ಓಡಿ ಹೋಗಿ ಮದುವೆಯಾದ ಜೋಡಿಹಕ್ಕಿ: ಯುವಕನ ತಂದೆ-ತಾಯಿ ಮೇಲೆ ಮಾರಣಾಂತಿಕ ಹಲ್ಲೆ

ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಹುಡುಗಿಯನ್ನು ಮದುವೆಯಾಗಿರುವ ಯುವಕನ ವಿರುದ್ಧ ಕುಪಿತಗೊಂಡು ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಸೋಮವಾರ (ಡಿ. 18) ಯುವಕನ ಮನೆಗೆ ನುಗ್ಗಿ ದಾಳಿ ನಡೆಸಿ, ಯುವಕನ ತಂದೆ ತಾಯಿಯನ್ನು ಹೊರಗೆ ಎಳೆತಂದು ನಡು ರಸ್ತೆಯಲ್ಲೇ ಮನಸೋ ಇಚ್ಚೆ  ಹಲ್ಲೆ ನಡೆಸಿದ್ದಾರೆ.   

Written by - Yashaswini V | Last Updated : Dec 19, 2023, 08:16 AM IST
  • ಪರಸ್ಪರ ಪ್ರೀತಿಸಿ ಮದುವೆಯಾದ ನವಜೋಡಿ
  • ಯುವತಿಯ ಕುಟುಂಬಸ್ಥರಿಂದ ಯುವಕನ ತಂದೆ-ತಾಯಿ ಮೇಲೆ ಹಲ್ಲೆ
  • ಗುಡಿಬಂಡೆ ತಾಲೂಕಿನ ದಪ್ಪರ್ತಿಯಲ್ಲಿ ಪ್ರಕರಣ ಬೆಳಕಿಗೆ
ಓಡಿ ಹೋಗಿ ಮದುವೆಯಾದ ಜೋಡಿಹಕ್ಕಿ: ಯುವಕನ ತಂದೆ-ತಾಯಿ ಮೇಲೆ ಮಾರಣಾಂತಿಕ ಹಲ್ಲೆ  title=

Crime News: ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಹಕ್ಕಿ ಓಡಿ ಹೋಗಿ ಮದುವೆಯಾಗಿದ್ದು, ಇದರಿಂದ ಕುಪಿತಗೊಂಡ ಯುವತಿ ಮನೆಯವರು ಯುವಕನ ತಂದೆ-ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗಾಗಿ ಮನೆಯವರು ಒಪ್ಪದ ಹಿನ್ನಲೆಯಲ್ಲಿ ಇದೇ ಭಾನುವಾರ (ಡಿಸೆಂಬರ್ 17) ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ. 

ಇದನ್ನೂ ಓದಿ- ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ಯುವತಿ ಧರಣಿ

ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಹುಡುಗಿಯನ್ನು ಮದುವೆಯಾಗಿರುವ ಯುವಕನ ವಿರುದ್ಧ ಕುಪಿತಗೊಂಡು ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಸೋಮವಾರ (ಡಿ. 18) ಯುವಕನ ಮನೆಗೆ ನುಗ್ಗಿ ದಾಳಿ ನಡೆಸಿ, ಯುವಕನ ತಂದೆ ತಾಯಿಯನ್ನು ಹೊರಗೆ ಎಳೆತಂದು ನಡು ರಸ್ತೆಯಲ್ಲೇ ಮನಸೋ ಇಚ್ಚೆ  ಹಲ್ಲೆ ನಡೆಸಿದ್ದಾರೆ. 

ಸೋಮವಾರ(ಡಿ.18) ಮಧ್ಯಾಹ್ನದ ವೇಳೆಗೆ ಸುಮಾರು 20 ಮಂದಿ ಅಂಕಿತಾ ಪೋಷಕರ ಕಡೆಯವರು ಯುವಕನ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ವೆಂಕಟಲಕ್ಷ್ಮಮ್ಮ ಹಾಗೂ ಗಂಗರಾಜುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. 

ಇದನ್ನೂ ಓದಿ- 150 ಗ್ರಾಂ ಚಿನ್ನ, 15 ಎಕರೆ ಭೂಮಿ & BMW ಬೇಡಿಕೆಯಿಂದ ಮದುವೆ ರದ್ದು: ವೈದ್ಯೆ ಆತ್ಮಹತ್ಯೆ!

ವಿಪರ್ಯಾಸವೆಂದರೆ, ಅಷ್ಟಕ್ಕೇ ತಣ್ಣಗಾಗದ ಯುವತಿ ಕಡೆಯವರು ಅಂಬುಲೆನ್ಸ್ ಸಹ ಗ್ರಾಮದೊಳಗೆ ಬರಲು ಬಿಡದೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಬಂದ ನಂತರ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ-ಯುವತಿ ಪರಾರಿಯಾಗಲು ಯುವಕನ ಪೋಷಕರು ಸಹ ಕಾರಣ ಎಂದು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News