Sushmita Sen: ಪಾಕ್‌ ಕ್ರಿಕೆಟರ್‌ ವಾಸಿಮ್‌ ಅಕ್ರಮ್‌ To ಲಲಿತ್‌.. ಸುಶ್ಮಿತಾ ಸೇನ್‌ ಬಾಳಲ್ಲಿ ಬಂದ 10 ಮಂದಿ

Sushmita Sen Love Life: ಸದ್ಯ ಐಪಿಎಲ್‌ ಫೌಂಡರ್‌ ಲಲಿತ್‌ ಮೋದಿ ಜೊತೆಗಿನ ಸಂಬಂಧದಿಂದ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌ ಸುದ್ದಿಯಲ್ಲಿದ್ದಾರೆ. 

Written by - Chetana Devarmani | Last Updated : Jul 16, 2022, 10:32 AM IST
  • ಪಾಕ್‌ ಕ್ರಿಕೆಟರ್‌ ವಾಸಿಮ್‌ ಅಕ್ರಮ್‌ To ಲಲಿತ್‌ ಮೋದಿ
  • ಸುಶ್ಮಿತಾ ಸೇನ್‌ ಬಾಳಲ್ಲಿ ಬಂದ 10 ಮಂದಿ
  • ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌
Sushmita Sen: ಪಾಕ್‌ ಕ್ರಿಕೆಟರ್‌ ವಾಸಿಮ್‌ ಅಕ್ರಮ್‌ To ಲಲಿತ್‌.. ಸುಶ್ಮಿತಾ ಸೇನ್‌ ಬಾಳಲ್ಲಿ ಬಂದ 10 ಮಂದಿ  title=
ಸುಶ್ಮಿತಾ ಸೇನ್‌

Sushmita Sen Love Life: ಸುಶ್ಮಿತಾ ಸೇನ್ ವಿವಿಧ ವಯೋಮಾನದ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. 19ನೇ ವಯಸ್ಸಿನಲ್ಲಿಯೇ ಭುವನ ಸುಂದರಿ ಪಟ್ಟವನ್ನು ಗೆದ್ದ ಗರಿಮೆ ಇವರದ್ದು. 46 ವರ್ಷ ವಯಸ್ಸಿನ ಸುಶ್ಮಿತಾ ಸೇನ್ ತಮಗಿಂತ 12 ವರ್ಷ ಹಿರಿಯ ವ್ಯಕ್ತಿ ಲಲಿತ್ ಮೋದಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಡೇಟಿಂಗ್‌ ಫೋಟೋಗಳನ್ನು ಸ್ವತಃ ಲಲಿತ್ ಮೋದಿ ಅವರೇ ಹಂಚಿಕೊಂಡಿದ್ದಾರೆ. ಲಲಿತ್​ಗೂ ಮೊದಲು ಸುಶ್ಮಿತಾ ಸೇನ್‌ ಅವರ ಬಾಳಲ್ಲಿ 9 ಮಂದಿ ಬಂದು ಹೋಗಿದ್ದಾರೆ. 

1. ವಿಕ್ರಮ್ ಭಟ್

ದಸ್ತಕ್​ ಚಿತ್ರದ ಶೂಟಿಂಗ್ ವೇಳೆ ವಿಕ್ರಮ್‌ ಭಟ್‌ ಮತ್ತು ಸುಶ್ಮಿತಾ ಸೇನ್‌ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ವಿಕ್ರಮ್ ಭಟ್ ಮದುವೆಯಾಗಿದ್ದರು ಮತ್ತು ಈ ವಿವಾಹೇತರ ಸಂಬಂಧವು ಅವರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿತ್ತು. ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. 1996ರ ಸಮಯದಲ್ಲಿ ವಿಕ್ರಮ್ ಭಟ್ ಮತ್ತು ಸುಶ್ಮಿತಾ ಸೇನ್ ಜೋಡಿ ಬಾಲಿವುಡ್​ನ ಕ್ಯೂಟ್ ಕಪಲ್ ಎಂದೇ ಹೆಸರು ಮಾಡಿತ್ತು. ದಸ್ತಕ್‌ ಸಿನಿಮಾ 1996ರಲ್ಲಿ ತೆರೆ ಕಂಡಿತು.  ಸುಶ್ಮಿತಾ ಈ ಸಿನಿಮಾದ ನಾಯಕಿ ನಟಿಯಾಗಿದ್ದರು ಹಾಗೂ ವಿಕ್ರಮ್ ಕಥೆ ಬರೆದಿದ್ದರು.

ಇದನ್ನೂ ಓದಿ: ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ರಹಸ್ಯ ನಿಶ್ಚಿತಾರ್ಥ? ನಟಿ ಕೈಯಲ್ಲಿ ದುಬಾರಿ ಉಂಗುರ!

2. ರಣದೀಪ್ ಹೂಡ

ರಣದೀಪ್ ಹೂಡಾ ಜೊತೆ ನಟಿ ಸುಶ್ಮಿತಾ ಸೇನ್ ಮೂರು ವರ್ಷಗಳ ಕಾಲ ರಿಲೆಷನ್‌ಶಿಪ್‌ನಲ್ಲಿದ್ದರು. ಇವರಿಬ್ಬರ ಸಂಬಂಧ ದೊಡ್ಡಮಟ್ಟದ ಚರ್ಚೆಗೆ ಸಹ ಕಾರಣವಾಗಿತ್ತು. ಆದಾಗ್ಯೂ, ಈ ಸಂಬಂಧವು ಅತ್ಯಂತ ಕಹಿಯಾದ ಅಂತ್ಯವನ್ನು ಕಂಡಿತು. ಮಾಧ್ಯಮವೊಂದರ ಸಂದರ್ಶನದಲ್ಲಿ ಸುಶ್ಮಿತಾ ಸೇನ್ ಜತೆ ಬ್ರೇಕಪ್ ಮಾಡಿಕೊಂಡಿದ್ದು ನನ್ನ ಜೀವನದಲ್ಲಿ ನಡೆದ ಅತ್ಯಂತ ಒಳ್ಳೆಯ ವಿಚಾರಗಳಲ್ಲಿ ಒಂದು ಎಂದು ರಣದೀಪ್‌ ಹೂಡ ಹೇಳಿಕೊಂಡಿದ್ದರು. 

3. ಬಂಟಿ ಸಚ್‌ದೇವ್:

ಬಂಟಿ ಸಚ್‌ದೇವ್ ಕಾರ್ನರ್‌ಸ್ಟೋನ್ ಎಂಬ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯಸ್ಥರು. ಅವರು ಸೋನಾಕ್ಷಿ ಸಿನ್ಹಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಸುಶ್ಮಿತಾ ಸೇನ್ ಹಾಗೂ ಬಂಟಿ ಸಚ್​ದೇವ್ ಮಧ್ಯೆ ಲವ್ ಅಫೇರ್ ಇದೆ ಎಂಬ ಸುದ್ದಿಯೂ ಹುಟ್ಟಿಕೊಂಡಿತ್ತು. ಅವರು ಆ ಸಮಯದಲ್ಲಿ ಸುಶ್ಮಿತಾ ಅವರ ಮ್ಯಾನೇಜರ್ ಆಗಿದ್ದರು. ಹಲವು ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವದಂತಿ ಬಗ್ಗೆ ಪ್ರಶ್ನೆ ಕೇಳಿದಾಗ ಸುಶ್ಮಿತಾ ನಕ್ಕು ಸುಮ್ಮನಾಗುತ್ತಿದ್ದರು. 

4.ಕ್ರಿಕೆಟರ್‌ ವಾಸಿಮ್ ಅಕ್ರಮ್: 

ಸುಶ್ಮಿತಾ ಸೇನ್‌ ಪಾಕ್‌ ಕ್ರಿಕೆಟರ್‌ ವಾಸಿಮ್‌ ಅಕ್ರಮ್‌ ಜೊತೆ ಸಹ ರಿಲೇಷನ್‌ಶಿಪ್‌ಲ್ಲಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಮತ್ತು ಸುಶ್ಮಿತಾ ಸೇನ್ ನಡುವೆ ಪ್ರೀತಿ ಎಂಬ ವದಂತಿಗಳು ಹರಿದಾಡಿದ್ದವು. ಆದರೆ ಇವರ ಸಂಬಂಧ ಐದೇ ತಿಂಗಳಲ್ಲಿ ಮುರಿದು ಬಿತ್ತು ಎನ್ನಲಾಗಿದೆ.

5.ಮುದಸ್ಸರ್ ಅಜೀಜ್:

ಸುಶ್ಮಿತಾ ಸೇನ್ ಅಭಿನಯದ ದುಲ್ಹಾ ಮಿಲ್ ಗಯಾ ಚಿತ್ರದ ನಿರ್ದೇಶಕ ಮುದಸ್ಸರ್ ಅಜೀಜ್. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು ಮತ್ತು ಕ್ರಮೇಣ ಪ್ರೀತಿಸುತ್ತಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಇಬ್ಬರೂ ಬೇರೆಯಾದರು. ಇದು ಪರಸ್ಪರ ನಿರ್ಧಾರವಾಗಿತ್ತು ಎಂದು ಹೇಳಲಾಗುತ್ತದೆ. ಈ ಸುದ್ದಿಯಿಂದ ಮುದಸ್ಸರ್ ಅವರ ಪಾಲಕರು ಸಾಕಷ್ಟು ಡಿಸ್ಟರ್ಬ್ ಆಗಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮುದಸ್ಸರ್ ಹೇಳಿಕೊಂಡಿದ್ದರು.

ಇದನ್ನೂ ಓದಿ: MLA, MP ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಸ್ಯಾಂಡಲ್​ವುಡ್ ನಟ ಅರೆಸ್ಟ್!

6.ಸಬೀರ್ ಭಾಟಿಯಾ:  

ಸಬೀರ್ ಭಾಟಿಯಾ ಹಾಟ್‌ಮೇಲ್‌ನ ಸಂಸ್ಥಾಪಕರಾಗಿದ್ದಾರೆ. ಅವರು ಅದನ್ನು ರದ್ದುಗೊಳಿಸುವ ಮೊದಲು ಅವರು ಮತ್ತು ಸುಶ್ಮಿತಾ ಸ್ಥಿರ ಸಂಬಂಧದಲ್ಲಿದ್ದರು ಎಂದು ವದಂತಿಗಳಿವೆ. ಭಾಟಿಯಾ ಸುಶ್ಮಿತಾ ಸೇನ್‌ ಅವರಿಗೆ 10.5 ಕ್ಯಾರೆಟ್ ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹಲವಾರು ವದಂತಿಗಳಿವೆ.

7.ರಿತಿಕ್ ಭಾಸಿನ್:

2015ರಲ್ಲಿ ಮುಂಬೈ ಮೂಲದ ರೆಸ್ಟೋರೆಂಟ್ ಮಾಲೀಕ ರಿತಿಕ್ ಭಾಸಿನ್ ಜತೆ ಸುಶ್ಮಿತಾ ಸೇನ್ ಓಡಾಡುತ್ತಿದ್ದರು ಎನ್ನಲಾಗಿದೆ. ಅನೇಕ ಕಡೆಗಳಲ್ಲಿ ಸುಶ್ಮಿತಾ ಸೇನ್‌ ಮತ್ತು ರಿತಿಕ್‌ ಒಟ್ಟಾಗಿ ಸುತ್ತಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ, ಇವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

8.ಇಮ್ತಿಯಾಜ್ ಖತ್ರಿ

36 ವರ್ಷ ವಯಸ್ಸಿನ ಸುಶ್ಮಿತಾ ಸೇನ್‌ 22 ವರ್ಷದ ಉದ್ಯಮಿ ಇಮ್ತಿಯಾಜ್ ಖತ್ರಿ ಜತೆ ಸಂಬಂಧ ಇಟ್ಟುಕೊಂಡಿದ್ದರು ಎಂಬ ವದಂತಿ ಇತ್ತು. ಗೋವಾದಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ಸುದ್ದಿಗೆ ಪುಷ್ಠಿ ನೀಡಿತ್ತು. ಆದರೆ ಈ ಬಗ್ಗೆ ಸುಶ್ಮಿತಾ ಎಲ್ಲಿಯೂ ಮೌನ ಮುರಿದಿಲ್ಲ.

9.ರೋಹ್ಮನ್ ಶಾಲ್:

ಸುಶ್ಮಿತಾ ಸೇನ್, ರೋಹ್ಮನ್ ಅವರ ಜನ್ಮದಿನದಂದು ಶುಭ ಹಾರೈಸಿದರು, ಸುಂದರವಾದ ಚಿತ್ರಗಳನ್ನು ಹಂಚಿಕೊಂಡಿದ್ದರು. ಸುಶ್ಮಿತಾ ಸೇನ್ ತನಗಿಂತ 15 ವರ್ಷ ಚಿಕ್ಕವರಾದ ನೋಯ್ಡಾ ಮೂಲದ ಮಾಡೆಲ್ ರೋಹ್ಮನ್ ಶಾಲ್ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಇಬ್ಬರೂ ಮೂರು ವರ್ಷಗಳಿಗೂ ಹೆಚ್ಚು ಕಾಲ ಸ್ಥಿರ ಸಂಬಂಧದಲ್ಲಿದ್ದರು. ಆದರೆ  2021ರ ಡಿಸೆಂಬರ್ ವೇಳೆಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡರು. 

ಇದನ್ನೂ ಓದಿ: ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಐಪಿಎಲ್ ಮಾಜಿ ಅಧ್ಯಕ್ಷ ಲಲೀತ್ ಮೋದಿ ಲವ್ವಿ ಡವ್ವಿ..!

10. ಲಲಿತ್ ಮೋದಿ:

ರೋಹ್ಮನ್ ಶಾಲ್ ಅವರೊಂದಿಗೆ ಸಂಬಂಧ ಮುರಿದುಬಿದ್ದ ನಂತರ, ಸುಶ್ಮಿತಾ ಉದ್ಯಮಿ ಮತ್ತು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿ ಈಗ ಶುರುವಾಗಿದೆ. ಜುಲೈ 14, 2022 ರಂದು, ಲಲಿತ್ ಮೋದಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌ ಜೊತೆ ಡೇಟಿಂಗ್ ಮಾಡುವ ಸುದ್ದಿಯನ್ನು ಪ್ರಕಟಿಸಿದರು. ಸುಶ್ಮಿತಾ ಅವರೊಂದಿಗಿನ ಥ್ರೋಬ್ಯಾಕ್ ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡುವ ಮೂಲಕ ಮತ್ತು ಮಾಲ್ಡೀವ್ಸ್‌ನಲ್ಲಿ ಅವರ ಇತ್ತೀಚಿನ ವಿಹಾರದ ಫೋಟೋಗಳನ್ನು ಲಲಿತ್ ಟ್ವೀಟ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News