧಿಕೃತ ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿ, ಮತ್ತೊಬ್ಬ ಆರ್‌ಪಿಎಫ್ ಸಹೋದ್ಯೋಗಿ, ಅವರ ಬೆಂಗಾವಲು ಕರ್ತವ್ಯದ ಎಎಸ್‌ಐ ಟಿಕಾ ರಾಮ್ ಮೀನಾ ಮತ್ತು ರೈಲಿನಲ್ಲಿದ್ದ ಮೂವರು ಪ್ರಯಾಣಿಕರನ್ನು ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಕಾ ರಾಮ್ ಮೀನಾ ರಾಜಸ್ಥಾನದ ಸವಾಯಿ ಮಾಧೋಪುರ ನಿವಾಸಿಯಾಗಿದ್ದು, ಚೇತನ್ ಸಿಂಗ್ ಉತ್ತರ ಪ್ರದೇಶದ ಹತ್ರಾಸ್ ಮೂಲದವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ- Punjab ಮಾಜಿ ಉಪಮುಖ್ಯಮಂತ್ರಿ ಓಪಿ ಸೋನಿ ಅವರನ್ನು ವಶಕ್ಕೆ ಪಡೆದ ವಿಜಿಲೆನ್ಸ್, ಕಾರಣ ಏನು?
ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ದೃಶ್ಯಗಳು...
Four people were shot dead in the firing incident inside the Jaipur Express train (12956). The accused has been arrested.
Visuals from Mumbai Central Railway Station pic.twitter.com/RgNjYOTbMD
— ANI (@ANI) July 31, 2023
ಈ ಆಘಾತಕಾರಿ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಡಿಆರ್‌ಎಂ ನೀರಜ್ ವರ್ಮಾ, "ಇದೊಂದು ದುರದೃಷ್ಟಕರ ಘಟನೆ. ಘಟನೆಯಲ್ಲಿ ನಾಲ್ವರಿಗೆ ಗುಂಡು ಹಾರಿಸಲಾಗಿದೆ. ನಾವು ಸಾಕ್ಷಿಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
#WATCH | Mumbai: DRM Neeraj Kumar says, "At around 6 am we got to know that an RPF constable, who was on escorting duty opened fire...Four people have been shot dead...Our railway officer reached the spot. The families have been contacted. Ex-gratia will be given." pic.twitter.com/Zl7FfoUd8i
— ANI (@ANI) July 31, 2023
ಈ ಬಗ್ಗೆ ಮಾತನಾಡಿರುವ ಪಶ್ಚಿಮ ರೈಲ್ವೇಯ ಸಿಪಿಆರ್‌ಓ, ಮುಂಬೈ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಇಂದು ದುರದೃಷ್ಟಕರ ಘಟನೆ ವರದಿಯಾಗಿದೆ. ಆರ್‌ಪಿಎಫ್ ಕಾನ್‌ಸ್ಟೆಬಲ್, ಚೇತನ್ ಕುಮಾರ್ ತನ್ನ ಸಹೋದ್ಯೋಗಿ ಎಎಸ್‌ಐ ಟಿಕಾರಾಂ ಮೀನಾ ಮೇಲೆ ಗುಂಡು ಹಾರಿಸಿದ್ದಾನೆ ಮತ್ತು ಘಟನೆಯ ಸಂದರ್ಭದಲ್ಲಿ ಇತರ ಮೂವರು ಪ್ರಯಾಣಿಕರಿಗೂ ಗುಂಡು ಹಾರಿಸಲಾಗಿದೆ. ಪ್ರಾಥಮಿಕ ಪ್ರಕಾರ ತನಿಖೆ, ಆತ ತನ್ನ ಅಧಿಕೃತ ಅಸ್ತ್ರ ಬಳಸಿ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಗುಂಡಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
#WATCH | CPRO Western Railway, says "An unfortunate incident has been reported today in Mumbai-Jaipur Superfast Express. An RPF constable, Chetan Kumar opened fire on his colleague ASI Tikaram Meena and during the incident, three other passengers were also shot. According to a… pic.twitter.com/mzVnz7Rn7v
— ANI (@ANI) July 31, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.