CBSE 10th Result 2022: ಇಂದು ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ- ಆನ್‌ಲೈನ್, ಡಿಜಿಲಾಕರ್, ಎಸ್‌ಎಂಎಸ್ ಮೂಲಕ ಈ ರೀತಿ ಪರಿಶೀಲಿಸಿ

CBSE 10th Result 2022: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್- ಸಿಬಿಎಸ್‌ಇ 10ನೇ ತರಗತಿ ಫಲಿತಾಂಶಗಳು ಇಂದು ಹೊರಬೀಳಲಿದೆ.   ಸಿಬಿಎಸ್‌ಇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪ್ರಕಟಿಸಲಿದೆ. ಸಿಬಿಎಸ್‌ಇ 10ನೇ ತರಗತಿ  ವಿದ್ಯಾರ್ಥಿಗಳು ಟರ್ಮ್ 2 ಫಲಿತಾಂಶ 2022 ಅನ್ನು ಆನ್‌ಲೈನ್, ಡಿಜಿಲಾಕರ್, ಎಸ್‌ಎಂಎಸ್ ಮೂಲಕ ಹೇಗೆ ಪರಿಶೀಲಿಸಬಹುದು ಎಂದು ತಿಳಿಯೋಣ...

Written by - Yashaswini V | Last Updated : Jul 4, 2022, 07:57 AM IST
  • ಸಿಬಿಎಸ್‌ಇ 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು 26ನೇ ಏಪ್ರಿಲ್‌ನಿಂದ 24ನೇ ಮೇ 2022 ರವರೆಗೆ ನಡೆಸಲಾಯಿತು
  • ಸುಮಾರು 21 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿಯ ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಗೆ ಹಾಜರಾಗಿದ್ದರು.
  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್- ಸಿಬಿಎಸ್‌ಇ 10ನೇ ತರಗತಿ ಫಲಿತಾಂಶಗಳು ಇಂದು ಹೊರಬೀಳಲಿದೆ.
CBSE 10th Result 2022:  ಇಂದು ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ- ಆನ್‌ಲೈನ್, ಡಿಜಿಲಾಕರ್, ಎಸ್‌ಎಂಎಸ್ ಮೂಲಕ ಈ ರೀತಿ ಪರಿಶೀಲಿಸಿ  title=
CBSE 10th Result 2022

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2022: ಬಹುನಿರೀಕ್ಷಿತ ಸಿಬಿಎಸ್‌ಇ 10ನೇ ತರಗತಿ ಟರ್ಮ್ 2 ಫಲಿತಾಂಶ ಇಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಫಲಿತಾಂಶವನ್ನು   ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ಡಿಜಿಲಾಕರ್, ಎಸ್‌ಎಂಎಸ್ ಮೂಲಕವೂ ಫಲಿತಾಂಶ ಲಭ್ಯವಾಗಲಿದೆ.  ಸಿಬಿಎಸ್‌ಇ 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು 26ನೇ ಏಪ್ರಿಲ್‌ನಿಂದ 24ನೇ ಮೇ 2022 ರವರೆಗೆ ನಡೆಸಲಾಯಿತು. ಸುಮಾರು 21 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿಯ ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಗೆ ಹಾಜರಾಗಿದ್ದರು.  ಇದೀಗ ಇಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್- ಸಿಬಿಎಸ್‌ಇ 10ನೇ ತರಗತಿ ಫಲಿತಾಂಶಗಳು ಹೊರಬೀಳಲಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್‌ಲೈನ್, ಡಿಜಿಲಾಕರ್, ಎಸ್‌ಎಂಎಸ್ ಮೂಲಕ ಹೇಗೆ ಪರಿಶೀಲಿಸಬಹುದು ಎಂದು ತಿಳಿಯೋಣ...

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2022 ಅನ್ನು ಆನ್‌ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿ:
* ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಲು, ಮೊದಲು ಅಧಿಕೃತ ವೆಬ್‌ಸೈಟ್ cbse.gov.in ಅಥವಾ cbseresults.nic.in ಗೆ  ಭೇಟಿ ನೀಡಿ.

* ವೆಬ್‌ಸೈಟ್‌ನ ಮುಖಪುಟದಲ್ಲಿ, 10 ನೇ ತರಗತಿಯ ಸಿಬಿಎಸ್‌ಇ ಟರ್ಮ್ 2 ಫಲಿತಾಂಶದ ಲಿಂಕ್ ಅನ್ನು ನೀವು ಕಾಣಬಹುದು, ಅದರ ಮೇಲೆ ಕ್ಲಿಕ್ ಮಾಡಿ.

* ಬಳಿಕ ನಿಗದಿತ ಜಾಗದಲ್ಲಿ ನಿಮ್ಮ ರೋಲ್ ನಂಬರ್, ಶಾಲೆಯ ಕೋಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅದನ್ನು ಸಲ್ಲಿಸಿ.

* ಅಗತ್ಯ ಮಾಹಿತಿಗಳನ್ನು ಸಲ್ಲಿಸಿದ ಬಳಿಕ ನಿಮ್ಮ ಮುಂದೆ ಪರದೆಯ ಮೇಲೆ ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶವನ್ನು ಕಾಣಬಹುದು. 

* ಬಳಿಕ ನೀವು ಅದನ್ನು  ಡೌನ್ಲೋಡ್  ಮಾಡುವ ಮೂಲಕ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

ಇದನ್ನೂ ಓದಿ- RRC Recruitment 2022: 1659 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಿಬಿಎಸ್‌ಇ 10ನೇ ತರಗತಿ 2022ರ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಈ ರೀತಿ ಪರಿಶೀಲಿಸಿ:-
>> ಮೊದಲು ನಿಮ್ಮ ಫೋನ್‌ನ ಮೆಸೇಜ್ ಬಾಕ್ಸ್‌ಗೆ ಹೋಗಿ

>>  ಬಳಿಕ ಅದರಲ್ಲಿ cbse10 ಎಂದು ಟೈಪ್ ಮಾಡಿ ಮತ್ತು ಸ್ಪೇಸ್ ನೀಡುವ ಮೂಲಕ ನಿಮ್ಮ ರೋಲ್ ಸಂಖ್ಯೆಯನ್ನು ನಮೂದಿಸಿ.

>> ಈಗ ಈ ಸಂದೇಶವನ್ನು 7738299899 ಗೆ ಕಳುಹಿಸಿ. 

>> ಈ ರೀತಿ ಆಗಿ ಯಾವುದೇ ಸಮಯದಲ್ಲಿ ನಿಮ್ಮ ಸಿಬಿಎಸ್ಇ 10 ನೇ ತರಗತಿ  ಫಲಿತಾಂಶ 2022 ಅನ್ನು ಫೋನ್‌ಗೆ ಎಸ್ಎಂಎಸ್ ಮೂಲಕ ಪಡೆಯಬಹುದು.

ಇದನ್ನೂ ಓದಿ- NVS Recruitment 2022 : ನವೋದಯ ವಿದ್ಯಾಲಯ ಸಮಿತಿಯಲ್ಲಿ 1,616 ಹುದ್ದೆಗಳಿಗೆ ಅರ್ಜಿ!

ಡಿಜಿಲಾಕರ್‌ನಲ್ಲಿ ಸಿಬಿಎಸ್‌ಇ 10ನೇ ತರಗತಿ 2022ರ ಫಲಿತಾಂಶವನ್ನು ಈ ರೀತಿ ಫಲಿತಾಂಶ:
* ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು, ವಿದ್ಯಾರ್ಥಿಗಳು ಹೆಚ್ಚಿನ ವೆಬ್‌ಸೈಟ್ digilocker.gov.in ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಿ.

* ಬಳಿಕ ಆಧಾರ್ ಸಂಖ್ಯೆ ಸೇರಿದಂತೆ ಇತರ ಅಗತ್ಯ ಮಾಹಿತಿಯನ್ನು ನಿಗದಿತ ಸ್ಥಳದಲ್ಲಿ  ನಮೂದಿಸುವ ಮೂಲಕ ಲಾಗಿನ್ ಮಾಡಿ.

* ನಂತರ ಮುಖಪುಟದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News