ಕೇರಳದಲ್ಲಿ ಅಜ್ಜ-ಅಜ್ಜಿ ಕೊಲೆಗೈದು ಚಿನ್ನಾಭರಣ ದೋಚಿದ್ದ ಯುವಕ ಮಂಗಳೂರಿನಲ್ಲಿ ಸೆರೆ
ಜುಲೈ 24ರಂದು ಬೆಳಗ್ಗೆ ಮಂಗಳೂರು ಉತ್ತರ ಠಾಣೆಗೆ ಬಂದ ಮಾಹಿತಿಯಂತೆ ಮಂಗಳೂರು ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಸ್ಪದ ಯುವಕನೊಬ್ಬ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿ ಬಂದಿತ್ತು.
Crime News: ಕೇರಳದಲ್ಲಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಬಂದಿದ್ದ ಯುವಕನನ್ನು ಮಂಗಳೂರು ಪೊಲೀಸ ಬಂಧಿಸಿದ್ದಾರೆ. ಬಂಧಿತನನ್ನು ಕೇರಳ ರಾಜ್ಯದ ತಿಶೂರ್ ಜಿಲ್ಲೆಯ 27 ವರ್ಷದ ಅಹ್ಮದ್ ಅಕ್ಮಲ್ ಎಂದು ಗುರುತಿಸಲಾಗಿದೆ.
ಜುಲೈ 24ರಂದು ಬೆಳಗ್ಗೆ ಮಂಗಳೂರು ಉತ್ತರ ಠಾಣೆಗೆ ಬಂದ ಮಾಹಿತಿಯಂತೆ ಮಂಗಳೂರು ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಸ್ಪದ ಯುವಕನೊಬ್ಬ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ಪೊಲೀಸರು ಮಂಗಳೂರು ಕಾರ್ ಸ್ಟ್ರೀಟ್ ಗೆ ತೆರಳಿ ಯುವಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೇಸ್ ಬಯಲಾಗಿದೆ.
ಇದನ್ನೂ ಓದಿ- ಡಬಲ್ ಮರ್ಡರ್ ಮಾಡಿ ಬಿಲ್ಡಪ್ ರೀಲ್ಸ್ ಹಾಕಿದ್ದ ಜೋಕರ್ ಫಿಲಿಕ್ಸ್ ಅಂದರ್
ಪೊಲೀಸರ ಸೆರೆಯಲ್ಲಿರುವ ಆರೋಪಿ ಅಹಮ್ಮದ್ ಅಕ್ಮಲ್ ಜುಲೈ 23ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ, ಅವರ ಚಿನ್ನಾಭರಣಗಳನ್ನು ದೋಚಿ ಬಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ- ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!
ಇನ್ನೂ ಆರೋಪಿ ಅಹಮ್ಮದ್ ಅಕ್ಮಲ್ ಬಳಿ ಮುತ್ತಿನ ಎರಡು ಎಳೆಯ ಬಂಗಾರದ ಸರ, ಸಣ್ಣ ಪದಕವಿರುವ ಒಂದು ಚೈನ್, ಮೂರು ಜೊತೆ ಕಿವಿಯೊಲೆ, ಐದು ಉಂಗುರ, ಎರಡು ಕೈಬಳೆ, ಪಾಸ್ ಪೋರ್ಟ್ ಹಾಗೂ ಇತರ ದಾಖಲಾತಿಗಳು ಇದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.