Selfie With Tiger Video Viral : ಮೀಸಲು ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಕಾಡುಪ್ರಾಣಿಗಳಿವೆ, ಕಾಡುಪ್ರಾಣಿಗಳ ಹತ್ತಿರ ಹೋಗದಂತೆ ಎಚ್ಚರಿಕೆಯ ದೊಡ್ಡ ದೊಡ್ಡ ಬೋರ್ಡ್‌ಗಳು ವಿಶೇಷವಾಗಿ ಗೋಚರಿಸುತ್ತವೆ. ಇಂತಹ ಸೂಚನಾ ಫಲಕಗಳನ್ನು ಅಳವಡಿಸದಿದ್ದರೆ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಅಪಾಯವಿರುತ್ತದೆ. ಅದಕ್ಕಾಗಿಯೇ ಇಂತಹ ಎಚ್ಚರಿಕೆಗಳನ್ನು ಹಾಕಲಾಗಿರುತ್ತದೆ.
ಇದನ್ನೂ ಓದಿ : Viral video : ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ತಿರುಮಲ ಬೆಟ್ಟ ಹತ್ತಿದ ಪತಿರಾಯ.!
ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ಕೆಲ ಯುವಕರು ಅರಣ್ಯ ಇಲಾಖೆ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕಾಡಿನಲ್ಲಿರುವ ಕಾಡುಪ್ರಾಣಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಕೆಲವೊಮ್ಮೆ ಅರಿವಿಲ್ಲದೆ ವನ್ಯಜೀವಿಗಳಿಗೆ ತೊಂದರೆ ಕೊಡುವ ಮೂಲಕ ಅಪಾಯ ತಂದುಕೊಳ್ಳುತ್ತಿದ್ದಾರೆ. ನಾವು ನೋಡಲಿರುವ ಈ ವಿಡಿಯೋ ಅಂತಹುದೇ ಆಗಿದೆ.
Remember that if you see a large carnivore, it wanted you to see it. It never wanted to be chased. The tiger can maul you to death feeling threatened. Please don’t resort to this wired behaviour. pic.twitter.com/e0ikR90aTB
— Susanta Nanda (@susantananda3) October 6, 2022
ಈಗ ನೀವು ಕಂಡ ದೃಶ್ಯ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿದೆ. ರಸ್ತೆ ದಾಟುತ್ತಿದ್ದ ಹುಲಿಯನ್ನು ಕಂಡ ಯುವಕರು ಅಲ್ಲೇ ವಾಹನ ನಿಲ್ಲಿಸಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಯತ್ನಿಸಿದ್ದಾರೆ. ತಾವು ಹುಲಿಯನ್ನು ಅಟ್ಟಿಸಿಕೊಂಡು ಬರುತ್ತಿದ್ದೇವೆ ಎಂಬುದೇ ಮರೆತು ಅದರ ಸಮೀಪಕ್ಕೆ ಹೋಗುತ್ತಾರೆ. ಅವರಲ್ಲಿ ಒಬ್ಬ ಯುವಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹುಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ.
ಇದನ್ನೂ ಓದಿ : Viral Love Story : 78 ವರ್ಷದ ಅಜ್ಜನನ್ನು 3 ವರ್ಷ ಪ್ರೀತಿಸಿ ಮದುವೆಯಾದ 18 ರ ಬಾಲೆ.!
ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಆಸಕ್ತಿದಾಯಕ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಮೂಲಕ ಜನರನ್ನು ಸುಶಾಂತ್ ನಂದಾ ಎಚ್ಚರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.