Vasishta Simha - Haripriya : ಕ್ಯೂಟ್‌ ಆಗಿ ಲವ್‌ ಮ್ಯಾಟರ್‌ ರಿವೀಲ್‌ ಮಾಡಿದ ವಸಿಷ್ಠ ಸಿಂಹ

Vasishta Simha - Haripriya: ಕಳೆದೊಂದು ವಾರದಿಂದ ಸ್ಯಾಂಡಲ್‌ವುಡ್‌ನ ತಾರೆಯರಿಬ್ಬರ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಇಬ್ಬರೂ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಇಷ್ಟೆಲ್ಲಾ ಸುದ್ದಿಯಾದರೂ ಅವರಿಬ್ಬರು ಮಾತ್ರ ತುಟಿಪಿಟಕ್ ಅಂದಿರಲಿಲ್ಲ. ಆದರೆ ಇದೀಗ ಅವರೇ ತಮ್ಮಿಬ್ಬರ ಪ್ರೀತಿಯ ಬಗ್ಗೆ ಬಿಚ್ಚಿಟ್ಟಿದ್ದಾರೆ.

Written by - Chetana Devarmani | Last Updated : Dec 3, 2022, 03:23 PM IST
  • ʻನೀರದೋಸೆʼ ಮೇಲೆ ʻಸಿಂಹʼನಿಗೆ ಲವ್‌ ಆಗಿದ್ದು ಪಕ್ಕಾ!
  • ಪ್ರೀತಿ ವಿಚಾರ ಅಧಿಕೃತಗೊಳಿಸಿದ ಸ್ಯಾಂಡಲ್‌ವುಡ್‌ ಜೋಡಿ
  • ಹರಿಪ್ರಿಯಾ ಹಾಗೂ ವಸಿಷ್ಠ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌
Vasishta Simha - Haripriya : ಕ್ಯೂಟ್‌ ಆಗಿ ಲವ್‌ ಮ್ಯಾಟರ್‌ ರಿವೀಲ್‌ ಮಾಡಿದ ವಸಿಷ್ಠ ಸಿಂಹ   title=
ಹರಿಪ್ರಿಯಾ ಹಾಗೂ ವಸಿಷ್ಠ

Vasishta Simha - Haripriya: ಕಳೆದೊಂದು ವಾರದಿಂದ ನಟ ವಸಿಷ್ಠ ಸಿಂಹ ಜೊತೆ ನಟಿ ಹರಿಪ್ರಿಯಾ ಸಂಬಂಧದ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿವೆ. ಇಬ್ಬರೂ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಇಷ್ಟೆಲ್ಲಾ ಸುದ್ದಿಯಾದರೂ ಅವರಿಬ್ಬರು ಮಾತ್ರ ತುಟಿಪಿಟಕ್ ಅಂದಿರಲಿಲ್ಲ. ಆದರೆ ಇದೀಗ ಅವರೇ ತಮ್ಮಿಬ್ಬರ ಪ್ರೀತಿಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇತ್ತೀಚಿಗಷ್ಟೇ ನಟಿ ಹರಿಪ್ರಿಯಾ ಮೂಗುತಿ ಚುಚ್ಚಿಸಿಕೊಂಡರು. ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಎಲ್ಲರ ಚಿತ್ತ ಸೆಳೆದಿದ್ದು ಮೂಗುತಿಯಲ್ಲ. ಬದಲಾಗಿ ಮೂಗುತಿ ಚುಚ್ಚುವ ಜಾಗ ಮಾರ್ಕ್‌ ಮಾಡಿದವರು. ಅವರು ಬೇರಾರೂ ಆಗಿರಲಿಲ್ಲ. ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಅಂದಿನಿಂದ ಶುರುವಾದ ಇವರ ಲವ್‌ ಬಗೆಗಿನ ಗಾಸಿಪ್‌ಗೆ ಪುಷ್ಠಿ ನೀಡಿದ್ದು, ಇಬ್ಬರೂ ಕೈಕೈ ಹಿಡಿದು ವಿಮಾನ ನಿಲ್ದಾಣದಲ್ಲಿ ಹೋಗುತ್ತಿದ್ದ ಫೋಟೋಗಳು. 

ಇದನ್ನೂ ಓದಿ :  ಸಿಂಹ ನಿನ್ನ ತೋಳಿನಲ್ಲಿ ಕಂದ ನಾನು...!!

ಈ ಫೋಟೋಗಳು ಎಲ್ಲೆಡೆ ವೈರಲ್‌ ಆದವು. ಇಬ್ಬರೂ ದುಬೈ ಪ್ರವಾಸ ಮುಗಿಸಿಕೊಂಡು ಬಂದ ಮೇಲಂತೂ ವಿಚಾರ ಮದುವೆ ವರೆಗೂ ಬಂದಿತ್ತು. ಹರಿಪ್ರಿಯಾ ಹಾಗೂ ವಸಿಷ್ಠ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್‌ ಸಹ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಯ್ತು. ಇಷ್ಟೆಲ್ಲಾ ಆದರೂ ವಸಿಷ್ಠ ಆಗಲಿ, ಹರಿಪ್ರಿಯಾ ಆಗಲಿ ಈ ಬಗ್ಗೆ ಏನೂ ಮಾತನಾಡಿರಲಿಲ್ಲ. ಇದರಿಂದಾ ಇದೇನೋ ವದಂತಿ ಇರಬೇಕೆಂದು ಎಲ್ಲರೂ ಸಹಜವಾಗಿಯೇ ಭಾವಿಸಿದ್ದರು. 

 

 
 
 
 

 
 
 
 
 
 
 
 
 
 
 

A post shared by Hariprriya (@iamhariprriya)

 

ನಿನ್ನೆ ನಟಿ ಹರಿಪ್ರಿಯಾ ಒಂದು ಪೋಸ್ಟ್ ಮಾಡಿದ್ದರು. ಸಿಂಹದ ಮಡಿಲಲ್ಲಿ ಮುದ್ದಾದ ಹೆಣ್ಣುಮಗುವೊಂದು ಮಲಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ, "ಚಿನ್ನ ನಿನ್ನ ತೋಳಿನಲ್ಲಿ ಕಂದಾ ನಾನು" ಎಂದು ನಟಿ ಹರಿಪ್ರಿಯಾ ಬರೆದುಕೊಂಡಿದ್ದರು. ಈ ಪೋಸ್ಟ್ ಕೂಡ ಎಲ್ಲರ ತಲೆಯಲ್ಲೂ ಸಾಕಷ್ಟು ಹುಳ ಬಿಟ್ಟಿತ್ತು. ವದಂತಿಗಳೆಲ್ಲ ಒಂದು ಹಂತಕ್ಕೆ ಸತ್ಯ ಎನಿಸಲು ಆರಂಭಿಸಿತು. 

 

 
 
 
 

 
 
 
 
 
 
 
 
 
 
 

A post shared by Vasishta N Simha (@imsimhaa)

 

ಇದೀಗ ನಟ ವಸಿಷ್ಠ ಸಿಂಹ ಮಾಡಿದ ಪೋಸ್ಟ್‌ನಿಂದ ಇಬ್ಬರ ನಡುವೆಯೂ ಲ್‌ ಆಗಿದ್ದು ಪಕ್ಕಾ ಆಗಿದೆ. ಇದೀಗ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ನಿನ್ನೆ ಹರಿಪ್ರಿಯಾ ಹಾಕಿದ್ದ ಸಿಂಹವೊಂದು ಪುಟ್ಟ ಮಗುವನ್ನು ತನ್ನ ತೊಳಿನಲ್ಲಿ ಎತ್ತಿಕೊಂಡಿರುವ ಫೋಟೋವನ್ನೇ ಇದೀಗ ವಸಿಷ್ಠಕೂಡ ಹಂಚಿಕೊಂಡಿದ್ದಾರೆ. ಇಂದು ವಸಿಷ್ಠ ಅದೇ ಫೋಟೋ ಪೋಸ್ಟ್‌ ಮಾಡಿದ್ದು, "ನಿನ್ನ ನೆರಳಾಗಿ ಕಾಯುವೆ ನಾನು" ಎಂದು ಹರಿಪ್ರಿಯಾ ಪ್ರೀತಿಗೆ ಅಸ್ತು ಅಂದಿದ್ದಾರೆ. ಈ ಮೂಲಕ ಇಬ್ಬರೂ ಪ್ರೀತಿಯಲ್ಲಿರುವುದರ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ಅಲ್ಲದೇ ಫೆಬ್ರವರಿಯಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : "ದುಡ್ಡಿಗಾಗಿ ಆದಿವಾಸಿ ಸಂಸ್ಕೃತಿ ಹೈಜಾಕ್‌ ಮಾಡೋದು ಸರೀನಾ?" : ನಟ ಚೇತನ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News