ಕೊಚ್ಚಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆ ನಡೆಸಿ 1,200 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 200 ಕೆಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದು, 6 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಅಫ್ಘಾನಿಸ್ತಾನದಲ್ಲಿ ತಯಾರಿಸಿದ ಹೆರಾಯಿನ್ ಅನ್ನು ಇರಾನ್ ಮೀನುಗಾರಿಕಾ ಹಡಗಿನಲ್ಲಿ ತುಂಬಿಕೊಂಡು ಪಾಕಿಸ್ತಾನ ಮಾರ್ಗವಾಗಿ ಭಾರತಕ್ಕೆ ತರಲಾಗುತ್ತಿತ್ತು. ಈ ಮಾದಕವಸ್ತುವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು ಅಂತಾ ತಿಳಿದುಬಂದಿದೆ.


ಇದನ್ನೂ ಓದಿ: ಟ್ರಕ್‌ಗೆ ಬಸ್ ಡಿಕ್ಕಿ: ಬೆಂಕಿ ಹೊತ್ತಿ 11 ಪ್ರಯಾಣಿಕರ ಸಜೀವ ದಹನ!, 38ಕ್ಕೂ ಹೆಚ್ಚು ಮಂದಿಗೆ ಗಾಯ


ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂ. ಬೆಲೆಬಾಳುವ ಹೆರಾಯಿನ್ ಸೀಜ್ ಮಾಡಲಾಗಿದ್ದು, 6 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ. ಹೆರಾಯಿನ್‌ನೊಂದಿಗೆ ದೋಣಿಯನ್ನು ಮಟ್ಟಂಚೇರಿ ವಾರ್ಫ್‌ಗೆ ತರಲಾಗಿದೆ ಎಂದು ಎನ್‌ಸಿಬಿಯ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಸಂಜಯ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.


Selfie With Tiger: ಸೆಲ್ಫಿಗಾಗಿ ಕಾಡಿನಲ್ಲಿ ಹುಲಿ ಬೆನ್ನಟ್ಟಿದ ಯುವಕರು, ಮುಂದಾಗಿದ್ದೇನು?


ಡ್ರಗ್ಸ್​ ಪ್ಯಾಕೆಟ್‌ಗಳು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕಾರ್ಟೆಲ್‌ಗಳಿಗೆ ವಿಶಿಷ್ಟವಾದ ಗುರುತುಗಳು ಮತ್ತು ಪ್ಯಾಕಿಂಗ್ ವಿಶೇಷತೆಗಳನ್ನು ಹೊಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೆಲವು ಡ್ರಗ್ ಪ್ಯಾಕೆಟ್‌ಗಳ ‘ಚೇಳು’ ಸೀಲ್ ಗುರುತುಗಳನ್ನು ಹೊಂದಿದ್ದರೆ, ಇತರವುಗಳು ‘ಡ್ರ್ಯಾಗನ್’ ಸೀಲ್ ಗುರುತುಗಳನ್ನು ಹೊಂದಿದ್ದವು ಅವರು ಮಾಹಿತಿ ನೀಡಿದ್ದಾರೆ.


ಬಹುಶಃ ಹೆರಾಯಿನ್ ಅನ್ನು ಮೊದಲು ಪಾಕಿಸ್ತಾನದಿಂದ ದೋಣಿಯಲ್ಲಿ ಕಳುಹಿಸಲಾಗಿದೆ. ಇದಾದ ಬಳಿಕ ಮಾರ್ಗಮಧ್ಯೆ ಇರಾನ್ ಹಡಗಿಗೆ ಡ್ರಗ್ಸ್​ ರವಾನಿಸಲಾಗಿದೆ. ನಂತರ ಶ್ರೀಲಂಕಾದ ಹಡಗಿಗೆ ಲೋಡ್ ಮಾಡಿಕೊಳ್ಳುವಷ್ಟರಲ್ಲಿ ಭಾರತೀಯ ಅಧಿಕಾರಿಗಳ ಕೈಗೆ ಸಿಕ್ಕಿದೆ.  ಇದಲ್ಲದೆ ಇರಾನ್ ಹಡಗಿನಲ್ಲಿದ್ದ ಆರೋಪಿಗಳು ಸಮುದ್ರಕ್ಕೆ ಹಾರಿ ತಪ್ಪಿಸಿಕೊಳ್ಳಲು ಮತ್ತು ಹೆರಾಯಿನ್ ಅನ್ನು ನೀರಿನಲ್ಲಿ ಎಸೆಯಲು ಪ್ರಯತ್ನಿಸಿದ್ದರು ಎಂದು ಎನ್‌ಸಿಬಿ ಅಧಿಕಾರಿ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎನ್​ಸಿಬಿ ಅಧಿಕಾರಿಗಳು ಬಂಧಿತರ ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.