ಬೆಂಗಳೂರು : ಡೇಟಿಂಗ್ ಆ್ಯಪ್‌ನಲ್ಲಿ ಹಿಂದೂ ಯುವಕನ ಹೆಸರಲ್ಲಿ ನಕಲಿ ಪ್ರೋಫೈಲ್ ಸೃಷ್ಟಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದ ಮುಸ್ಲಿಂ ಯುವಕನನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಮುದಾಸಿರ್ ಬಂಧಿತ ಆರೋಪಿಯಾಗಿದ್ದಾನೆ. ನೊಂದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಹಿಂದೂ ಯುವಕನ ಹೆಸರಲ್ಲಿ ನಕಲಿ ವಂಚಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮುದಾಸಿರ್ ಯುವತಿಯರಿಗೆ ವಂಚಿಸಲೆಂದು ಬಂಬಲ್ ಹೆಸರಿನ ಡೇಟಿಂಗ್ ಆ್ಯಪ್ ನಲ್ಲಿ ಅನಿರುಧ್ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್ ಹೊಂದಿದ್ದ. ಅದೇ ಆ್ಯಪ್ ಮೂಲಕ ಸಂಗಾತಿಯ ಹುಡುಕಾಟದಲ್ಲಿದ್ದ ಯುವತಿಗೆ ಆರೋಪಿಯ ಪರಿಚಯವಾಗಿತ್ತು. ಒಂದಷ್ಟು ದಿನ ಪರಸ್ಪರ ಸಂದೇಶಗಳು ರವಾನೆಯಾದ ಬಳಿಕ ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಆಗಿ ಇಬ್ಬರ ಮಾತುಕತೆ ಮದುವೆಯ ತನಕ ಬಂದಿತ್ತು.‌ 


ಇದನ್ನೂ ಓದಿ: ಮನೆಯ ಹಿತ್ತಲಿನಲ್ಲಿ ಅಡಗಿದ್ದವು 25 ನಾಗರ ಹಾವುಗಳು, ನೆಲದ ಅಡಿಯಿಂದ ಮೇಲೆದ್ದ ರಾಶಿ ರಾಶಿ ಉರಗಗಳು!


ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಜೊತೆಗೆ ​ನನ್ನ ತಾಯಿಗೆ ಹುಷಾರಿಲ್ಲ ಚಿಕಿತ್ಸೆಗೆ ಹಣ ಬೇಕು ಅಂತಾ ಯುವತಿ ಬಳಿ 1 ಲಕ್ಷ ಹಣವನ್ನ ಪಡೆದಿದ್ದ.‌ ನಂತರ ನನ್ನ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದ. ಕೊನೆಗೆ ಸಹೋದರನನ್ನ ನೋಡಲು ದುಬೈಗೆ ಹೋಗಿ ಬರುತ್ತೇನೆಂದು ಹೇಳಿದ್ದ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ.‌


ಇತ್ತ ಮುದಾಸಿರ್ ನನ್ನು ಸಂಪರ್ಕಿಸಲು ಪ್ರಯತ್ನಿಸಿ ಯುವತಿ ವಿಫಲವಾಗಿದ್ದಾಳೆ. ಇದರಿಂದ ಆರೋಪಿಯ ಮೇಲೆ ಅನುಮಾನಗೊಂಡ ಯುವತಿಗೆ ಆತ ಹಿಂದೂ ಯುವಕನೇ ಅಲ್ಲ, ಹಿಂದೂ ಯುವತಿಯರನ್ನ ವಂಚಿಸಲೆಂದು ಧರ್ಮ ಹಾಗೂ ಹೆಸರು ಬದಲಾಯಿಸಿಕೊಂಡಿದ್ದಾನೆ. ಆತನ ಹೆಸರು ಮುದಾಸಿರ್ ಎಂಬುದು ತಿಳಿದು ಬಂದಿದೆ. 


ಇದನ್ನೂ ಓದಿ: ನಾರಿಯರೇ ನಾಳೆಯಿಂದ ಬಸ್‌ನಲ್ಲಿ ಫ್ರೀಯಾಗಿ ಪ್ರಯಾಣಿಸಿ..! ಉಚಿತ ಖಚಿತವಾಗಿದೆ.. 


ಅಲ್ಲದೇ ಆರೋಪಿಯನ್ನ ಪತ್ತೆ ಹಚ್ಚಿದಾಗ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಮಕ್ಕಳಿರುವುದು ಗೊತ್ತಾಗಿದೆ. ಇದರಿಂದ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.ದೂರು ದಾಖಲಿಸಿಕೊಂಡ ಅಮೃತಹಳ್ಳಿ ಠಾಣಾ  ಪೊಲೀಸರು ಸದ್ಯ ಆರೋಪಿ ಮುದಾಸಿರ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.