ನವದೆಹಲಿ: ಖ್ಯಾತ ಬಹುಭಾಷಾ ನಟಿ ನಯನತಾರಾ ಮತ್ತು ನಿರ್ಮಾಪಕ ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಮಹಾಬಲಿಪುರಂನಲ್ಲಿ ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ.
ಸ್ವತಃ ವಿಘ್ನೇಶ್ ಶಿವನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಯನತಾರಾ ಅವರಿಗೆ ಸಿಹಿಮುತ್ತು ನೀಡುತ್ತಿರುವ ಫೋಟೋ ಹಂಚಿಕೊಂಡಿರುವ ವಿಘ್ನೇಶ್, ‘On a scale of 10… She’s Nayan & am the One. With God’s grace , the universe , all the blessings of our parents & best of friends. Jus married #Nayanthara’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಇದನ್ನೂ ಓದಿ: ಬಹು ನಿರೀಕ್ಷಿತ "ಕಬ್ಜ" ಚಿತ್ರದಿಂದ ಹೊಸ ಅಪ್ಡೇಟ..!
On a scale of 10…
She’s Nayan & am the One ☝️☺️😍🥰
With God’s grace , the universe , all the blessings of our parents & best of friends
Jus married #Nayanthara ☺️😍🥰 #WikkiNayan #wikkinayanwedding pic.twitter.com/C7ySe17i8F
— Vignesh Shivan (@VigneshShivN) June 9, 2022
ಈ ಸ್ಟಾರ್ ದಂಪತಿ 2015ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು. ‘ನಾನು ರೌಡಿ ಧಾನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಈ ಜೋಡಿ ಪ್ರೀತಿಸಲು ಶುರು ಮಾಡಿತ್ತು. ಪ್ರಶಸ್ತಿ ಸಮಾರಂಭವೊಂದರಲ್ಲಿ ತಾವಿಬ್ಬರೂ ಶೀಘ್ರವೇ ಮದುವೆಯಾಗುತ್ತೇವೆಂದು ದೃಢಪಡಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಚಿತ್ರರಂಗದ ಗಣ್ಯರು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಜೋಡಿಗೆ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: Rashmika Mandanna: ಖ್ಯಾತ ಮ್ಯಾಗಜೀನ್ ‘ಫಿಲ್ಮ್ಫೇರ್’ನ ಕವರ್ ಪೇಜ್ನಲ್ಲಿ ರಶ್ಮಿಕಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.