Ramya : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ!
ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬ ನಟಿ ರಮ್ಯಾಗೆ ನಿಂದನೆ ಮಾಡಿದ್ದಾರೆ. ಈ ಬಗ್ಗೆ ರಮ್ಯಾ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿಯಿರುವ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು : ಸ್ಯಾಂಡಲವುಡ್ ನಟಿ, ಸಂಸದೆ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬ ನಟಿ ರಮ್ಯಾಗೆ ನಿಂದನೆ ಮಾಡಿದ್ದಾರೆ. ಈ ಬಗ್ಗೆ ರಮ್ಯಾ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿಯಿರುವ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಖುದ್ದು ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ : Nayanthara Wedding: ಗೆಳೆಯ ವಿಘ್ನೇಶ್ ಶಿವನ್ ಕೈಹಿಡಿದ ನಟಿ ನಯನತಾರಾ
ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ದಶಕಗಳ ಕಾಲ ಚಂದನವನವನ್ನು ಆಳಿದ ನಟಿ ರಮ್ಯಾ ಬಳಿಕ ಸಿನಿಮಾ ಕ್ಷೇತ್ರದಿಂದ ಕೊಂಚ ದೂರವಾಗಿದ್ದರು.
ಕಾಣೆಯಾಗಿದ್ದಾರೆ ರಮ್ಯಾ ಅನ್ನುವಷ್ಟರಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದರು. ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಸೈ ಎನಿಸಿಕೊಂಡಿದ್ದ ರಮ್ಯಾ ಬಳಿಕ ಏಕಾಏಕಿ ಎರಡೂ ಕ್ಷೇತ್ರಗಳನ್ನು ತೊರೆದು ವಿದೇಶದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು. ಪುಟ್ಟ ಬ್ರೇಜ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.
ಇತ್ತೀಚೆಗಷ್ಟೇ ನಡೆದ ಖಾಸಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ರಮ್ಯಾ ಸಾಧನೆಯನ್ನ ಗುರುತಿಸಿ ಪ್ರಶಸ್ತಿ ನೀಡಲಾಗಿತ್ತು. ಈ ವೇಳೆ ಚಿತ್ರರಂಗಕ್ಕೆ ರಮ್ಯಾ ಮರಳುವ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟಿ, ಹೌದು ನಾನು ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ. ಒಂದೊಳ್ಳೆ ಪಾತ್ರ ಮತ್ತು ಚಿತ್ರಕಥೆಯ ಮೂಲಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ : ಬಹು ನಿರೀಕ್ಷಿತ "ಕಬ್ಜ" ಚಿತ್ರದಿಂದ ಹೊಸ ಅಪ್ಡೇಟ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ