Crime News: ಕೊಡಗು ಗಡಿ ಭಾಗ ಹೆದ್ಧಾರಿಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಕೇವಲ ಹತ್ತೇ ಹತ್ತು ದಿನಗಳಲ್ಲಿ ಭೇದಿಸಿರುವ ಗೋಣಿಕೊಪ್ಪ  ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಗೋಣಿಕೊಪ್ಪ ಬಳಿ ಹೆದ್ದಾರಿಯಲ್ಲಿ 09 ಡಿಸೆಂಬರ್ 2023ರ ಮಧ್ಯರಾತ್ರಿ ದರೋಡೆ ಪ್ರಕರಣ ನಡೆದಿತ್ತು. ಕೇರಳ ಮೂಲದ ಚಿನ್ನಾಭರಣ  ವ್ಯಾಪಾರಿ ಶಂಜಾದ್  ಎಂಬಾತನ ಕಾರ್ ತಡೆದು 61 ಲಕ್ಷದ 71 ಸಾವಿರ  ರೂ.. ದರೋಡೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಗೋಣಿಕೊಪ್ಪ  ಪೋಲಿಸರು ಎಲ್ಲಾ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.


ಈ ಕುರಿತಂತೆ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ಹಂಚಿಕೊಂಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಆರೋಪಿಗಳ ಬಗ್ಗೆ ವಿವರಿಸಿದರು.


ಇದನ್ನೂ ಓದಿ-  ಓಡಿ ಹೋಗಿ ಮದುವೆಯಾದ ಜೋಡಿಹಕ್ಕಿ: ಯುವಕನ ತಂದೆ-ತಾಯಿ ಮೇಲೆ ಮಾರಣಾಂತಿಕ ಹಲ್ಲೆ


ಏನಿದು ಪ್ರಕರಣ? 
ವಾಸ್ತವವಾಗಿ, ಡಿಸೆಂಬರ್ 09ರಂದು ಕೇರಳದ ಚಿನ್ನಾಭರಣ ವ್ಯಾಪಾರಿ ಶಂಜಾದ್  ಎಂಬಾತ ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಿ 61 ಲಕ್ಷ   ನಗದು ತೆಗೆದುಕೊಂಡು ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ್ದ ದರೋಡೆಕೋರರು ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರದಲ್ಲಿ ಕಾರ್  ನಿಲ್ಲಿಸಿ ಹಣವನ್ನು ದೋಚಿ ಪರಾರಿಯಾಗಿದ್ದರು. 


ಇದನ್ನೂ ಓದಿ-  ನಿಧಿ ಹೆಸರಲ್ಲಿ 11 ಜನರ ಹತ್ಯೆ : ಹಂತಕನ ಬಂಧನ


ಘಟನೆ ಬಳಿಕ ಶಂಜಾದ್  ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ಮುಂದುವರೆಸಿದ್ದ ಕೊಡಗು ಪೊಲೀಸರು, ಆ ರಾತ್ರಿ.. ಆ ದಾರಿಯಲ್ಲಿ ಸಾಗಿದ್ದ ಎಲ್ಲಾ ವಾಹನಗಳನ್ನು ಕೇರಳ ಸೇರಿದಂತೆ ಕೊಡಗಿನ ಹೆದ್ದಾರಿಯಲ್ಲಿನ  300 ಸಿಸಿ ಕ್ಯಾಮರಗಳ ಮೂಲಕ ಪರಿಶೀಲನೆ ಮಾಡಿ ಪ್ರಕರಣದ ಬೆನ್ನುಹತ್ತಿದ್ದರು. ತನಿಖೆಯ ಹಂತದಲ್ಲಿ ಸ್ಥಳೀಯರು ಪ್ರಕರಣದಲ್ಲಿ ಪಾಲ್ಗೊಂಡಿರುವ ಸಂಶಯ ವ್ಯಾಕ್ತವಾದ ಹಿನ್ನೆಲೆ ವಿರಾಜಪೇಟೆಯ ಮಲೆತಿರಿಕೆಯಲ್ಲಿರುವ ನಾಲ್ಕು ಮಂದಿ ಪಾಲ್ಗೊಂಡದ್ದು ಬೆಳಕಿಗೆ ಬಂದಿದೆ. ಪೆರೂರು ದಿನೇಶ್ - ತ್ರಿಶೂರ್ ಜೈಲಿನಲ್ಲಿ ಕೊಲೆ ಕೇಸ್  ನಲ್ಲಿ ಇದ್ದ ಅಪರಾಧಿ,  ಪೆರೋಲ್ ಮೇಲೆ ವಿರಾಜಪೇಟೆಗೆ ಬಂದು ದರೋಡೆಯಲ್ಲಿ ಭಾಗಿಯಾಗಿ   ಮತ್ತೆ ಜೈಲಿಗೆ ಹೋಗಿದ್ದಾನೆ ಎಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.