ಶಾಲಾ ಬಾಲಕಿಗೆ ಪ್ರೀತಿ ಪ್ರೇಮ ಎಂದು ತಲೆಕೆಡಿಸಿ ಅತ್ಯಾಚಾರಗೈದ ಯುವಕ, 7 ವರ್ಷ ಕಠಿಣ ಶಿಕ್ಷೆ
ಶಾಲಾ ಬಾಲಕಿಗೆ ಪ್ರೀತಿ ಪ್ರೇಮ ಎಂದು ತಲೆಕೆಡಿಸಿ ಲೈಂಗಿಕ ದೌರ್ಜನ್ಯ ಎಸಗಿ ಲೈಂಗಿಕ ಕ್ರಿಯೆ ನಡೆಸಿದ್ದ ಯುವಕನಿಗೆ ಚಾಮರಾಜನಗರದ ಮಕ್ಕಳ ಸ್ನೇಹಿ ನ್ಯಾಯಾಲಯವು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರ: ಶಾಲಾ ಬಾಲಕಿಗೆ ಪ್ರೀತಿ ಪ್ರೇಮ ಎಂದು ತಲೆಕೆಡಿಸಿ ಲೈಂಗಿಕ ದೌರ್ಜನ್ಯ ಎಸಗಿ ಲೈಂಗಿಕ ಕ್ರಿಯೆ ನಡೆಸಿದ್ದ ಯುವಕನಿಗೆ ಚಾಮರಾಜನಗರದ ಮಕ್ಕಳ ಸ್ನೇಹಿ ನ್ಯಾಯಾಲಯವು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದ ಪುಟ್ಟರಾಜು ಶಿಕ್ಷೆಗೊಳಗಾದ ಅಪರಾಧಿ. ಶಾಲೆಗೆ ತೆರಳುತ್ತಿದ್ದ ಬಾಲಕಿ ಜೊತೆ ಪುಟ್ಟರಾಜು ಸಲುಗೆ ಬೆಳೆಸಿಕೊಂಡು ಪ್ರೀತಿ- ಪ್ರೇಮ ಎಂದು ತಲೆಕೆಡೆಸಿ ಲೈಂಗಿಕ ಕ್ರಿಯೆ ನಡೆಸಿದ್ದರ ಸಂಬಂಧ ಕಳೆದ 2017 ರಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Vasishta Simha - Haripriya : ಕ್ಯೂಟ್ ಆಗಿ ಲವ್ ಮ್ಯಾಟರ್ ರಿವೀಲ್ ಮಾಡಿದ ವಸಿಷ್ಠ ಸಿಂಹ
ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 7 ವರ್ಷ ಕಠಿಣ ಶಿಕ್ಷೆ 5 ಸಾವಿರ ದಂಡ ವಿಧಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ವಾದ ಮಂಡಿಸಿದ್ದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.