ಬೆಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಯತ್ನಿಸಿದ್ದಾನೆ. ಸಿಲಿಕಾನ್ ಸಿಟಿ ಬೆಂಗಳೂರಿನ ವಸಂತಪುರದಲ್ಲಿ ಈ ಘಟನೆ ನಡೆದಿದೆ. ಅರುಣ್ (38) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.


COMMERCIAL BREAK
SCROLL TO CONTINUE READING

8 ವರ್ಷಗಳಿಂದ ಯುವತಿಯೊಬ್ಬಳನ್ನು ಅರುಣ್ ಪ್ರೀತಿ ಮಾಡುತ್ತಿದ್ದ. 3 ವರ್ಷಗಳ ಹಿಂದೆ ಮೈಸೂರಿನ ಚಾಮುಂಡಿಬೆಟ್ಟದ ದೇವಸ್ಥಾನದಲ್ಲಿ ಪ್ರೀತಿಸುತ್ತಿದ್ದ ಯುವತಿಯ ಜೊತೆಗೆ ಮದುವೆ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ಇದೆ. 


ಇದನ್ನೂ ಓದಿ: Vande Bharat Express : ಬೆಂಗಳೂರಿನಲ್ಲಿ ಮೈಸೂರು - ಚೆನ್ನೈ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ


ಬಳಿಕ 2 ಮನೆಯವರನ್ನು ಒಪ್ಪಿಸಿ ಅರುಣ್ ಮತ್ತೆ ಮದುವೆಯಾಗುವ ಪ್ಲಾನ್‍ ಮಾಡಿಕೊಂಡಿದ್ದ. ಆದರೆ ಯುವತಿಯ ಪೋಷಕರಿಂದ ಬೇರೊಬ್ಬ ಯುವಕನೊಂದಿಗೆ ಆ ಯುವತಿಯ ಮದುವೆಗೆ ಸಿದ್ಧತೆ ನಡೆದಿತ್ತು. ಯುವತಿಯ ಪೋಷಕರು ಮದುವೆಯ ಆಹ್ವಾನ ಪತ್ರಿಕೆಗಳನ್ನು ಹಂಚಿದ್ದರು.


ತನ್ನ ಪ್ರೇಯಸಿಯ ಇನ್ವಿಟೇಷನ್ ಕಾರ್ಡ್ ಕಂಡ ಅರುಣ್ ಆಕೆಯ ಸಂಪರ್ಕಕ್ಕೆ ಯತ್ನಿಸಿದ್ದಾನೆ. ಯುವತಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅರುಣ್ ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾನೆ.


ಇದನ್ನೂ ಓದಿ: Crime News: ಮನೆ ಕಳ್ಳತನ ಮಾಡಿ ಎಸ್ಕೇಪ್ ಅಗಿದ್ದ ಖದೀಮ ಗಿರವಿ ಅಂಗಡಿಯಲ್ಲಿ ಸಿಕ್ಕಿಬಿದ್ದ!


ವಿಷ ಸೇವಿಸಿದ ಅರುಣ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.