ಬೆಂಗಳೂರು: ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆಗಳ ವೀಸಾ ಹಾಗೂ ಪಾಸ್ ಪೋರ್ಟ್ ನವೀಕರಿಸಲು ಸಹಕರಿಸಿ ಭಾರತದಲ್ಲಿ ಸುಮಾರು 17 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಉಗಾಂಡ ದೇಶದ ಪ್ರಜೆಯನ್ನು ಗಡಿಪಾರು ಮಾಡಲಾಗಿದೆ‌.


COMMERCIAL BREAK
SCROLL TO CONTINUE READING

ಬೋಸ್ಕೋ ಕಾವೇಸಿ ಗಡಿಪಾರಾದ ಉಗಾಂಡ ಮೂಲದ ಪ್ರಜೆ. ಈತನ ವೀಸಾ ಅವಧಿ 2005ರಲ್ಲಿ ಮುಗಿದರೂ ಅಕ್ರಮವಾಗಿ ವಾಸವಾಗಿ ಭಾರತೀಯ ಯುವತಿಯನ್ನು ಮದುವೆಯಾಗಿದ್ದ. ದೇಶದಲ್ಲಿ ನೆಲೆಸಲು ಅವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಈತನ ಅರ್ಜಿಯನ್ನು 2022ರಲ್ಲಿ ತಿರಸ್ಕರಿಸಲಾಗಿತ್ತು. ಈ ಸಂಬಂಧ ವಿದೇಶಿ ನೋಂದಣಿ‌ ಕೇಂದ್ರ(ಎಫ್ಐಆರ್ ಓ) ಕೇಂದ್ರ ಗೃಹ ಸಚಿವಾಲಯಕ್ಕೆ‌ ನೀಡಿದ ಮಾಹಿತಿ ಮೇರೆಗೆ ದೆಹಲಿ ಇಮಿಗ್ರೇಷನ್‌ ಅಧಿಕಾರಿಗಳು ಜುಲೈ19ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಬಾಣಸವಾಡಿ ಪೊಲೀಸರ ಸಹಾಯದಿಂದ  ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲಿಸಿದಾಗ 26 ವಿದೇಶಿಯರ ಪಾಸ್‍ಪೋರ್ಟ್‍ಗಳನ್ನು ಜಪ್ತಿ ಮಾಡಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.


ಇದನ್ನೂ ಓದಿರಾಜ್ಯ ಸರ್ಕಾರಕ್ಕೆ ಮೂರು ಬೇಡಿಕೆ ಇಟ್ಟ ಕಾಂಗ್ರೆಸ್


1995ರಲ್ಲಿ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬೋಸ್ಕೋ ಕಾವೇಸಿ ಬಂದಿದ್ದ. ಈತನ ವೀಸಾ ಅವಧಿ 2005ರಲ್ಲಿ ಮುಗಿದಿತ್ತು‌. 2006ರಲ್ಲಿ ಅನಧಿಕೃತ ವಾಸ ಹಿನ್ನೆಲೆ 6 ತಿಂಗಳು ಸಜೆಯಾಗಿತ್ತು. ದೇಶ ಬಿಟ್ಟು ಹೋಗುವಂತೆ ನೋಟಿಸ್ ಜಾರಿ ಮಾಡಿದ್ದರೂ‌ ಅಕ್ರಮವಾಗಿ ಇಲ್ಲೇ‌ ಉಳಿದುಕೊಂಡಿದ್ದ. ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ. ಭಾರತೀಯ ಯುವತಿ‌ಯನ್ನು ಮದುವೆಯಾಗಿದ್ದು, ದೇಶದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದ. ವಿಚಾರಣೆ ನಡೆಸಿದ್ದ ಕೋರ್ಟ್ 2022ರಲ್ಲಿ ಈತನ ಅರ್ಜಿಯನ್ನು ತಿರಸ್ಕೃರಿಸಿತ್ತು.


ವೈಯಕ್ತಿಕ ಲಾಭಕ್ಕಾಗಿ ವಿದೇಶಿಯರಿಗೆ ಅನುಕೂಲ‌ ಮಾಡಿಕೊಡುವುದಾಗಿ ನಟಿಸಿ ಅನಗತ್ಯವಾಗಿ ಅವರಿಂದ ಹಣ ಪಡೆಯುತ್ತಿದ್ದ. ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ನಕಲಿ ದಾಖಲಾತಿ ನೀಡುತ್ತಿದ್ದ‌. ಮಾನವ ಕಳ್ಳಸಾಗಣೆ, ಬಲವಂತವಾಗಿ ಹಣ‌ ಪಡೆಯುವುದು, ವಂಚನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಆರೋಪ ಈತನ ಮೇಲಿದೆ.


ಇದನ್ನೂ ಓದಿ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯಕರ್ತರ ಹತ್ಯೆ; ಇದು ಕಾಣದ ಕೈಗಳ ಷಡ್ಯಂತ್ರವೆಂದ ಬಿಜೆಪಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.