ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!

Shocking News: ಗಡಿನಾಡ ಬೆಳಗಾವಿಯಲ್ಲಿ ಮಕ್ಕಳ ಅಪಹರಣಕಾರರ ಗ್ಯಾಂಗ್ ಸಕ್ರಿಯವಾಗಿದ್ದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.ನಗರದ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ಒಂಭತ್ತು ವರ್ಷದ ಬಾಲಕಿಯನ್ನು ಅಪಹರಿಸಲು ವಿಫಲ ಯತ್ನ ನಡೆಸಿದ ಘಟನೆ ಮಂಗಳವಾರ (ಜುಲೈ 11)  ಸಂಜೆ ನಡೆದಿದೆ.

Written by - Yashaswini V | Last Updated : Jul 12, 2023, 09:11 AM IST
  • ಕುಂದಾನಗರಿ ಬೆಳಗಾವಿ ಜನರೇ ಎಚ್ಚರ.. ಎಚ್ಚರ
  • ಬೆಳಗಾವಿಯಲ್ಲಿ ಸಕ್ರಿಯವಾಗಿದೆ ಚೈಲ್ಡ್ ಕಿಡ್ನ್ಯಾಪರ್ಸ್‌ ಗ್ಯಾಂಗ್ ‌
  • 9 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಗ್ಯಾಂಗ್‌
ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!  title=
Children Kidnappers

Child Kidnappers Gang: ಕುಂದಾನಗರಿ ಬೆಳಗಾವಿ ಜನರೇ ಎಚ್ಚರ.. ಎಚ್ಚರ... ಬೆಳಗಾವಿಯಲ್ಲಿ ಸಕ್ರಿಯವಾಗಿದೆ ಚೈಲ್ಡ್ ಕಿಡ್ನ್ಯಾಪರ್ಸ್‌ ಗ್ಯಾಂಗ್. ನಿಮ್ಮ ಮಕ್ಕಳನ್ನು ಆಟವಾಡಲು ಹೊರಗೆ ಕಲಿಸ್ತೀರಾ... ಒಬ್ಬೊಬ್ಬರನ್ನೆ ಅಂಗಡಿಗೆ ಕಲಿಸ್ತೀರಾ... ಇಲ್ಲ, ಟ್ಯೂಶನ್‌ಗೆ ಕಳಿಸ್ಥಿದ್ದೀರಾ... ಈ ಸುದ್ದಿಯನ್ನು ತಪ್ಪದೇ ಓದಿ. 

ಗಡಿನಾಡ ಜಿಲ್ಲೆ ಬೆಳಗಾವಿಯಲ್ಲಿ ಮಕ್ಕಳ ಅಪಹರಣಕಾರರ ಗ್ಯಾಂಗ್ ಸಕ್ರಿಯವಾಗಿದ್ದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.ನಗರದ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ಒಂಭತ್ತು ವರ್ಷದ ಬಾಲಕಿಯನ್ನು ಅಪಹರಿಸಲು ವಿಫಲ ಯತ್ನ ನಡೆಸಿದ ಘಟನೆ ಮಂಗಳವಾರ (ಜುಲೈ 11)  ಸಂಜೆ ನಡೆದಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಟ್ಯೂಶನ್‌ಗೆ ಹೊರಟಿದ್ದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಖದೀಮರು ಆ ಮಗುವನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ. ಬಾಲಕಿಗೆ ಚಾಕಲೇಟ್ ಆಮಿಷ ನೀಡಿ ಎತ್ತಿಕೊಂಡು ಹೋಗಲು ಪ್ರಯತ್ನಿಸುವ ವೇಳೆ ಬಾಲಕಿ ಚೀರಾಡಿ ಅವರಿಂದ ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾಳೆ. ಈ ವೇಳೆ ಖದೀಮನಿಗೆ ಒಂದೆರಡು ಏಟನ್ನೂ ಹೊಡೆದಿದ್ದಾಳೆ. 

ಇದನ್ನೂ ಓದಿ- ಒಂದೇ ಹುಡುಗಿ‌ ಹಿಂದೆ ಬಿದ್ದ ಸ್ನೇಹಿತರು: ಒಬ್ಬನ ಕೊಲೆಯಲ್ಲಿ ಅಂತ್ಯವಾದ ಲವ್ ಸ್ಟೋರಿ

ಇನ್ನೂ ಬಾಲಕಿಯ ಚೀರಾಟ ಕಂಡು ಎನಾಯ್ತಪ್ಪಾ ಎಂದು ಜನರು ಗುಂಪು ಸೇರಿ ಬಾಲಕಿಯನ್ನು ಎತ್ತೋಯ್ಯುತ್ತಿದ್ದ ಮಕ್ಕಳ ಕಳ್ಳನ ಬೆನ್ನಟ್ಟಿದ್ದಾರೆ. ಆಗ ಆತ ಮಗುವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳಿಂದ ತಿಳಿದುಬಂದಿದೆ. 

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿ ತಾಯಿ ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪಹರಣಕಾರನು ಬಾಲಕಿಯನ್ನು ಎತ್ತಿಕೊಂಡು ಓಡಿ ಹೋಗುವ ದೃಶ್ಯ ಪತ್ತೆಯಾಗಿದ್ದು, ಪೊಲೀಸರು ಮಕ್ಕಳ ಕಳ್ಳರನ್ನು ಪತ್ತೆ ಹಚ್ಚಲು ಶೋಧಕಾರ್ಯ ಮುಂದುವರೆಸಿದ್ದಾರೆ. 

ಇದನ್ನೂ ಓದಿ- ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ

ಕುಂದಾನಗರಿ ಬೆಳಗಾವಿ ನಗರದಲ್ಲಿ ಇಂತಹ ಒಂದು ಘಟನೆ ನಡೆದಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೇವಲ ಕುಂದಾನಗರಿ ಮಾತ್ರವಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲೂ ಇಂತಹ ಗ್ಯಾಂಗ್ ಸಕ್ರಿಯವಾಗಿರಬಹುದು ಎಂಬ ಅನುಮಾನಗಳು ಪೋಷಕರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News