Business Idea: ಇಂದೇ ಈ ಉದ್ಯಮ ಆರಂಭಿಸಿ ಸುಲಭವಾಗಿ 10 ಲಕ್ಷ ರೂ. ಸಂಪಾದಿಸಿ

Business Opportunity: ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮ ಆರಂಭಿಸಲು ಬಯಸುತ್ತಿದ್ದರೆ. ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಡೇರಿ ಉದ್ಯಮದ ಹೆಸರಾಂತ ಕಂಪನಿಯಾಗಿರುವ  Amul ಜೊತೆ ಸೇರಿ ನೀವು ಈ ಉದ್ಯಮವನ್ನು ಆರಂಭಿಸಬಹುದು. 
 

Business Opportunity: ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮಆರಂಭಿಸಲು ಬಯಸುತ್ತಿದ್ದರೆ. ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಡೇರಿ ಉದ್ಯಮದ ಹೆಸರಾಂತ ಕಂಪನಿಯಾಗಿರುವ  Amul ಜೊತೆ ಸೇರಿ ನೀವು ಈ ಉದ್ಯಮವನ್ನು ಆರಂಭಿಸಬಹುದು. ಅಮುಲ್ ಫ್ರಂಚೈಸಿ ಆಫರ್ ನೀಡುತ್ತಿದೆ. ಕೇವಲ ಸಣ್ಣ ಪ್ರಮಾಣದ ಹೂಡಿಕೆ  ಮಾಡಿ ತಿಂಗಳಿಗೆ ಬಂಪರ್ ಗಳಿಕೆ ಮಾಡಬಹುದು. ಅಮೂಲ್ ಫ್ರಂಚೈಸಿ ಪಡೆಯುವುದು ಒಂದು ಲಾಭಕಾರಿ ವ್ಯವಹಾರವಾಗಿದೆ. ಇದರಲ್ಲಿ ಯಾವುದೇ ರೀತಿಯ ಕಿರಿಕಿರಿ ಇಲ್ಲ.

 

ಇದನ್ನೂ ಓದಿ-Business Idea: SBI ಜೊತೆ ಕೈಜೋಡಿಸಿ ಈ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ

 

ಇದನ್ನೂ ನೋಡಿ-
 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

1. ಯಾವುದೇ ರಾಯಲ್ಟಿ ಅಥವಾ ಪ್ರಾಫಿಟ್ ಶೆಯರಿಂಗ್ ಇಲ್ಲದೆ ಸಿಗುತ್ತೆ ಅಮುಲ್ ಫ್ರಂಚೈಸಿ - ಅಮುಲ್ ಯಾವುದೇ ರೀತಿಯ ರಾಯಲ್ಟಿ ಅಥವಾ ಪ್ರಾಫಿಟ್ ಶೇರಿಂಗ್ ಇಲ್ಲದೆಯೇ ಫ್ರಂಚೈಸಿ ಆಫರ್ ನೀಡುತ್ತದೆ. ಫ್ರಂಚೈಸಿ ತೆಗೆದುಕೊಳ್ಳುವ ವೆಚ್ಚ ಕೂಡ ಜಾಸ್ತಿ ಇಲ್ಲ. ಕೇವಲ 2 ರಿಂದ 6 ಲಕ್ಷ ರೂ ಹೂಡಿಕೆ ಮಾಡಿ ನೀವು ನಿಮ್ಮ ಉದ್ಯಮ ಆರಂಭಿಸಬಹುದು. ಉದ್ಯಮ ಆರಂಭದ ಮೊದಲಿನಿಂದಲೇ ನೀವು ಉತ್ತಮ ಆದಾಯ ಪಡೆಯಬಹುದು.  

2 /8

2. ಎಷ್ಟು ಹೂಡಿಕೆ ಮಾಡಬೇಕು? - ಅಮುಲ್ ಒಟ್ಟು ಎರಡು ವಿಧದ ಫ್ರಾಂಚೈಸಿ ಕೊಡುಗೆ ನೀಡುತ್ತದೆ. ಅಮುಲ್ ಔಟ್ಲೆಟ್, ಅಮುಲ್ ರೈಲ್ವೆ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ನ ಫ್ರ್ಯಾಂಚೈಸ್ ತೆಗೆದುಕೊಳ್ಳಲು ನೀವು ಬಯಸಿದರೆ, ಅದು 2 ಲಕ್ಷ ರೂ. ಹೂಡಿಕೆ ಮಾಡಬಹುದು. ಇದರಲ್ಲಿ 25 ಸಾವಿರ ರೂ. ಮರುಪಾವತಿಸದ ಬ್ರ್ಯಾಂಡ್ ಭದ್ರತೆ, ನವೀಕರಣಕ್ಕೆ 1 ಲಕ್ಷ ರೂ. 75 ಸಾವಿರ ರೂ. ಖರ್ಚಿಗೆ ನೀಡಬೇಕಾಗುತ್ತದೆ. ಫ್ರ್ಯಾಂಚೈಸೀ ಪುಟದಲ್ಲಿ ನೀವು ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು

3 /8

3. ಎರಡನೇ ಫ್ರಂಚೈಸಿಗಾಗಿ ರೂ.6 ಲಕ್ಷ ಹೂಡಿಕೆ - ಒಂದು ವೇಳೆ ನೀವು ಅಮೂಲ್ ಐಸ್ ಕ್ರೀಂ ಪಾರ್ಲರ್ (Amul Ice Cream Scooping Parlour) ತೆರೆಯಲು ಉದ್ದೇಶಿಸಿದ್ದರೆ, ಇದಕ್ಕಾಗಿ ನೀವು ಸ್ವಲ್ಪ ಹೆಚ್ಚು ಹೂಡಿಕೆ ಮಾಡಬೇಕಾಗಲಿದೆ.  ಇದಕ್ಕಾಗಿ ನೀವು 5-6 ಲಕ್ಷ ರೂ. ಹೂಡಿಕೆ ಮಾಡಬೇಕು. ಈ ಮೊತ್ತದಲ್ಲಿ  ಬಾಂಡ್ ಸಿಕ್ಯೋರಿಟಿ 50 ಸಾವಿರ ರೂ. ಇರಲಿದೆ ರಿನೋವೆಶನ್ 4 ಲಕ್ಷ ರೂ. ಹಾಗೂ ಇಕ್ವಿಪ್ಮೆಂಟ್ ಗಾಗಿ 1.50 ಲಕ್ಷ ರೂ. ಹೂಡಿಕೆ ಶಾಮೀಲಾಗಿದೆ.

4 /8

4. ಗಳಿಕೆ ಎಷ್ಟು? - ಫ್ರಂಚೈಸಿ ಮೂಲಕ ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂ. ಮಾರಾಟ ಮಾಡಬಹುದು. ಆದರೆ, ಇದು ನೀವು ಫ್ರಂಚೈಸಿ ಹೊಂದಿರುವ ಸ್ಥಳದ ಮೇಲೆ ಅವಲಂಭಿಸಿದೆ. ಅಮುಲ್ ಔಟ್ ಲೆಟ್ ಪಡೆದ ಮೇಲೆ ಕಂಪನಿ ಅಮೂಲ್ ಪ್ರಾಡಕ್ಟ್ಸ್ ಗಳ MRP ಮೇಲೆ ಕಮಿಷನ್ ನೀಡುತ್ತದೆ. ಇದರಲ್ಲಿ ಒಂದು ಹಾಲಿನ ಪೌಚ್ ಮೇಲೆ ಶೇ.2.5ರಷ್ಟು, ಹಾಲಿನ ಉತ್ಪನ್ನಗಳ ಮೇಲೆ ಶೇ.10ರಷ್ಟು ಹಾಗೂ ಐಸ್ ಕ್ರೀಂ ಮೇಲೆ ಶೇ.20 ರಷ್ಟು ಕಮಿಷನ್ ಸಿಗುತ್ತದೆ.

5 /8

5. ಅಮುಲ್ ಐಸ್ ಕ್ರೀಂ ಪಾರ್ಲರ್ ಗಳಿಕೆ ಎಷ್ಟು? - ಅಮೂಲ್ ಸ್ಕೂಪಿಂಗ್ ಐಸ್ ಕ್ರೀಂ ಸ್ಕೂಪಿಂಗ್ ಫ್ರಂಚೈಸಿ ತೆಗೆದುಕೊಂಡ ಮೇಲೆ ರೆಸಿಪಿ ಆಧಾರಿತ ಐಸ್ ಕ್ರೀಂ, ಶೇಕ್, ಪಿಜ್ಜಾ, ಸ್ಯಾಂಡ್ವಿಚ್, ಹಾಟ್ ಚಾಕ್ಲೆಟ್ ಡ್ರಿಂಕ್ ಮೇಲೆ ಶೇ 50 ರಷ್ಟು ಕಮಿಷನ್ ಸಿಗುತ್ತದೆ. ಪ್ರೀಪ್ಯಾಕ್ದ್ ಐಸ್ ಕ್ರೀಂ ಮೇಲೆ ಶೇ.20 ರಷ್ಟು ಹಾಗೂ ಅಮೂಲ್ ಪ್ರಾಡಕ್ಟ್ಸ್ ಮೇಲೆ ಕಂಪನಿ ಶೇ.10 ರಷ್ಟು ಕಮಿಷನ್ ನೀಡುತ್ತದೆ.

6 /8

6. ಫ್ರಂಚೈಸಿ ತೆಗೆದುಕೊಳ್ಳಲು ಷರತ್ತುಗಳೇನು? - ಒಂದು ವೇಳೆ ನೀವು ಕೂಡ ಅಮೂಲ್ ಔಟ್ ಲೆಟ್ ತೆರೆಯಲು ಬಯಸುತ್ತಿದ್ದರೆ, ನಿಮ್ಮ ಬಳಿ 150 ಸ್ಕ್ವೆಯರ್ ಫೂಟ್ ಜಾಗ ಇರಬೇಕು. ಒಂದು ವೇಳೆ ನಿಮ್ಮ ಬಳಿ ಇಷ್ಟು ಜಾಗದ ಶಾಪ್ ಇದ್ದರೆ, ಅಮೂಲ್ ನಿಮಗೆ ಈ ಫ್ರಂಚೈಸಿ ನೀಡಲಿದೆ. ಅಮೂಲ್ ಐಸ್ ಕ್ರೀಂ ಪಾರ್ಲರ್ ಗಾಗಿ ಕನಿಷ್ಠ ಅಂದರೆ 300 ವರ್ಗ ಫೂಟ್ ಜಾಗ ಮೇಕು. ಇದಕ್ಕಿಂತ ಕಡಿಮೆ ಜಾಗ ಇದ್ದರೆ ಅಮೂಲ್ ಫ್ರಂಚೈಸಿ ಆಫರ್ ಮಾಡುವುದಿಲ್ಲ.

7 /8

7. ಅಮೂಲ್ ನಿಮಗೆ ಯಾವ ಸಪೋರ್ಟ್ ನೀಡುತ್ತದೆ - ಅಮೂಲ್ ವತಿಯಿಂದ ನಿಮಗೆ LED ಸೈನೆಜ್ ನೀಡಲಾಗುವುದು. ಎಲ್ಲ ಉಪಕರಣಗಳು ಹಾಗೂ ಬ್ರಾಂಡಿಂಗ್ ಮೇಲೆ ಸಬ್ಸಿಡಿ ಕೊಡಿಸುತ್ತದೆ. ಇನೋಗ್ರೆಶನ್ ಸಪೋರ್ಟ್ ನೀಡಲಾಗುವುದು ಹಾಗೂ ಹೆಚ್ಚಿನ ಖರೀದಿ ಮಾಡಿದರೆ ಡಿಸ್ಕೌಂಟ್ ಕೂಡ ನೀಡುತ್ತದೆ. ಕನ್ಸೂಮರ್ ಗಾಗಿ ವಿಶೇಷ ಕೊಡುಗೆಗಳನ್ನು ಕೂಡ ನೀಡಲಾಗುತ್ತದೆ. ಪಾರ್ಲರ್ ಬಾಯ್ ಅಥವಾ ಮಾಲೀಕರಿಗೆ ಟ್ರೇನಿಂಗ್ ಕೂಡ ನೀಡಲಾಗುತ್ತದೆ. ನಿಮ್ಮ ವರೆಗೆ ಉತ್ಪನ್ನಗಳನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಅಮೂಲ್ ಮೇಲಿರಲಿದೆ. ಪ್ರತಿ ಜಿಲ್ಲೆ ಅಥವಾ ದೊಡ್ಡ ನಗರಗಳಲ್ಲಿ ಅಮೂಲ್ ಹೊಲ್ ಸೆಲ್ ಡೀಲರ್ಸ್ ಅಪಾಯಿಂಟ್ ಮಾಡುತ್ತದೆ. ಈ ಹೋಲ್ ಸೆಲ್ ಡೀಲರ್ ಗಳು ಪಾರ್ಲರ್ ವರೆಗೆ ಉತ್ಪನ್ನಗಳನ್ನು ತಲುಪಿಸುತ್ತಾರೆ.

8 /8

8. ಹೇಗೆ ಅಪ್ಲೈ ಮಾಡಬಹುದು - ಒಂದು ವೇಳೆ ನೀವು ಕೂಡ ಫ್ರಂಚೈಸಿಗಾಗಿ ಅಪ್ಲೈ ಮಾಡಲು ಬಯಸುತ್ತಿದ್ದರೆ ನೀವು retail@amul.coopಗೆ ಮೇಲ್ ಮಾಡಿ. ಸಂಪೂರ್ಣ ಪ್ರೋಸೆಸ್ ತಿಳಿದುಕೊಳ್ಳಲು ಅಮೂಲ್ ಕಂಪನಿಯ ಅಧಿಕೃತ ಲಿಂಕ್ ಆಗಿರುವ http://amul.com/m/amul-scooping-parlours ಮೇಲೆ ಕ್ಲಿಕ್ಕಿಸಿ.