ಬಾಲಕಿಯನ್ನು ಮದುವೆಯಾಗಲು ಆಧಾರ್ ಕಾರ್ಡ್ ತಿದ್ದಿದ ಮದುಮಗ.. ಈಗ ಪೊಲೀಸರ ಅತಿಥಿ
Child Marriage : ಬಾಲಕಿಯನ್ನು ವರಿಸಲು ಹೋಗಿ ಆಧಾರ್ ಕಾರ್ಡ್ ಫೋರ್ಜರಿ ಮಾಡಿರುವ ಆರೋಪದ ಮೇಲೆ ಮನು ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಲಕಿಯನ್ನು ಮದುವೆಯಾಗುವ ಉದ್ದೇಶಕ್ಕೆ ಆಧಾರ್ ಕಾರ್ಡ್ ತಿದ್ದಿ ಮದುಮಗನೊಬ್ಬ ಪೊಲೀಸರ ಅತಿಥಿಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಬಾಲಕಿಯನ್ನು ವರಿಸಲು ಹೋಗಿ ಆಧಾರ್ ಕಾರ್ಡ್ ಫೋರ್ಜರಿ ಮಾಡಿರುವ ಆರೋಪದ ಮೇಲೆ ಮನು ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲು ತೆರಳಿದ್ದ.
ಇದನ್ನೂ ಓದಿ: ಪಾಕ್ ಕ್ರಿಕೆಟರ್ ವಾಸಿಮ್ ಅಕ್ರಮ್ To ಲಲಿತ್.. ಸುಶ್ಮಿತಾ ಸೇನ್ ಬಾಳಲ್ಲಿ ಬಂದ 10 ಮಂದಿ
ಈ ವೇಳೆ ಬಾಲಕಿ ಹುಟ್ಟಿದ ವರ್ಷ 2005 ಇರುವುದನ್ನು 2000 ನೇ ಇಸವಿಗೆ ಬದಲಾಯಿಸಿರುವುದು ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ವೇಳೆ ಆಧಾರ್ ವೆಬ್ಸೈಟ್ ಚೆಕ್ ಮಾಡಿದ್ದಾರೆ. ಆಗ ಯುವಕನ ಕರಾಮತ್ತು ಬಯಲಾಗಿದೆ.
ತಕ್ಷಣ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಆಧಾರ್ ಕಾರ್ಡ್ ತಿದ್ದಿದವರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: 13 ವರ್ಷಗಳ ನಂತರ ದೆಹಲಿಗೆ ತೆರಳಿದ ನಟ ಸುದೀಪ್.. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.