ಬೆಂಗಳೂರು: ಉದ್ಯಮಿ ಗೋವಿಂದಬಾಬುಗೆ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ಬಂಧನವಾಗಿದ್ದಾಯ್ತು, ನ್ಯಾಯಾಯಕ್ಕೆ ಹಾಜರು ಪಡಿಸಿ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಹಾಲಶ್ರೀ ಬಂಧನದ ಸುದ್ದಿ ಕೇಳಿ ಸಂತಸದಿಂದಿರೋ ಚೈತ್ರ ಸಹ ತನಿಖೆಗೆ ಸಹಕಾರ ನೀಡ್ತಿದ್ದು, ಇಬ್ಬರ ವಿಚಾರಣೆಯಿಂದ ಮತ್ತಷ್ಟು ಸ್ಪೊಟಕ ವಿಚಾರ ಹೊರಬೀಳಲಿದೆ


COMMERCIAL BREAK
SCROLL TO CONTINUE READING

ಹಾಲಶ್ರೀಯನ್ನ ಹತ್ತು ದಿನ ಸಿಸಿಬಿ ಕಸ್ಟಡಿಗೆ ನೀಡಿದ ನ್ಯಾಯಾಲಯ


ಎಂಎಲ್ಎ ಟಿಕೆಟ್ ಕೊಡಿಸೋದಾಗಿ ವಂಚಿಸಿದ ಆರೋಪದಲ್ಲಿ ಎ3 ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ನಿನ್ನೆ ಸಿಸಿಬಿ ಪೊಲೀಸ್ರ ಬಲೆಗೆ ಬಿದ್ದಿದ್ರು. ರಹಸ್ಯ ಸ್ಥಳದಲ್ಲಿ ಆರೋಪಿ ಅಭಿನವ ಹಾಲಶ್ರೀಯನ್ನ ವಿಚಾರಣೆ ನಡೆಸಿ ಇಂದು ಬೆಳಗ್ಗೆ 19ನೇ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ರು. ಈ ವೇಳೆ ಹೆಚ್ಚಿನ ವಿಚಾರಣೆಗೆ ಅವಶ್ಯಕತೆವಿರುವ ಹಿನ್ನೆಲೆ ಅಭಿನವ ಹಾಲಶ್ರೀಯನ್ನ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ಮನವಿ ಮಾಡಿದ್ರಿಂದ ಮುಂದುವರೆಸಿದ್ದಾರೆ.ಅಂದ್ರೆ ಹತ್ತು ದಿನಗಳ ಕಾಲ‌ ಆರೋಪಿಯನ್ನ ಸಿಸಿಬಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.


ಇದನ್ನೂ ಓದಿ: ಭೀಮನ ಆರೋಗ್ಯ ಸ್ಥಿತಿ ಗಂಭೀರ!..ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆ ಸ್ಥಳೀಯರ ಒತ್ತಾಯ..!


ಇನ್ನು ನ್ಯಾಯಾಲಯ ಆರೋಪಿ ಅಭಿನವ ಹಾಲಶ್ರೀಯನ್ನ ಕಸ್ಟಡಿಗೆ ನೀಡುತ್ತಿದ್ದಂತೆ ಆರೋಪಿಯನ್ನ ಸಿಸಿಬಿ ಕಚೇರಿಗೆ ಕರೆತಂದ ಅಧಿಕಾರಿಗಳು ಹಾಲಶ್ರೀಗೆ ಪಿರ್ಯಾದುದಾರ ಗೋವಿಂದ ಬಾಬು ಪೂಜಾರಿ ಪರಿಚಯ ಹೇಗೆ..?  ಗೋವಿಂದ ಬಾಬು ಪೂಜಾರಿ ಎಷ್ಟು ವರ್ಷಗಳಿಂದ ಪರಿಚಯ. ನಿಮ್ಮಿಬ್ಬರ ಮಧ್ಯೆ ನಡೆದಿರು ಹಣಕಾಸು ವ್ಯವಹಾರ ಬಗ್ಗೆ ಏನು ಹೇಳ್ತೀರ?,ಗೋವಿಂದಬಾಬು ಪೂಜಾರಿ ನಿಮಗೆ 1.5 ಕೋಟಿ ಕೊಟ್ಟಿದ್ದಾರಾ.?ಗೋವಿಂದ ಬಾಬು ಪೂಜಾರಿ ಬಳಿ ಹೇಗೆ ಹಣವನ್ನು ಪಡೆಯಲಾಯ್ತು.. ನೇರವಾಗಿ ಪಡೆದ್ರಾ.. ಯಾರ ಮುಖಾಂತರ ತಲುಪಿಸಿದ್ರು..ಗೋವಿಂದ ಬಾಬು ಪೂಜಾರಿ ಬಳಿ ಹಣ ಪಡೆದಿದ್ದು ಯಾಕೆ..? ಯಾವ ಕಾರಣಕ್ಕಾಗಿ ಹಣ ಪಡೆದುಕೊಂಡಿದ್ದು ಎಂಬಿತ್ಯಾದಿ ಪ್ರಶ್ನೆಗಳನ್ನ ಕೇಳಿದ್ದು, ಸಿಸಿಬಿ ಪ್ರಶ್ನೆಗಳಿಗೆ ಮೌನವಾಗಿ ಕುಳಿತ ಅಭಿನವ ಹಾಲಶ್ರೀ, ನನಗೆ ಹಣ ತಲುಪಿದೆ ಆದರೆ ಮಠಕ್ಕೆ ಕೊಟ್ಟಿದ್ದು ಎಂದಿದ್ದಾರಂತೆ. ಅದರ ಜೊತೆಗೆ ಚೈತ್ರ ಕುಂದಾಪುರ ನನಗೆ ಏನು ಹೇಳಿದ್ರೋ ಅದನ್ನೆ ಮಾಡಿದ್ದೇನೆ ಎಂದು ಚೈತ್ರಳ‌ ಮೇಲೆಯೇ ಆರೋಪ‌ ಮಾಡಿದ್ದಾರಂತೆ.


ಇದರ ಜೊತೆಗೆ ಸಿಸಿಬಿ ಅಧಿಕಾರಿಗಳಿಗೆ  ಗೋವಿಂದ ಬಾಬು ಪೂಜಾರಿ ಜೊತೆಗೆ ವ್ಯವಹಾರ ನಡೆದ ಬಳಿಕ ಹಾಲಶ್ರೀ ನಡೆಸಿರುವ ವ್ಯವಹಾರ ಪತ್ತೆಯಾಗಿದೆ. ವಂಚಿಸಿ ಪಡೆದ ಹಣದಲ್ಲಿ ಹಿರೇಹಡಗಲಿ ಮಠದ ಸಮೀಪದಲ್ಲೆ ಮೂವತ್ತು ಎಕರೆ ಜಮೀನು ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಮೈಸೂರು ಹಾಗು ಬೆಂಗಳೂರಿನ ಕೆಲವರಿಗೆ ಹಣ ನೀಡಿರೋದು ತನಿಖೆ ವೇಳೆ ಬಹಿರಂಗವಾಗಿದೆ.


ಇದನ್ನೂ ಓದಿ : ಶೀಘ್ರದಲ್ಲಿಯೇ ರುಚಕ ರಾಜಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಧನ-ಕುಬೇರ ಭಾಗ್ಯ ಪ್ರಾಪ್ತಿ! 


ಇವೆಲ್ಲದರ ನಡುವೆ ಅಭಿನವ ಹಾಲಶ್ರೀ ಪತ್ತೆಗೆ ಸಿಸಿಬಿ ಟೀಂ ಅರ್ಚಕರ ವೇಷ ಧರಿಸಿದ್ದಾಗಿ ತಿಳಿದು ಬಂದಿದೆ. ಕಾವಿ ತೆಗೆದು ಉತ್ತರ ಭಾರತದತ್ತ ಹೊರಟಿದ್ದ ಸ್ವಾಮಿಜಿಗೆ ಮಠಗಳ ಬಗ್ಗೆ ಮಾಹಿತಿ ಇತ್ತು.‌ಹೀಗಾಗಿ ಮಠಗಳಲ್ಲಿ ಆಶ್ರಯ ಪಡೆದಿರಬಹುದೆಂದು ಯೋಚಿಸಿದ ಸಿಸಿಬಿ ಶೃಂಗೇರಿಯ ಅರ್ಚಕರು ವೇಷದಲ್ಲಿ ಆಪರೇಷನ್ ಹಾಲಶ್ರೀ ಕಾರ್ಯಾಚರಣೆ ನಡೆಸಿ ಹಾಲಶ್ರೀಯನ್ನ ಬಂಧಿಸುವಲ್ಲಿ ಸಕ್ಸಸ್ ಆಗಿದ್ರು.


ಸದ್ಯ ಅಭಿನವ ಹಾಲಶ್ರೀಯಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕಿರೋ‌ ಸಿಸಿಬಿ ಟೀಂಗೆ ಅಭಿನವ ಹಾಲಶ್ರೀ ಪ್ರಕರಣ ದಾಖಲಾಗ್ತಿದ್ದಂತೆ ಮೈಸೂರಿನ‌ ಮಾರ್ಗವಾಗಿ ತೆರಳಿದ್ದು ವ್ಯಕ್ತಿಯೊಬ್ಬನಿಗೆ ಹಣ ನೀಡಿದ್ದು ನಾನ್ ಕೇಳಿದಾಗ ವಾಪಸ್ಸು ನೀಡುವಂತೆ ಸೂಚಿಸಿದ್ರಂತೆ.‌ ಆ ಹಣದೊಂದಿಗೆ ಆತ ಹಿರೇಹಡಗಲಿ ಮಠದ ಪಲ್ಲಕಿ ಬಳಿ ಇಟ್ಟಿದ್ದು, ಮಠದ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಬ್ಯಾಗ್ ನಲ್ಲಿದ್ದ 65 ಲಕ್ಷ ಹಣ ವಶಪಡಿಸಿಕೊಂಡಿದ್ದು, ಹೆಚ್ಚಿನ ರಿಕವರಿ ಹಾಗೂ ಸ್ಥಳ ಮಹಜರು ಮಾಡಲು ಹಾಲಶ್ರೀಯನ್ನ ಹಿರೇಹಡಗಲಿ ಮಠಕ್ಕೆ ಕರೆದೊಯ್ದಿದ್ದಾರೆ. ಮತ್ತೊಂದೆಡೆ ಪ್ರಮುಖ ಆರೋಪಿ ಚೈತ್ರಳಿಂದಲೂ ಸಹ ಹೇಳಿಕೆ ದಾಖಲಿಸಿಕೊಂಡಿರೋ ಸಿಸಿಬಿ ತನಿಖೆ ಮುಂದುವರೆಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.