ಬೆಂಗಳೂರು: ಪುಸ್ತಕ ಎಂದರೆ ದೇವರಿಗೆ ಸಮಾನ ಎಂಬ ಮಾತಿದೆ. ಆದರೆ ಅಂತಹ ಪುಸ್ತಕ ಮಾರಾಟ ಮಾಡೋ ಬುಕ್‌ ಸ್ಟಾಲ್‌ನಲ್ಲಿ ಮಾಡಬಾರದ ಅನಾಚಾರ ದಂಧೆಗಳು ನಡೆಯುತ್ತಿವೆ. ಬುಕ್‌ ಸ್ಟಾಲ್‌ ಹೆಸರು ಹೇಳಿಕೊಂಡು ಅಲ್ಲಿ ಡ್ರಗ್‌ ದಂಧೆಯನ್ನು ನಡೆಸಲಾಗುತ್ತಿದೆ. ಈ ಘಟನೆ ನಡೆದಿರೋದು ಯಶವಂತಪುರ ಆರ್‌ಟಿಓ ಕಚೇರಿ ಬಳಿಯಿರುವ ಪುಟ್ಟಪ್ಪ ಬುಕ್ ಸ್ಟಾಲ್‌ನಲ್ಲಿ. 


COMMERCIAL BREAK
SCROLL TO CONTINUE READING

ಹೇಳಿಕೊಳ್ಳೋದಕ್ಕೆ ಇದು ಬುಕ್ ಸ್ಟಾಲ್. ಆದರೆ ಡ್ರಗ್‌ ಖರೀದಿ ಮಾಡುವವರಿಗೆ ಸ್ವರ್ಗಲೋಕ. ಹೈ ಎಂಡ್ ಡ್ರಗ್ಸ್ ಖರೀದಿ ಮಾಡಲು ಆಗದಿದ್ದವರಿಗೆ ಈ ಸ್ಟಾಲ್ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತದೆ. ಈ ಸ್ಟಾಲ್‌ ಇಲ್ಲಿನ ಸ್ಲಂ ಹುಡುಗರನ್ನೇ ಟಾರ್ಗೆಟ್‌ ಆಗಿ ಇರಿಸಿಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಸೆಲ್ಯೂಷನ್ ಮಾರಾಟ ಮಾಡ್ತಿದ್ದ ಆರೋಪಿ ಲೋಕೇಶ್‌ ಎಂಬಾತತನ್ನು ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ. 


ಇದನ್ನೂ ಓದಿ: Saturn Transit Effect: ಮಕರ ರಾಶಿಗೆ ಶನಿ ಪ್ರವೇಶ- ಈ ರಾಶಿಯವರಿಗೆ ಹೊಸ ಉದ್ಯೋಗ-ಬಡ್ತಿ ಸಾಧ್ಯತೆ


ಯಶವಂತಪುರ ಆರ್‌ಟಿಓ ಕಚೇರಿ ಬಳಿ ಪುಟ್ಟಪ್ಪ ಬುಕ್ ಸ್ಟಾಲ್‌ನ್ನು ನಡೆಸುತ್ತಿದ್ದ ಆರೋಪಿ ಲೋಕೇಶ್‌, ಇಲ್ಲಿನ ಸ್ಲಂ ಹುಡುಗರಿಗೆ ಡ್ರಗ್‌ ಸಪ್ಲೈ ಮಾಡುತ್ತಿದ್ದ. ಸದ್ಯ ಪೊಲೀಸರು ಈತನನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. 


ಲೋಕೇಶ್‌ ಪತ್ತೆಗೆ ಕಾರಣವಾದ ಕಳ್ಳತನ ಕೇಸ್‌: 
ಕಳೆದ ಕೆಲ ದಿನಗಳ ಹಿಂದೆ ತಬ್ರೇಜ್ ಹಾಗೂ ತೌಸಿಫ್ ಎಂಬ ಇಬ್ಬರು ಹುಡುಗರು ಕಳ್ಳತನ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಇನ್ನು ಥಳಿತದ ಬಗ್ಗೆ ಜಡ್ಜ್‌ ಬಳಿ ತಿಳಿಸಿದಾಗ, ಆರೋಪಿಗಳ ಹೇಳಿಕೆ ಹಿನ್ನೆಲೆಯಲ್ಲಿ ಥಳಿಸಿದ್ದ ಸಾರ್ವಜನಿಕರ ಮೆಲೇಯೇ ದೂರು ದಾಖಲು ಮಾಡಲಾಗಿತ್ತು. ಇನ್ನು ಆರೋಪಿಗಳನ್ನು ತನಿಖೆ ನಡೆಸುತ್ತಿದ್ದಾಗ ಸಂಪೂರ್ಣವಾಗಿ ನಶೆಯಲ್ಲಿ ತೇಲುತ್ತಿದ್ದರು. ಸರಿಯಾದ ಊಟ ತಿಂಡಿ ಕೂಡ ಮಾಡದೇ ಕಾಟ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದರು.  


ಇದನ್ನೂ ಓದಿ: ಫಾರ್ಮ್‌ಗೆ ಮರಳಿದ ಈ ಆಟಗಾರನಿಂದ 36 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ!


ವಾರ ಪೂರ್ತಿ ಊಟ ಮಾಡದೆ ಸೆಲ್ಯೂಷನ್ ನಶೆಯಲ್ಲೇ ಆರೋಪಿಗಳು ಇರುತ್ತಿದ್ದರು. ಹೀಗಾಗಿ ಇವರ ಹಿನ್ನೆಲೆ ತಿಳಿದುಕೊಳ್ಳಲು ಖಾಕಿ ಮುಂದಾಗಿದ್ದು, ಇವರು ಸೆಲ್ಯೂಷನ್ ಖರೀದಿ ಮಾಡಿದ್ದ ಸ್ಥಳದ ಮಾಹಿತಿ ಪಡೆದಿದ್ದರು. ಆ ಸ್ಥಳಕ್ಕೆ ದಾಳಿ ಮಾಡುವ ಸಂದರ್ಭದಲ್ಲಿ ಆರೋಪಿ ಲೋಕೇಶ್‌ 10 ನೇ ತರಗತಿ ಬಾಲಕನಿಗೆ ಸೆಲ್ಯೂಷನ್ ಮಾರಾಟ ಮಾಡುತ್ತಿದ್ದನು. ತಕ್ಷಣವೇ ಪೊಲೀಸರು ಕಿರಾತಕನನ್ನು ರೆಡ್‌ ಹ್ಯಾಂಡ್‌ ಆಗಿ ಅರೆಸ್ಟ್‌ ಮಾಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.