ಕಲಬುರಗಿ: ರಸ್ತೆಬದಿ ನಿಂತಿದ್ದ ಕಂಟೇನರ್‍ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ದಂಪತಿ ಸಾವನ್ನಪ್ಪಿರುವ ಘಟನೆ ನೇಲೋಗಿ ಕ್ರಾಸ್ ಬಳಿ ನಡೆದಿದೆ.


COMMERCIAL BREAK
SCROLL TO CONTINUE READING

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೇಲೋಗಿ ಕ್ರಾಸ್‍ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿಜಯಪುರ ಜಿಲ್ಲೆ ಸಿಂದಗಿಯ ಸಿಪಿಐ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.


ಇದನ್ನೂ ಓದಿ: Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..!


ರಸ್ತೆ ಬದಿ ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವೀಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ. ಪರಿಣಾಮ ಸಿಂದಗಿ ಸಿಪಿಐ ರವಿ ಉಕ್ಕುಂದ (43)  ಹಾಗೂ ಪತ್ನಿ ಮಧು (40) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.


ಸಿಂದಗಿಯಿಂದ ಕಲಬುರಗಿ ನಗರಕ್ಕೆ ಸಿಪಿಐ ರವಿ ಉಕ್ಕುಂದ ದಂಪತಿ ಆಗಮಿಸುತ್ತಿದ್ದರು. ಈ ವೇಳೆ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.


ಇದನ್ನೂ ಓದಿ: ದಲಿತ ಸಿಎಂ ವಿಚಾರ; ಸಂದರ್ಭ ಬಂದಾಗ ಹೈ ಕಮಾಂಡ್ ಗಮನಕ್ಕೆ : ಡಾ. ಜಿ ಪರಮೇಶ್ವರ್


ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.