PM visit Belagavi : ಬೆಳಗಾವಿಗೆ ಪಿಎಂ ಮೋದಿ ಭೇಟಿ : 8 ಕಿಮೀ ರೋಡ್ ಶೋ, 3-4 ಲಕ್ಷ ಜನ ಭಾಗಿ

ಇದೆ ಫೆಬ್ರವರಿ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುಂದಾ ನಗರಿ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 

Written by - Channabasava A Kashinakunti | Last Updated : Feb 25, 2023, 01:32 PM IST
  • ಇದೆ ಫೆಬ್ರವರಿ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ
  • ಕುಂದಾ ನಗರಿ ಬೆಳಗಾವಿಗೆ ಭೇಟಿ ನೀಡಲಿದ್ದಾರೆ
  • ಬೃಹತ್ ವೇದಿಕೆ ನಿರ್ಮಾಣ ಕಾರ್ಯಭರದಿಂದ ಸಾಗಿದೆ.
PM visit Belagavi : ಬೆಳಗಾವಿಗೆ ಪಿಎಂ ಮೋದಿ ಭೇಟಿ : 8 ಕಿಮೀ ರೋಡ್ ಶೋ, 3-4 ಲಕ್ಷ ಜನ ಭಾಗಿ title=

ಬೆಳಗಾವಿ : ಇದೆ ಫೆಬ್ರವರಿ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುಂದಾ ನಗರಿ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯಭರದಿಂದ ಸಾಗಿದೆ. 

2023 ರ ವಿಧಾನ ಸಭಾ ಚುನಾವಣೆಯ ದೃಷ್ಟಿಯಿಂದ ಬೆಳಗಾವಿಯ ಮೂರು ಪ್ರಮುಖ ಕ್ಷೇತ್ರಗಳಾದ ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿ ಬಿಜೆಪಿ ಈ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : Commissioner Dance : 'ಡಿಜೆ ಸೌಂಡಿಗೆ ಸ್ಟೆಪ್ಸ್ ಹಾಕಿ ಜನರಿಗೆ ಡ್ರಗ್ಸ್ ಜಾಗೃತಿ ಮೂಡಿಸಿದ ಕಮೀಷನರ್'

ಈ ಸಮಾವೇಶದಲ್ಲಿ ಸುಮಾರು 3-4 ಲಕ್ಷ ಜನ ಸೇರಿಸಲು ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಿಎಂ ಮೋದಿ ಬೃಹತ್ ಸಮಾವೇಶ ಯಶಸ್ವಿಗೆ ಬಿಜೆಪಿಯ ಸ್ಥಳೀಯ ನಾಯಕರು ಭಾರಿ ಸಿದ್ಧತೆ ನಡೆಸುತ್ತಿದ್ದಾರೆ. 

ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಪಿಎಂ ಮೋದಿ ರೋಡ್ ಶೋ ಆಯೋಜನೆ ಮಾಡಲಾಗಿದೆ. ಈ ಬೃಹತ್ ರೋಡ್ ಶೋಗೆ ಮೂರ್ನಾಲ್ಕು ರೋಡ್ ಗಳನ್ನು ಫೈನಲ್ ಮಾಡಲಾಗಿದೆ. ಎಸ್'ಪಿಜಿ ಅನುಮತಿ ಬಳಿಕ ಒಂದು ರೋಡ್'ನಲ್ಲಿ ಪಿಎಂ ಮೋದಿ ಅವರು ಸುಮಾರು 8 ಕಿಮೀ ರೋಡ್ ಶೋ ಮಾಡಲಿದ್ದಾರೆ. ಈ ರೋಡ್ ಶೋನಲ್ಲಿ ಪಿಎಂ ಮೋದಿ ಅವರು ಮಾಡಿದ ಕೆಲಸಗಳನ್ನು ಅನಾವರಣಕ್ಕೆ ಸ್ಥಳಿಯ ನಾಯಕರ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ, ಎಲ್ಲಾ ರಾಜ್ಯಗಳ ವೇಶಭೋಷಣ ಬಿಂಬಿಸುವ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ. ಅಲ್ಲದೆ, ರಾಜ್ಯ ಹಾಗೂ ದೇಶದ ಮಹಾನ ಪುರುಷರ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಶಾಸಕ ಅಭಯ ಪಾಟೀಲ, ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಸಿದ್ಧತೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಅಳಿವಿನಂಚಿಗೆ ತಲುಪಿದ ರಣಹದ್ದು!! 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News