ಬೆಂಗಳೂರು: ಯುವತಿ ಮೇಲೆ ಆಸಿಡ್‌ ದಾಳಿ ನಡೆಸಿ, ಇದೀಗ ಪೊಲೀಸರ ಅತಿಥಿಯಾಗಿರುವ ಆರೋಪಿ ನಾಗೇಶ್‌ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದಾರೆ. ತಿರುವಣ್ಣಾಮಲೈನ ರಮಣಾಶ್ರಮಕ್ಕೆ ಆರೋಪಿಯನ್ನು ಪೊಲೀಸರು ಕರೆದೊಯ್ದಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಬೆಳಗ್ಗೆ ಆರೋಪಿಯನ್ನು ಕರೆದುಕೊಂಡು ಹೋಗಿರುವ ಪೊಲೀಸರು ಕೃತ್ಯ ನಡೆದ ಜಾಗ ಸೇರಿದಂತೆ ಆರೋಪಿ ಪತ್ತೆಯಾದ ಜಾಗದವರೆಗೂ ಸ್ಥಳ ಮಹಜರು ಮಾಡುತ್ತಿದ್ದಾರೆ. 


ಇದನ್ನು ಓದಿ: ಕೇವಲ 15 ನಿಮಿಷದಲ್ಲಿ ಮದುವೆಗೆ ಪ್ಲಾನ್‌: ಇದು ಭಾರತೀಯ ಆಟಗಾರನ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!


ಆ್ಯಸಿಡ್ ದಾಳಿ ನಡೆಸಿದ ಸ್ಥಳವಾದ ಸುಂಕದಕಟ್ಟೆ ಮುತ್ತೂಟ್ ಫೈನಾನ್ಸ್ ಏರಿಯಾ, ಆ್ಯಸಿಡ್ ಬಾಟಲಿ ಬಿಸಾಡಿದ ಜಾಗ, ವಕೀಲರನ್ನು ಭೇಟಿಯಾದ ಜಾಗ, ಬೈಕ್ ಬಿಟ್ಟು ಪರಾರಿಯಾದ ಜಾಗ, ಮೊಬೈಲ್ ಬಿಸಾಡಿದ ಜಾಗ ಸೇರಿದಂತೆ ಪ್ರತಿಯೊಂದು ಕಡೆಗಳಲ್ಲೂ ಸ್ಥಳ ಮಹಜರು ನಡೆಸಲಾಗುತ್ತಿದೆ.  


ಇನ್ನು ತನಿಖೆ ತೀವ್ರಗೊಳಿಸಿರುವ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸಿಡ್‌ ದಾಳಿ ನಡೆಸಲು ಕಾರಣ ಏನು ಎಂಬುದನ್ನು ನಾಗೇಶ್‌ ಬಾಯಿ ಬಿಟ್ಟಿದ್ದಾನೆ.  


"ನನಗೆ ಯುವತಿ ಮೇಲೆ ಆಸಿಡ್‌ ಹಾಕಬೇಕು ಅನ್ನೋ ಯೋಚನೆಯೇ ಇರಲಿಲ್ಲ. ನಾನು ಅನೇಕ ವರ್ಷಗಳಿಂದ ಅವಳಿಗೆ ಮದುವೆ ಆಗೋಣ ಅಂತ ಕೇಳಿದ್ದೆ. ಆದ್ರೆ ಪ್ರತಿ ಬಾರಿ ನನಗೆ ಅವಮಾನ ಮಾಡಿದ್ದಳು. ಅದರಂತೆ ಆಸಿಡ್‌ ಹಾಕುವ ಒಂದು ದಿನದ ಹಿಂದೆ ಆಕೆಯನ್ನ ಹೆದರಿಸಲು ಮಾತ್ರ ನಾನು ಆಸಿಡ್‌ ಹಾಕ್ತೀನಿ ಅಂತ ಹೇಳಿದ್ದೆ, ಆದ್ರೆ ಆಕೆ ಆ ವಿಷಯವನ್ನ ನನ್ನ ಆಣ್ಣನಿಗೆ ಹೇಳಿದ್ಲು.ಈ ವಿಚಾರವಾಗಿ ಅಣ್ಣ ಬೈದಿದ್ದ. ಇದರಿಂದ ನನಗೆ ಮನಸ್ಸು ನೊಂದಿತ್ತು. ಕೊನೆಗೆ ಆಸಿಡ್‌ ಹಾಕಿಯೇ ಬಿಡೋಣ ಅಂತ ನಿರ್ಧಾರ ಮಾಡಿ ಹೀಗೆ ಮಾಡಿದೆ" ಎಂದು ಹೇಳಿದ್ದಾನೆ.


ಇದನ್ನು ಓದಿ: Business Idea: ಇಂದೇ ಈ ಉದ್ಯಮ ಆರಂಭಿಸಿ ಸುಲಭವಾಗಿ 10 ಲಕ್ಷ ರೂ. ಸಂಪಾದಿಸಿ


ಸದ್ಯ ಸ್ಥಳ ಮಹಜರು ನಡೆಸಲು ಪೊಲೀಸರು ಮುಂದಾಗಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.