ಬೆಂಗಳೂರು: ಇಂದಿನ ಹೈಟೆಕ್ ಜಮಾನದಲ್ಲಿ ಟೆಕ್ನಾಲಜಿ ಹೆಚ್ಚು ಬಳಕೆಯಾಗುತ್ತಿದ್ದಂತೆ ದುರ್ಬಳಕೆ ಮಾಡುವವರ ಸಂಖ್ಯೆ ಸಹ ಜಾಸ್ತಿಯಾಗಿದೆ. ಸೈಬರ್ ಕಳ್ಳರು ಬೇರೆ ಬೇರೆ ಐಡಿಯಾ ಬಳಸಿ ಹಣ ಎಗರಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿವೆ. ಹಣಕಾಸಿನ ವ್ಯವಹಾರ ಬಹುತೇಕ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ. ಡೆಬಿಟ್ ಕಾರ್ಡ್, ಒಟಿಪಿ, ಬಹುಮಾನ ಹೀಗೆ ಆಸೆ ತೋರಿಸಿ ಕೋಟ್ಯಾಂತರ ರೂ. ಹಣವನ್ನು ಸೈಬರ್ ಖದೀಮರು ಲೂಟಿ ಮಾಡಿದ್ದಾರೆ.
ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದರಿಂದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 2017ರ ಮಾರ್ಚ್‍ನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಓಪನ್ ಮಾಡಲಾಯಿತು. ಸಾಲದು ಅಂತಾ ಕೆಲ ವರ್ಷಗಳಲ್ಲಿ ವಲಯಕ್ಕೊಂದರಂತೆ 8 ಸೈಬರ್, ಆರ್ಥಿಕ, ನಾರ್ಕೋಟಿಕ್ಸ್ ವಿಭಾಗದ ಪೊಲೀಸ್ ಠಾಣೆಗಳನ್ನು ತರೆದಾಗ ದೂರುಗಳ ಸುರಿಮಳೆಯೇ ಹರಿದುಬಂತು. ಅಂಕಿ-ಅಂಶಗಳನ್ನು ಗಮನಿಸಿದರೆ ಕಳೆದ 7 ವರ್ಷಗಳಲ್ಲಿ 50,027 ಪ್ರಕರಣಗಳು ದಾಖಲಾಗಿದ್ದು, ಡಿಜಿಟಲ್ ಪ್ರಪಂಚದಲ್ಲಿ ಸೈಬರ್ ಕ್ರೈಂ ಮಾಮೂಲಿಯಂತೆ ಕಾಣುತ್ತಿದೆ.
ಇದನ್ನೂ ಓದಿ: 10 ಕೋಟಿ ರೂ. ಲಾಟರಿ ಗೆದ್ದ ಮಹಿಳಾ ಪೌರಕಾರ್ಮಿಕರು!
2017ರಲ್ಲಿ 2,742 ಪ್ರಕರಣಗಳು ದಾಖಲಾದರೆ, 2018ರಲ್ಲಿ 5,252, 2019ರಲ್ಲಿ ದಾಖಲೆಯ 10,553 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 9,940 ಕೇಸ್ ದಾಖಲಾದರೆ, 2023 ಜೂನ್ ಅಂತ್ಯದವರೆಗೆ ನಗರದಲ್ಲಿ 6,226 ಪ್ರಕರಣಗಳು ರಿಜಿಸ್ಟರ್ ಆಗಿವೆ.
ಡೆಬಿಟ್ / ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ವಂಚನೆ ಪ್ರಕರಣಗಳು ಅಧಿಕ
ಕಳೆದ 7 ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಅತಿಹೆಚ್ಚು ಅಂದರೆ 20,662 ಪ್ರಕರಣಗಳು ದಾಖಲಾಗಿವೆ. ಜನರಿಗೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಬ್ಯಾಂಕ್ ಅಧಿಕಾರಿ ರೀತಿ ಕರೆ ಮಾಡಿ ಖಾತೆದಾರರ ಪಾಸ್ ವರ್ಡ್, ಒಟಿಪಿ ಸೇರಿದಂತೆ ವೈಯಕ್ತಿಕ ವಿವರ ಸಂಗ್ರಹಿಸಿ ಹಣ ಗುಳುಂ ಮಾಡಲಾಗುತ್ತಿದೆ. 2022ರಲ್ಲಿ 4,252 ಕೇಸ್ ದಾಖಲಾದರೆ ಈ ವರ್ಷ ಮೊದಲ 5 ತಿಂಗಳಲ್ಲಿ 1,872 ಪ್ರಕರಣಗಳು ದಾಖಲಾಗಿವೆ. ಮುಂಗಡವಾಗಿ ಉಚಿತ ಗಿಫ್ಟ್ ನೀಡುವ ಸೋಗಿನಲ್ಲಿ ಸಾರ್ವಜನಿಕರನ್ನು ಯಾಮಾರಿಸಿ ಪ್ರಕರಣ ಹೆಚ್ಚಾಗಿದ್ದು, 7 ವರ್ಷಗಳಲ್ಲಿ 9,198 ಕೇಸ್ ದಾಖಲಾಗಿವೆ. ಕಾರ್ಡ್ ಸ್ಕಿಮ್ಮಿಂಗ್ (5,012), ಉದ್ಯೋಗ ವಂಚನೆ (4,453) ಸೋಷಿಯಲ್ ಮೀಡಿಯಾ ಮುಖಾಂತರ ವಂಚನೆಯ 2,378 ಪ್ರಕರಣಗಳು ದಾಖಲಾಗಿವೆ.
ಯಾವ ವರ್ಷ ಎಷ್ಟು ಪ್ರಕರಣಗಳು!
2017- 2,742
2018- 5,252
2019-10,553
2020- 8,892
2021-6,422
2022-9,940
2023-6,226 (ಮೇ ಅಂತ್ಯಕ್ಕೆ)
ಇದನ್ನೂ ಓದಿ: Crime : ಮಗಳ ಮೇಲೆ ಲೈಗಿಂಕ ದೌರ್ಜನ್ಯವೆಸಗಿದ ತಂದೆ..ಶಿಕ್ಷಕಿಗೆ ನೋವು ಹೇಳಿಕೊಂಡ ಬಾಲಕಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.