Bangalore Crime : ದೇವರನ್ನೂ ಬಿಡದ ಕಳ್ಳ: ದೇವಸ್ಥಾನಕ್ಕೆ ನುಗ್ಗಿ ಬೆಳ್ಳಿ ಕದ್ದ ಖತರ್ನಾಕ್

ಬೆಂಗಳೂರು : ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ  ಮೇಲಿದ್ದ ಬೆಳ್ಳಿ ಆಭರಣಗಳನ್ನು ಖತರ್ನಾಕ್ ಖದೀಮನೊಬ್ಬ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯ ಗಣಪತಿ ದೇವಸ್ಥಾನದಲ್ಲಿ ಕಳೆದ ತಿಂಗಳು 24ರಂದು ಅಪರಿಚಿತ ತನ್ನ ಕೈಚಳಕ ತೋರಿ ಪರಾರಿಯಾಗಿದ್ದಾನೆ.‌

Written by - VISHWANATH HARIHARA | Edited by - Channabasava A Kashinakunti | Last Updated : Dec 7, 2022, 05:34 PM IST
  • ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಮೇಲಿದ್ದ ಬೆಳ್ಳಿ ಆಭರಣ
  • ಖತರ್ನಾಕ್ ಖದೀಮನೊಬ್ಬ ಕಳ್ಳತನ ಮಾಡಿರುವ ಘಟನೆ
  • ಖದೀಮ‌ನ ಕರಾಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
Bangalore Crime : ದೇವರನ್ನೂ ಬಿಡದ ಕಳ್ಳ: ದೇವಸ್ಥಾನಕ್ಕೆ ನುಗ್ಗಿ ಬೆಳ್ಳಿ ಕದ್ದ ಖತರ್ನಾಕ್ title=

ಬೆಂಗಳೂರು : ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಮೇಲಿದ್ದ ಬೆಳ್ಳಿ ಆಭರಣಗಳನ್ನು ಖತರ್ನಾಕ್ ಖದೀಮನೊಬ್ಬ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯ ಗಣಪತಿ ದೇವಸ್ಥಾನದಲ್ಲಿ ಕಳೆದ ತಿಂಗಳು 24ರಂದು ಅಪರಿಚಿತ ತನ್ನ ಕೈಚಳಕ ತೋರಿ ಪರಾರಿಯಾಗಿದ್ದಾನೆ.‌ ಖದೀಮ‌ನ ಕರಾಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೇವಸ್ಥಾನ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಚೋರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ‌.

ಕಳೆದ ತಿಂಗಳು 24ರಂದ ಅಮಾವಾಸ್ಯೆ ಹಿನ್ನೆಲೆ ಗಣಪತಿಗೆ ವಿಶೇಷ ಪೂಜೆ ನಡೆದಿತ್ತು. ಪೂಜೆಯಲ್ಲಿ ನೂರಾರು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಿದ್ದರು‌‌. ಎಂದಿನಂತೆ ಅರ್ಚಕ ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮಾರನೇ ದಿನ ಮುಂಜಾನೆ ದೇವಸ್ಥಾನಕ್ಕೆ ಬಂದು ನೋಡಿದಾಗ ಮೂರ್ತಿ ಪಕ್ಕದಲ್ಲಿದ್ದ ಬೆಳ್ಳಿ ದೀಪ,  ಆಯುಧ ಹಾಗೂ ಬೆಳ್ಳಿ ಪಾದವನ್ನ ಕದ್ದು ಪರಾರಿಯಾಗಿದ್ದಾನೆ. ಸಿಸಿಟಿವಿ ಪರಿಶೀಲಿಸಿದಾಗ ದೇವಸ್ಥಾನದ ಹಿಂಬದಿಯಿಂದ ಖದೀಮ ನುಸುಳಿ ಬಂದಿರುವುದು ಗೊತ್ತಾಗಿದೆ.‌ ದೇವರ ಆಭರಣಗಳನ್ನ ಕದ್ದ ಬಳಿಕ ಹುಂಡಿಯಲ್ಲಿ ಹಣ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ್ದಾನೆ‌. ‌ ಕೈಗೆ ಸಿಕ್ಕ ಎಲ್ಲಾ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ನಾಪತ್ತೆಯಾಗಿರುವ ಖದೀಮನಿಗಾಗಿ ಬಸವೇಶ್ವರ ನಗರ ಪೊಲೀಸರು  ಶೋಧ ನಡೆಸಿದ್ದಾರೆ.

ಇದನ್ನೂ ಓದಿ : “ಶೀಘ್ರವೇ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿ”: ಸಚಿವ ಸೋಮಣ್ಣ ಖಡಕ್ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News