ಬೆಂಗಳೂರು:  ಕ್ಯಾಬ್ ಬುಕ್ ಮಾಡಿ ತೆರಳುವಾಗ ಮೊಬೈಲ್ ನಲ್ಲಿ ಪರ್ಸನಲ್ ವಿಚಾರಗಳನ್ನ ಮಾತನಾಡುವಾಗ ಎಚ್ಚರವಹಿಸಲೇಬೇಕು. ಕೊಂಚ ಯಾಮಾರಿದರೂ   ನಿಮ್ಮ ವಿಕ್ನೆಸ್ ನ್ನೇ  ಬಂಡವಾಳ ಮಾಡಿಕೊಳ್ಳುವ ಚಾಲಕಿಗಳು ಇರ್ತಾರೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಕ್ಯಾಬ್ ನಲ್ಲಿ ಪರ್ಸನಲ್ ವಿಚಾರ ಮಾತನಾಡಿ ಮಹಿಳೆಯೊಬ್ಬಳು 22 ಲಕ್ಷ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸ್ನೇಹಿತ ಅಂತಾ ಕರೆ ಮಾಡಿ ಮಹಿಳೆಯಿಂದ 22 ಲಕ್ಷ ಹಾಕಿಸಿಕೊಂಡು ವಂಚಿಸಿದ್ದ ಕ್ಯಾಬ್ ಚಾಲಕನನ್ನ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ತನ್ನೊಂದಿಗೆ ಕರೆಯಲ್ಲಿ ಮಾತನಾಡುತ್ತಿರುವುದು ಸ್ನೇಹಿತನಲ್ಲ ಎಂದು ತಿಳಿದ ನಂತರವೂ ಮಹಿಳೆಗೆ ಸ್ನೇಹಿತನ ವಿಚಾರಗಳನ್ನ ಗಂಡನಿಗೆ ತಿಳಿಸುವುದಾಗಿ ಬೆದರಿಸಿ ಆಕೆಯಿಂದ 750 ಗ್ರಾಂ ಚಿನ್ನ ಸುಲಿಗೆ ಮಾಡಿದ್ದ ಈ ಖತರ್ನಾಕ್ ಕ್ಯಾಬ್ ಚಾಲಕ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.


ಇದನ್ನೂ ಓದಿ- Crime : ಬೈಕ್ ಕೀಗಾಗಿ ಜಗಳ: ಬಿತ್ತು ಒಬ್ಬನ ಹೆಣ


ಹೆಸರಘಟ್ಟ ನಿವಾಸಿ ಕಿರಣ್ ಕುಮಾರ್ ಬಂಧಿತ ಊಬರ್ ಕ್ಯಾಬ್ ಚಾಲಕ. ಖಾಸಗಿ‌ ಕಂಪನಿಯಲ್ಲಿ ಕೆಲಸ‌ ಮಾಡುತ್ತಿರುವ ಮಹಿಳೆ ಕಳೆದ ವರ್ಷ ನವೆಂಬರ್ ನಲ್ಲಿ ಇಂದಿರಾನಗರದಿಂದ ಬಾಣಸವಾಡಿಗೆ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ನಲ್ಲಿ ಹೋಗುವಾಗ ಮೊಬೈಲ್‌ ನಲ್ಲಿ ತನ್ನ ಸ್ನೇಹಿತನ ವಿಚಾರಗಳನ್ನ ಮಾತನಾಡಿದ್ದಳು. ಮಹಿಳೆ ಕ್ಲಾಸ್ ಮೇಟ್ ಆಗಿದ್ದ ಸ್ನೇಹಿತನ ವಿಚಾರಗಳನ್ನ ಮಾತನಾಡುವಾಗ ಸೂಕ್ಷ್ಮವಾಗಿ ಚಾಲಕ ಕದ್ದಾಲಿಸಿದ್ದ. ಇದಾದ ಕೆಲವು ದಿನಗಳ ಬಳಿಕ ಸ್ನೇಹಿತನ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿ ನಾನು‌ ನಿನ್ನ ಬಾಲ್ಯ ಸ್ನೇಹಿತ ಎಂದು ಪರಿಚಯಿಸಿಕೊಂಡು ಸಂಪರ್ಕ ಬೆಳೆಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಈ‌ ಮಧ್ಯೆ ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಹಣದ ಅಗತ್ಯವಿದೆ ಎಂದು‌ ಕರೆ ಮಾಡಿ ನಂಬಿಸಿದ್ದ. 


ಸ್ನೇಹಿತನ ಕಷ್ಟಕ್ಕೆ ಸ್ಪಂದಿಸಿದ ಮಹಿಳೆ ಆನ್ ಲೈನ್ ಮೂಲಕ ಆರೋಪಿ ಬ್ಯಾಂಕ್ ಖಾತೆಗೆ 22 ಲಕ್ಷ ಹಣ ವರ್ಗಾಯಿಸಿದ್ದಳು. ಆದರೆ ಕೆಲ ದಿನಗಳ ಬಳಿಕ ಮಹಿಳೆಗೆ ಈತನ ಮೇಲೆ ಅನುಮಾನ ಬಂದಿತ್ತು. ತನ್ನೊಂದಿಗೆ ಮಾತನಾಡುತ್ತಿರುವುದು ಬಾಲ್ಯ ಸ್ನೇಹಿತನಲ್ಲ ಎಂದು ಗೊತ್ತಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದಳು. ಇಷ್ಟಕ್ಕೆ ಸುಮ್ಮನಾಗದೆ ಚಾಲಕ ನಿನ್ನ ಬಳಿಯಿರುವ ಚಿನ್ನಾಭರಣಗಳನ್ನ ನೀಡದಿದ್ದರೆ ಸ್ನೇಹಿತನೊಂದಿಗಿನ ವಿಚಾರಗಳನ್ನ ಗಂಡನಿಗೆ ಹೇಳುವುದಾಗಿ ಬೆದರಿಸಿದ್ದಾನೆ. ದಾರಿ ತೋಚದ‌ ಮಹಿಳೆ ಚಾಲಕನಿಗೆ ತನ್ನ ಬಳಿಯಿದ್ದ 750 ಗ್ರಾಂ ಚಿನ್ನವನ್ನ ಕಳೆದ‌ ಏಪ್ರಿಲ್ ನಲ್ಲಿ ನೀಡಿದ್ದಳು. ಇದನ್ನ ಅರಿಯದ ಮಹಿಳೆಯ ಪತಿ ಆಭರಣದ ಬಗ್ಗೆ ವಿಚಾರಿಸಿದಾಗ ಮೋಸಕ್ಕೊಳಗಾಗಿರುವ ವಿಷಯದ ಬಗ್ಗೆ ಹೇಳಿದ್ದಳು.‌ 


ಇದನ್ನೂ ಓದಿ- ಒಂದೇ ತಿಂಗಳಲ್ಲಿ 1785 ಕೆ.ಜಿ ಡ್ರಗ್ಸ್ ಸೀಜ್: 487 ಆರೋಪಿಗಳ ಬಂಧನ


ವಂಚನೆ  ಸಂಬಂಧ ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮಹಿಳೆಯಿಂದ ಪಡೆದ ಹಣವನ್ನು ಕಿರಣ್ ಕುಮಾರ್ ಮೋಜು, ಮಸ್ತಿ‌ ಮಾಡಿದ್ದ. ಚಿನ್ನಾಭರಣವನ್ನು ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದ. ಸದ್ಯ ಪೊಲೀಸರು‌ ಚಿನ್ನಾಭರಣ ಸೀಜ್ ಮಾಡಿ‌ ಕಿರಣ್ ಕುಮಾರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.