ATMಗೆ ಬರುವ ವೃದ್ದರೇ ಎಚ್ಚರ..! ಹಣ ಕಳೆದುಕೊಳ್ಳುವ ಮುನ್ನ ಈ ಸುದ್ದಿ ನೋಡಿ..
ಎಟಿಂಎಗೆ ಅನೇಕ ವೃದ್ಧರು ಹಣ ವರ್ಗಾವಣೆಗೆ ಅಂತಾ ಬರ್ತಾರೆ.. ಇದಕ್ಕೆ ಕಾದಿರುತ್ತಿದ್ದ ಆರೋಪಿ ನೇರವಾಗಿ ವೃದ್ಧರ ಬಳಿ ಬಂದು ಮಾತು ಆರಂಭಿಸುತ್ತಿದ್ದ. ನನಗೆ ಅರ್ಜೆಂಟ್ ಕ್ಯಾಶ್ ಬೇಕಾಗಿದೆ, ನೆಫ್ಟಿ ಮೂಲಕ ನಿಮಗೆ ಹಣ ವರ್ಗಾವಣೆ ಮಾಡ್ತೀನಿ ಅಂತಾ ಬೇಡಿಕೊಳ್ತಿದ್ದ. ಆಗ.. ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ
ಬೆಂಗಳೂರು : ನೀವು ಎಟಿಎಂಗೆ ವಯಸ್ಸಾದವರನ್ನು ಹಣ ಡೆಪಾಸಿಟ್ ಮಾಡೋಕೆ ಕಳಿಸ್ತೀರಾ.. ಹಾಗಾದ್ರೆ ವಂಚಕರು ಯಾಮಾರಿಸಿ ಬಿಡ್ತಾರೆ ಹುಷಾರ್.. ಹೀಗೆ ವೃದ್ಧರನ್ನ ವಂಚಿಸುತ್ತಿದ್ದ ಕಿಲಾಡಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.. ಹಾಗಾದ್ರೆ ಯಾರವನು.. ಏನಿದೂ ವಂಚನೆ ಸ್ಟೋರಿ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಈ ಫೋಟೋದಲ್ಲಿ ಕಾಣುತ್ತಿರೋ ಈ ದಡೂತಿಯ ಹೆಸರು ಸಾಹಿಲ್ ಅಂತಾ.. ದುಡಿದು ತಿನ್ನೋದನ್ನ ಬಿಟ್ಟು ವಂಚನೆಯನ್ನೇ ಜೀವನ ಮಾಡಿಕೊಂಡಿದ್ದ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕಂಬಿ ಎಣಿಸುತ್ತಿರುವ ಈತ ವಂಚಿಸಲು ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದ. ಬಣ್ಣಬಣ್ಣದ ಮಾತನಾಡಿ ಉಂಡೇನಾಮ ತಿಕ್ಕಿ ಎಸ್ಕೇಪ್ ಆಗುತ್ತಿದ್ದ.
ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದ ಆನೇಕಲ್ ಜನತೆ
ಯೆಸ್.. ಎಟಿಂಎಗೆ ಅನೇಕ ವೃದ್ಧರು ಹಣ ವರ್ಗಾವಣೆಗೆ ಅಂತಾ ಬರ್ತಾರೆ.. ಇದಕ್ಕೆ ಕಾದಿರುತ್ತಿದ್ದ ಈ ಸಾಹಿಲ್, ಕ್ಯಾಶ್ ಡೆಪಾಸಿಟ್ ಮಷೀನ್ ಇರೋ ಎಟಿಎಮ್‌ಗಳ ಬಳಿ ರೌಂಡ್ಸ್ ಹೊಡಿತ್ತಿದ್ದ. ವೃದ್ಧರನ್ನ ಡೆಪಾಸಿಟ್ ಮೇಷಿನ್ ಬಳಿ ಕಂಡ್ರೆ ಸಾಕು ನೇರವಾಗಿ ವೃದ್ಧರ ಬಳಿ ಬಂದು ಮಾತು ಆರಂಭಿಸುತ್ತಿದ್ದ. ನನಗೆ ಅರ್ಜೆಂಟ್ ಕ್ಯಾಶ್ ಬೇಕಾಗಿದೆ, ನೆಫ್ಟಿ ಮೂಲಕ ನಿಮಗೆ ಹಣ ವರ್ಗಾವಣೆ ಮಾಡ್ತೀನಿ ಅಂತಾ ಬೇಡಿಕೊಳ್ತಿದ್ದ. ಈತನ ಬಣ್ಣದ ಮಾತು ನಂಬಿದ ವೃದ್ಧರು ಹಣ ಕೊಟ್ರೆ ಮುಂದಿನ ಪ್ಲಾನ್ ನಂತೆ ಅವರ ಹೆಸರು, ಅಕೌಂಟ್ ನಂಬರ್ ಪಡೆದು ಅಕೌಂಟ್‌ಗೆ ಹಣ ವರ್ಗಾವಣೆ ಆದಂತೆ ಮೆಸೇಜ್ ಕಳುಹಿಸಿ ಎಸ್ಕೇಪ್ ಆಗುತ್ತಿದ್ದ.
ಹೀಗೆ ಹಣ ಕಳೆದುಕೊಂಡು ಈತನಿಂದ ವಂಚನೆಗೊಳಾಗದವರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಾಗಡಿ ರೋಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಾಹಿಲ್ ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಈ ಖತರ್ನಾಕ್ ಬೆಂಗಳೂರಿನ ಮಾಗಡಿ ರೋಡ್, ಸುಬ್ರಹ್ಮಣ್ಯ ನಗರ, ರಾಜಾಜಿನಗರ ಸೇರಿ ಹಲವೆಡೆ ಇದೇ ರೀತಿ ಮೋಸ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಅದೆನೇ ಇರ್ಲಿ, ಏನೂ ಅರಿಯದ ಅಮಾಯಕರು ಸಹಾಯ ಬೇಡಿ ಬಂದಾಗ ನೆರವಿಗೆ ಬರಬೇಕು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಿಸಿ ಜೀವನ ನಡೆಸುತ್ತಿದ್ದ ಸಾಹಿಲ್ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.