ಬೆಂಗಳೂರು: ಅವರು ಖತರ್ನಾಕ್ ಕದೀಮರ ತಂಡ, ತಲೆಗೆ ಹೆಲ್ಮೆಟ್ ಮುಖಕ್ಕೆ ಮಾಸ್ಕ್ ಧರಿಸಿ ರೋಡ್ಗೆ ಎಂಟ್ರಿ ಕೊಟ್ರು ಅಂದ್ರೆ ಮುಗಿತು. ಸಿನಿಮಾ ಸ್ಟೈಲ್ ನಲ್ಲಿ ಪ್ಲಾನ್ ಮಾಡೋ ಖದೀಮರು ಜನ ಊಹೆ ಮಾಡದ ರೀತಿಯಲ್ಲಿ ಸರಗಳ್ಳತನ ಮಾಡ್ತಿದ್ದಾರೆ. ರಸ್ತೆಯಲ್ಲಿ ಓಡಾಡೋ ಮಹಿಳೆಯರನ್ನೇ ಟಾರ್ಗೇಟ್ ಮಾಡೋ ಖದೀಮರು ಸರಗಳ್ಳತನ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಈ ಸರಗಳ್ಳರ ಹಾವಳಿ ಹೆಚ್ಚಾಗಿರೋದಾದ್ರು ಎಲ್ಲಿ ಅಂತೀರಾ ಓದಿ ಈ ರಿಪೋರ್ಟ್ ನಲ್ಲಿ.
ಹೀಗೆ ಬೈಕ್ ನಲ್ಲಿ ಬಂದ ಖದೀಮರು ಚಿನ್ನದ ಚೈನ್ ಕದ್ದು ಪರಾರಿಯಾಗುತ್ತಿರುವ ದೃಶ್ಯ, ಇನ್ನೊಂದೆಡೆ ಸರಗಳ್ಳರ ಹಾವಳಿಗೆ ಬೆಚ್ಚಿಬಿದ್ದ ಜನರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ. ಕಳೆದ 17 ನೇ ತಾರೀಖಿನಂದು ತಾಲೂಕಿನ ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಹೊಸೂರು ಸೇರಿದಂತೆ ಹಲವೆಡೆ ಸಿಕ್ಕ ಸಿಕ್ಕ ಕಡೆಯಲ್ಲಿ ಸರಣಿ ಸರಗಳ್ಳತನ ನಡೆದಿದೆ. ಪಲ್ಸರ್ ಎನ್ ಎಸ್ ಬೈಕ್ನಲ್ಲಿ ಓರ್ವ ಹೆಲ್ಮೆಟ್ ಹಾಕಿದ್ರೆ ಮತ್ತೋರ್ವ ಮಂಕಿ ಕ್ಯಾಪ್ ಧರಿಸಿ ಬರುವ ಖದೀಮರು ಮಹಿಳೆಯರ ಬಳಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದಾರೆ. ಜನನಿಬಿಡ ಪ್ರದೇಶ ಎಂದೂ ಲೆಕ್ಕಿಸದೆ ರಾಜಾರೋಷವಾಗಿ ಕತ್ತಿಗೆ ಕೈ ಹಾಕಿ ಸರ ಕಳ್ಳತನ ಮಾಡುತ್ತಿದ್ದಾರೆ. ಸರಣಿ ಚೈನ್ ಸ್ನ್ಯಾಚಿಂಗ್ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.
ಇದನ್ನೂ ಓದಿ: ಹಳಸಿದ ಬಾಯಲ್ಲಿ ದಾಲ್ಚಿನ್ನಿ ನೀರು ಕುಡಿಯಿರಿ: ಈ ಕಾಯಿಲೆಗಳಿಗೆ ಪರ್ಮನೆಂಟ್ ರಿಲೀಫ್ ಸಿಗುತ್ತೆ!
ಇನ್ನೂ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಒಂದು ಕಡೆ, ಸೂರ್ಯನಗರದಲ್ಲಿ ಎರಡು ಕಡೆ ಹಾಗೂ ಜಿಗಣಿಯ ಎರಡು ಕಡೆಗಳಲ್ಲಿ ಕಳ್ಳರು ಸರಣಿ ಕಳ್ಳತನ ನಡೆಸಿದ್ದಾರೆ. ಜಿಗಣಿಯ ನಿಸರ್ಗ ಲೇಔಟ್ ಬಡಾವಣೆಯ ನಿವಾಸಿ ಅನಿತ ಎಂಬುವವರು ತರಕಾರಿ ಅಂಗಡಿಯ ಬಳಿ ಬೈಕ್ ನಲ್ಲಿ ನಿಂತಿದ್ದ ವೇಳೆ ಬಂದ ಖದೀಮರು ಕ್ಷಣ ಮಾತ್ರದಲ್ಲಿ ಕತ್ತಿನಲ್ಲಿದ್ದ 32 ಗ್ರಾಂ ತುಕದ ಚಿನ್ನದ ಚೈನ್ ಕಸಿದು ಪರಾರಿಯಾಗಿದ್ದಾರೆ. ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡೋಕೆ ಸಾಧ್ಯವಾಗದಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರಗಳ್ಳರ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಮಹಿಳೆ ಮನವಿಯನ್ನ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ರಿಲೈನ್ಸ್ ಇನ್ಪೋಕಾಮ್ ಲಿಮಿಟೆಡ್ ಕಂಪನಿಗೆ ದಂಡ ವಿಧಿಸಿ ಪರಿಹಾರ ನೀಡಲು ಆದೇಶ
ಇನ್ನೂ ಒಂದೇ ದಿನ ಐದು ಕಡೆಗಳಲ್ಲಿ ಸರಣಿ ಚೈನ್ ಸ್ನ್ಯಾಚಿಂಗ್ ನಡೆಸಿದ ಖತರ್ನಾಕದ ಕಳ್ಳರು 200 ಕ್ಕೂ ಅಧಿಕ ಗ್ರಾಂ ಚಿನ್ನವನ್ನ ಎಗರಿಸಿದ್ದಾರೆ.ಈ ಕೃತ್ಯ ಎಸಗಿರೋದು ಇರಾನಿ ಗ್ಯಾಂಗ್ ಎಂದು ಹೇಳಲಾಗುತ್ತಿದ್ದು, ಘಟನೆ ಸಂಬಂಧ ಜಿಗಣಿ, ಸೂರ್ಯನಗರ ಮತ್ತು ಅತ್ತಿಬೆಲೆ ಹಾಗೂ ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ