ಬೆಂಗಳೂರು : ಎಚ್ಚರ ಯುವಕರೇ ಎಚ್ಚರ. ನಿಮ್ಮ ಸ್ನೇಹಿತೆಯನ್ನು ಬೇರೆಯವರಿಗೆ ಪರಿಚಯ ಮಾಡಿಕೊಡುವ ಮುನ್ನ ಈ ಸ್ಟೋರಿಯನ್ನು ಕಂಪ್ಲೀಟ್ ಆಗಿ ಓದಿ.‌ ಖಾಸಗಿ ವಿಡಿಯೋ, ಫೋಟೋ ಇರುವುದಾಗಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಸದ್ಯ ಜಯನಗರ ಪೊಲೀಸರು ಬಂಧಿಸಿದ್ದಾರೆ


COMMERCIAL BREAK
SCROLL TO CONTINUE READING

ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿ ಆರ್‌.ಟಿ.ನಗರದ ಅರಫಾತ್ ನನ್ನು ಬಂಧಿಸಿ 15 ಲಕ್ಷ ಮೌಲ್ಯದ 264 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ‌. ಆಗಿದ್ದಿಷ್ಟು
ಜಯನಗರದ ವಾಸವಿರುವ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವಗಾಲೇ ಅರ್ಧಕ್ಕೆ ಓದುವುದನ್ನ ಬಿಟ್ಟಿದ್ದಳು. 


ಇದನ್ನೂ ಓದಿ:500 ರೂಪಾಯಿ ನೋಟಿನ ಕಂತೆಗಳನ್ನು ದಾರಿಯುದ್ದಕೂ ಎಸೆದ Youtuber? ಯಾರು ಗೊತ್ತಾ ಆ ಸಿರಿವಂತ ? 


ಕಾಲೇಜಿನಲ್ಲಿ ಡ್ಯಾನಿಶ್ ಎಂಬಾತನ ಸ್ನೇಹವಾಗಿ ಅದು ಪ್ರೀತಿಗೆ ತಿರುಗಿತ್ತು. ಈ ಮಧ್ಯೆ ಆರೋಪಿ ಅರಫಾತ್ ಡ್ಯಾನಿಶ್ ಕಡೆಯಿಂದ ಯುವತಿಗೆ ಪರಿಚಯವಾಗಿದ್ದ. ಆದರೆ ಯುವತಿ ಹಾಗೂ ಡ್ಯಾನಿಶ್ ನಡುವೆ ಬ್ರೇಕಪ್ ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಅರಫಾತ್ ಯುವತಿಗೆ ಕರೆ ಮಾಡಿ ನೀನು ಡ್ಯಾನಿಶ್ ಜೊತೆಗಿರುವ ಖಾಸಗಿ ವಿಡಿಯೋ ಹಾಗೂ ಫೋಟೋ ಇದೆ. 


ಈ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದ. ಮನೆಯಲ್ಲಿ ಚಿನ್ನಾಭರಣ ತಂದುಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ. ಇದರಿಂದ ಬೆದರಿಂದ ಯುವತಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಆರೋಪಿಗೆ ನೀಡಿದ್ದಳು. ಇದಾದ ಆರು ತಿಂಗಳ ಬಳಿಕ ಮನೆಯಲ್ಲಿ ಚಿನ್ನಾಭರಣ ಇಲ್ಲದಿರುವುದು ಯುವತಿ ಪೋಷಕರಿಗೆ ಗೊತ್ತಾಗಿತ್ತು. 


ಇದನ್ನೂ ಓದಿ:ಬೆಂಗಳೂರಿನಲ್ಲಿ ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್‌ಗೆ ಸಚಿವ ಸಂಪುಟ ಅನುಮೋದನೆ


ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿದ್ದಕ್ಕೆ ಪೋಷಕರು ಅನುಮಾನ ವ್ಯಕ್ತಪಡಿಸಿ ಸ್ನೇಹಿತರೊಂದಿಗೆ ಸೇರಿ ಮನೆಯಲ್ಲಿ ಮಗಳು ಚಿನ್ನಾಭರಣ ಕಳವು ಮಾಡಿರುವುದಾಗಿ ದೂರು ನೀಡಿದ್ದರು. ಯುವತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ಕಹಾನಿ ಬಯಲಾಗಿದೆ. ಸದ್ಯ ಯುವತಿ ಹೇಳಿಕೆ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಯುವತಿಯ ಖಾಸಗಿ ವಿಡಿಯೋ ಇರುವುದಾಗಿ ಸುಳ್ಳು ಹೇಳಿರುವುದು ಗೊತ್ತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.